ಆರ್ಸಿಬಿ ಬಿಡುಗಡೆ ಮಾಡಬಹುದಾದ ನಾಲ್ಕು ಆಟಗಾರರನ್ನು ಹೆಸರಿಸಿದ ಕ್ರಿಕೆಟ್ ಪಂಡಿತ ಆಕಾಶ್ ಚೋಪ್ರಾ: ಯಾರ್ಯರಂತೆ ಗೊತ್ತೇ??

ಆರ್ಸಿಬಿ ಬಿಡುಗಡೆ ಮಾಡಬಹುದಾದ ನಾಲ್ಕು ಆಟಗಾರರನ್ನು ಹೆಸರಿಸಿದ ಕ್ರಿಕೆಟ್ ಪಂಡಿತ ಆಕಾಶ್ ಚೋಪ್ರಾ: ಯಾರ್ಯರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಈ ಬಾರಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ವಾಲಿಫೈಯರ್ 2 ಹಂತಕ್ಕೆ ತಲುಪುವಲು ಮಾತ್ರ ಯಶಸ್ವಿಯಾಗಿದೆ. ಬಲಿಷ್ಠವಾದ ತಂಡವನ್ನು ಹೊಂದಿದ ನಂತರವೂ ಕೂಡ ಸತತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತವಾಗಿ ಎಡವಿರುವುದು ನಿಜಕ್ಕೂ ಕೂಡ ಮುಂದಿನ ಸೀಸನ್ನಲ್ಲಿ ತಂಡದ ಬದಲಾವಣೆ ಮಾಡಲೇಬೇಕು ಎನ್ನುವ ನಿರ್ಧಾರಕ್ಕೆ ಟೀಮ್ ಮ್ಯಾನೇಜ್ಮೆಂಟ್ ಬರಬಹುದು ಎನ್ನುವ ಸುದ್ದಿ ಕೇಳಿಬರುತ್ತಿದೆ. ಹೌದು ಗೆಳೆಯರೇ ಅದಕ್ಕೆ ಪೂರಕ ಎನ್ನುವಂತೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಸದ್ಯಕ್ಕೆ ಕಾಮೆಂಟೇಟರ್ ಆಗಿ ಮಿಂಚು ಹರಿಸುತ್ತಿರುವ ಆಕಾಶ್ ಚೋಪ್ರಾ ರವರು ಕೂಡ ಈ ಕುರಿತಂತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದ್ಯದ ಫಾರ್ಮ್ ಕುರಿತಂತೆ ಮಾತನಾಡುತ್ತ ಮುಂದಿನ ಐಪಿಎಲ್ ನಲ್ಲಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕು ಆಟಗಾರರನ್ನು ತಂಡದಿಂದ ಕೈಬಿಡಲಿದೆ ಎಂಬುದಾಗಿ ಹೇಳಿದ್ದಾರೆ. ಹಾಗಿದ್ದರೆ 2023 ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರ ಹೋಗಬಲ್ಲಂತಹ 4 ಆಟಗಾರರು ಯಾರು ಎಂಬುದನ್ನು ತಿಳಿಯೋಣ ಬನ್ನಿ. ಮೊದಲನೇದಾಗಿ ಮೊಹಮ್ಮದ್ ಸಿರಾಜ್. ಈ ಬಾರಿ ಸಂಪೂರ್ಣವಾಗಿ ಐಪಿಎಲ್ನಲ್ಲಿ ಸಿರಾಜ್ ರವರು ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಾರದು. 15 ಪಂದ್ಯಗಳಿಂದ ಕೇವಲ 9 ವಿಕೆಟ್ ಕಬಳಿಸಿ ರುವ ಸಿರಾಜ್ ಹತ್ತಿರ ಸರಾಸರಿಯಲ್ಲಿ ರನ್ನುಗಳನ್ನು ನೀಡಿ ದುಬಾರಿ ಯಾಗಿದ್ದಾರೆ. ಹೀಗಾಗಿ ಅವರನ್ನು ಮುಂದಿನ ಐಪಿಎಲ್ ನಿಂದ ತಂಡದಿಂದ ಕಿತ್ತೊಗೆಯಬಹುದು.

ಇವರ ಜೊತೆಗೆ 3.4 ಕೋಟಿ ರೂಪಾಯಿಗೆ ಆರ್ಸಿಬಿ ತಂಡದ ಪಾಲಾಗಿರುವ ಆರಂಭಿಕ ಆಟಗಾರ ಅನುಜ್ ರಾವತ್ ಈ ಬಾರಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಮಿಂಚಿದರು ಉಳಿದ ಎಲ್ಲಾ ಪಂದ್ಯಗಳಲ್ಲಿ ಕೂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಇದಾದನಂತರ ಆಲ್-ರೌಂಡರ್ ಆಟಗಾರ ಆಗಿರುವ ರುದರ್ಫೋರ್ಡ್ ರವರು ಕೆಲ ಪಂದ್ಯಗಳಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಬರುವುದಕ್ಕೂ ಮುನ್ನ ಆಡಿದ್ದರು. ಗ್ಲೆನ್ ಮ್ಯಾಕ್ಸ್ವೆಲ್ ಬಂದ ನಂತರ ಅವರು ಮತ್ತೆ ಬೆಂಚ್ ಕಾಯಬೇಕಾಯಿತು. ಇವರ ಜೊತೆಗೆ ಡೇವಿಡ್ ವಿಲ್ಲಿ ಕೂಡ ಹೆಝಲ್ ವುಡ್ ರವರ ಆಗಮನದಿಂದ ಬೆಂಜ್ ಕಾಯುತ್ತಿದ್ದು ತಂಡದಿಂದ ಹೊರ ಹೋಗಬಹುದಾದ ಸಾಧ್ಯತೆ ಹೆಚ್ಚಾಗಿದೆ. ಈ ನಾಲ್ಕು ಆಟಗಾರರನ್ನು ತಂಡದಿಂದ ಮುಂದಿನ ಸೀಸನ್ನಲ್ಲಿ ಆರ್ಸಿಬಿ ಹೊರಹಾಕಬಹುದು ಎನ್ನುವುದಾಗಿ ಆಕಾಶ್ ಚೋಪ್ರಾ ನುಡಿದಿದ್ದಾರೆ.