ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದಲ್ಲಿ ಆತುರ ಪಟ್ಟು ಎಡವಟ್ಟು ಮಾಡಿಕೊಂಡ ಆರ್ಸಿಬಿ: ಏನು ಮಾಡಲು ಹೋಗಿ, ಏನು ಮಾಡಿದೆ ಗೊತ್ತೇ??
ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದಲ್ಲಿ ಆತುರ ಪಟ್ಟು ಎಡವಟ್ಟು ಮಾಡಿಕೊಂಡ ಆರ್ಸಿಬಿ: ಏನು ಮಾಡಲು ಹೋಗಿ, ಏನು ಮಾಡಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಶಿಖರ್ ಧವನ್ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಅದರಲ್ಲೂ ಕೂಡ ಯುವ ಭಾರತೀಯ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ನಲ್ಲಿ ನಡೆದಿರುವ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಅಧಿಕಾರಯುತವಾಗಿ ಗೆದ್ದುಕೊಂಡಿದೆ. ಮೊದಲ ಬಾರಿಗೆ ವೆಸ್ಟ್ ಇಂಡೀಸ್ ನೆಲದಲ್ಲಿ ವೈಟ್ ವಾಶ್ ಮಾಡುವ ಮೂಲಕ ಸರಣಿಯನ್ನು ಭಾರತೀಯ ಕ್ರಿಕೆಟ್ ತಂಡ ಗೆದ್ದುಕೊಂಡಿದೆ ಎಂಬ ಸುದ್ದಿಗಳು ಕೂಡ ಅಧಿಕೃತವಾಗಿ ಕೇಳಿ ಬರುತ್ತಿವೆ.
ಹಿರಿಯ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಕೂಡ ಭಾರತೀಯ ಯುವ ಕ್ರಿಕೆಟ್ ತಂಡ ಈ ರೀತಿಯ ಸಾಧನೆ ಮಾಡುತ್ತಿರುವುದು ನಿಜಕ್ಕೂ ಕೂಡ ಪ್ರಶಂಸಾರ್ಹ ಸಂಗತಿ. ಅದರಲ್ಲೂ ನಿನ್ನೆ ನಡೆದಿರುವ ಕೊನೆಯ ಏಕದಿನ ಪಂದ್ಯದಲ್ಲಿ ಆರ್‌ಸಿಬಿ ತಂಡ ಎಡವಟ್ಟು ಮಾಡಿಕೊಂಡಿತ್ತು. ಅರೆ ಇದೇನು ಎಲ್ಲಿಯ ಅಂತಾರಾಷ್ಟ್ರೀಯ ಪಂದ್ಯ ಎಲ್ಲಿಯ ಆರ್‌ಸಿಬಿ ಎಂಬುದಾಗಿ ನೀವು ಗೊಂದಲಕ್ಕೆ ಒಳಗಾಗಿರಬಹುದು. ಬನ್ನಿ ನಿಮಗೆ ಈ ಕುರಿತಂತೆ ವಿವರವಾಗಿ ನಾವು ಹೇಳುತ್ತೇವೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೊನೆಯ ಏಕದಿನ ಪಂದ್ಯವನ್ನು ಮಳೆಯ ಕಾರಣದಿಂದಾಗಿ ಮೋಟಕುಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಶುಭಮನ್ ಗಿಲ್ ರವರು 98 ಎಸೆತಗಳಲ್ಲಿ 98 ರನ್ಗಳನ್ನು ಬಾರಿಸಿದರು.
ಒಂದು ವೇಳೆ ಇಲ್ಲಿ ಶತಕವನ್ನು ಬಾರಿಸಿದ್ದರೆ ಅಂತರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಶತಕವಾಗಿ ಪರಿಣಮಿಸುತಿತ್ತು. ಆದರೆ ಮಳೆಯ ಕಾರಣದಿಂದಾಗಿ ಪಂದ್ಯ ಅರ್ಧಕ್ಕೆ ಮೋಟಕುಗಳಿಸಿದ ಕಾರಣದಿಂದಾಗಿ ಅವರಿಗೆ ಶತಕವನ್ನು ಬಾರಿಸಲು ಸಾಧ್ಯವಾಗಲಿಲ್ಲ. ಆದರೆ ಇದಕ್ಕೂ ಮುನ್ನವೇ ಆರ್‌ಸಿಬಿ ತಂಡ ತನ್ನ ಟ್ವಿಟರ್ ಖಾತೆಯಲ್ಲಿ ಶುಭಮನ್ ಗಿಲ್ ಅವರಿಗೆ ಶತಕದ ಅಭಿನಂದನೆಗಳ ಪೋಸ್ಟ್ ಅನ್ನು ಮಾಡಿತ್ತು. ಇದನ್ನು ನೋಡಿದ ಎಲ್ಲಾ ಆರ್‌ಸಿಬಿ ಹಾಗೂ ಕ್ರಿಕೆಟ್ ಅಭಿಮಾನಿಗಳು ಸ್ಕ್ರೀನ್ ಶಾಟ್ ಹೊಡೆದು ಪೋಸ್ಟ್ ಮಾಡುವ ಮೂಲಕ ಆರ್‌ಸಿಬಿಯನ್ನು ಗೇಲಿಮಾಡಲು ಪ್ರಾರಂಭಿಸಿದ್ದರು. ಕೊನೆಗೂ ತನ್ನ ತಪ್ಪನ್ನು ಅರಿತ ಆರ್ಸಿಬಿ ತಂಡ ಈ ಪೋಸ್ಟ್ ಅನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದೆ. ಅದೇನೇ ಇರಲಿ ಅರ್ಜೆಂಟಾಗಿ ಪೋಸ್ಟ್ ಮಾಡುವ ಮೂಲಕ ಹಾಸ್ಯಕ್ಕೆ ಒಳಗಾಗಿದ್ದಂತೂ ಸುಳ್ಳಲ್ಲ.