ಯಾವುದೇ ಸಿಮ್ ಇರಲಿ, ನಿಮಗೆ ನೆಟ್ವರ್ಕ್ ಸಿಗದೇ ಇದ್ದಾಗ ಈ ಚಿಕ್ಕ ಕೆಲಸ ಮಾಡಿ, ನೆಟ್ವರ್ಕ್ ಹುಡುಕಿಕೊಂಡು ಬರುತ್ತದೆ. ಏನು ಮಾಡಬೇಕು ಗೊತ್ತೆ??

ಯಾವುದೇ ಸಿಮ್ ಇರಲಿ, ನಿಮಗೆ ನೆಟ್ವರ್ಕ್ ಸಿಗದೇ ಇದ್ದಾಗ ಈ ಚಿಕ್ಕ ಕೆಲಸ ಮಾಡಿ, ನೆಟ್ವರ್ಕ್ ಹುಡುಕಿಕೊಂಡು ಬರುತ್ತದೆ. ಏನು ಮಾಡಬೇಕು ಗೊತ್ತೆ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಕಳೆದುಕೊಂಡಿರುವ ಕಂಪನಿಗಳೆಂದರೆ ಅದು ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳು. ಆದರೆ ಇಷ್ಟೊಂದು ಸೌಲಭ್ಯವನ್ನು ಹಾಗೂ ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದರೂ ಕೂಡ ಕೆಲವೊಮ್ಮೆ ಸಿಮ್ ಉಪಯೋಗಿಸುವಾಗ ಇಂಟರ್ನೆಟ್ ಸ್ಲೋ ಆಗುವುದನ್ನು ನಾವು ಗಮನಿಸಿರುತ್ತೇವೆ.

ಹೀಗಿದ್ದ ಸಂದರ್ಭದಲ್ಲಿ ಇಂಟರ್ನೆಟ್ ಸ್ಪೀಡ್ ಮಾಡುವುದು ಹೇಗೆ ಎಂಬುದರ ಕುರಿತಂತೆ ನಿಮಗೆ ಗೊಂದಲವಿರಬಹುದು ಇಂದಿನ ಲೇಖನಿಯಲ್ಲಿ ನಾವು ಅದನ್ನು ಪರಿಹರಿಸುತ್ತೇವೆ. ಇಲ್ಲಿ ಕೆಲವೊಂದು ನಿಮಗೆ ಪರಿಹಾರ ಕ್ರಮಗಳನ್ನು ಹೇಳುತ್ತೇವೆ ತಪ್ಪದೇ ಕೊನೆವರೆಗೂ ಓದಿ ಹಾಗೂ ಈ ಸಮಸ್ಯೆಗಳನ್ನು ನೀವು ಎದುರಿಸಿದಾಗ ಇಂತಹ ಪರಿಹಾರ ಕ್ರಮಗಳನ್ನು ನೀವು ಕೂಡ ಪ್ರಯೋಗಿಸಬಹುದಾಗಿದೆ.

ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಎರಡು ಸಿಮ್ ಇದ್ದರೆ ಇಂಟರ್ನೆಟ್ ಸ್ಪೀಡ್ ಕಮ್ಮಿಯಾದಾಗ ಅವೆರಡುಗಳ ಸ್ಥಾನವನ್ನು ಅದಲು ಬದಲು ಮಾಡಿ ಹಾಕಿ ಮೊಬೈಲ್ ಸ್ವಿಚ್ ಆನ್ ಮಾಡಿದಾಗ ಇಂಟರ್ನೆಟ್ ಸ್ಪೀಡ್ ಮತ್ತೆ ತನ್ನ ಸಹಜ ಸ್ಥಿತಿಗೆ ಮರಳಬಹುದಾಗಿದೆ. ಇನ್ನು ಮೊಬೈಲ್ ನಲ್ಲಿ ಎರಡು ಸಿಮ್ ಹಾಕುವ ಅವಕಾಶ ಇದ್ದರೆ ಮೊದಲನೇ ಸಿಮ್ ನಲ್ಲಿ ನೆಟ್ವರ್ಕ್ ಚೆನ್ನಾಗಿ ಹಾಗೂ ಎರಡನೇ ಸಿಮ್ ಗಿಂತ ಹೆಚ್ಚಾಗಿ ಬರುತ್ತದೆ. ಹೀಗಾಗಿ ನೀವು ಇಂಟರ್ನೆಟ್ ಗೆ ಉಪಯೋಗಿಸುವ ಸಿಮ್ ಅನ್ನು ಮೊದಲನೇ ಸ್ಥಾನದಲ್ಲಿ ಹಾಗೂ ಕರೆಗಾಗಿ ಬಳಸುವ ಸಿಮ್ ಅನ್ನೋ ಎರಡನೇ ಸ್ಥಾನದಲ್ಲಿ ಬಳಸಿ ಇದು ನಿಮಗೆ ಇಂಟರ್ನೆಟ್ ಸ್ಪೀಡ್ ಮಾಡಲು ಇನ್ನಷ್ಟು ಸಹಕಾರಿಯಾಗುತ್ತದೆ.

ಕೇವಲ ಎಷ್ಟು ಮಾತ್ರವಲ್ಲದೆ ಇಂತಹ ಸಮಸ್ಯೆಗಳನ್ನು ನೀವು ಎದುರಿಸಿದಾಗ ಎಪಿಎನ್ ಅನ್ನು ಕೂಡ ಸರಿ ಮಾಡಬಹುದಾಗಿದೆ. ಇದಕ್ಕೆ ನೀವು ಅನುಸರಿಸಬೇಕಾಗಿರುವ ಕ್ರಮಗಳು ಏನೆಂದರೆ ಮೊದಲಿಗೆ ಮೊಬೈಲ್ ಸೆಟ್ಟಿಂಗ್ ಗೆ ಹೋಗಿ ನಂತರ ಅಲ್ಲಿ ನೆಟ್ವರ್ಕ್ ನಲ್ಲಿ ಎಪಿಎನ್ ರಿಸೆಟ್ ಮಾಡಿ ನಂತರ ಆಟೋಮೆಟಿಕ್ ನೆಟ್ವರ್ಕ್ ಫೈಂಡರ್ ಮಾಡಿದರೆ ನಿಮ್ಮ ಕಡಿಮೆ ವೇಗದ ಇಂಟರ್ನೆಟ್ ಸರಿಯಾಗಿ ತನ್ನ ಸಹಜ ಸ್ಥಿತಿಗೆ ಮರಳಿ ನಿಮಗೆ ಸರಿಯಾದ ವೇಗದ ಇಂಟರ್ನೆಟ್ ಸ್ಪೀಡ್ ಅನ್ನು ನೀಡುತ್ತದೆ. ಕೆಲವೊಂದು ಗಂಭೀರ ಪರಿಸ್ಥಿತಿಗಳಲ್ಲಿ ಇಂತಹ ಸಮಸ್ಯೆಗಳು ನಿಮಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ ಹಾಗಾಗಿ ಈ ಕ್ರಮಗಳನ್ನು ನೀವು ತಪ್ಪದೆ ನೆನಪಿಟ್ಟುಕೊಳ್ಳಿ.