ಐಪಿಎಲ್ ಟೂರ್ನಿಯಿಂದ ರಾಜಸ್ತಾನದ ವಿರುದ್ಧ ಸೋತು ಹೊರಬೀಳುತ್ತಿದ್ದಂತೆ ಆರ್ಸಿಬಿ ತಂಡ ಅಭಿಮಾನಿಗಳು ಹೇಳಿದ್ದೇನು ಗೊತ್ತೇ??

ಐಪಿಎಲ್ ಟೂರ್ನಿಯಿಂದ ರಾಜಸ್ತಾನದ ವಿರುದ್ಧ ಸೋತು ಹೊರಬೀಳುತ್ತಿದ್ದಂತೆ ಆರ್ಸಿಬಿ ತಂಡ ಅಭಿಮಾನಿಗಳು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿವರ್ಷದಂತೆ ಈ ಬಾರಿಯೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲದೆ ಕ್ವಾಲಿಫೈಯರ್ 2 ಹಂತದಿಂದ ನಿರ್ಗಮಿಸಿದೆ. ಹೌದು ಗೆಳೆಯರೇ ಈ ಬಾರಿ ಬಾರಿ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲುವಂತಹ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಈ ಬಾರಿ ಖಂಡಿತವಾಗಿ ನಾವು ಕಪ್ ಗೆದ್ದೇಗೆಲ್ಲುತ್ತೇವೆ ಎನ್ನುವುದಾಗಿ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಘರ್ಜಿಸುತ್ತಿದ್ದರು. ನೀವು ಸರಿಯಾಗಿ ಗಮನಿಸುವುದಾದರೆ ಈ ಬಾರಿಯ ಐಪಿಎಲ್ ನಲ್ಲಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಾಕಷ್ಟು ಅದೃಷ್ಟ ಜೊತೆ ಕೂಡ ಸಿಕ್ಕಿತು.

ಲೀಗ್ ಹಂತದಲ್ಲಿ ನೋಡುವುದಾದರೆ ಅಂಕಗಳನ್ನು ಗಳಿಸಿದ್ದರು ಕೂಡ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಿದ್ದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ತಂಡಗಳ ನಡುವಿನ ಪಂದ್ಯದ ಮೇಲೆ ಅವಲಂಬಿತವಾಗಿತ್ತು. ಮುಂಬೈ ತಂಡ ಗೆದ್ದ ಕಾರಣದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಹಿಂದಿಕ್ಕಿ ಪ್ಲೇಆಫ್ ಹಂತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುನ್ನಡಿ ಇಟ್ಟಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಕೂಡ ಲಕ್ನೋ ನಂತಹ ಅತ್ಯಂತ ಬಲಿಷ್ಠ ತಂಡದ ಎದುರಿಗೆ ಸುಲಭ ರೀತಿಯಲ್ಲಿ ಗೆದ್ದಿತ್ತು.

ಈ ಬಾರಿ ಖಂಡಿತವಾಗಿ ನಾವೇ ಚಾಂಪಿಯನ್ ತಂಡ ಆಗುತ್ತೇವೆ ಎನ್ನುವುದಾಗಿದೆ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಸೋಶಿಯಲ್ ಮೀಡಿಯಾ ದ ತುಂಬೆಲ್ಲ ತಮ್ಮ ತಂಡವನ್ನು ಸಮರ್ಥಿಸಿಕೊಳ್ಳಲು ಆರಂಭಿಸಿದ್ದರು. ಈ ಸಲ ಕಪ್ ನಮ್ದೇ ಎನ್ನುವುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಕೂಡ ಸಾಕಷ್ಟು ಭರವಸೆಯಿಂದ ಇದ್ದರು. ಆದರೆ ಮೇ 27ರಂದು ನಡೆಯಲಿರುವ ಸೆಮಿಫೈನಲ್ ಮಾದರಿಯ ಕ್ವಾಲಿಫೈಯರ್ 2 ಪಂದ್ಯದಲ್ಲಿ ಬಲಿಷ್ಠ ರಾಜಸ್ತಾನ ರಾಯಲ್ಸ್ ತಂಡದ ಎದುರಿಗೆ ಸುಲಭವಾಗಿ ಸೋತು ಶರಣಾಯಿತು.

ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಕೂಡ ಸಂಪೂರ್ಣವಾಗಿ ಕಳಪೆ ಪ್ರದರ್ಶನ ನೀಡಿದೆ ಎಂದರೆ ತಪ್ಪಾಗಲಾರದು. ಈ ಪಂದ್ಯವನ್ನು ಸೋತ ನಂತರ ಈಗ ಅಭಿಮಾನಿಗಳು ಯಾವರೀತಿಯಲ್ಲಿ ಆರ್ಸಿಬಿ ತಂಡದ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುತ್ತಿದ್ದಾರೆ ಗೊತ್ತಾ.

ಹೌದು ಗೆಳೆಯರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕುರಿತಂತೆ ಅಭಿಮಾನಿಗಳು ಸೋತ ನಂತರವೂ ಕೂಡ ಇದು ನಮ್ಮ ತಂಡ ಇಂದಲ್ಲ ನಾಳೆ ನಾವು ಗೆದ್ದೇಗೆಲ್ಲುತ್ತೇವೆ ಎನ್ನುವುದು ತಮ್ಮ ತಂಡವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹದಿನೈದು ವರ್ಷಗಳಿಂದ ಕಾದಿದ್ದೇವೆ ಇನ್ನೊಂದು ವರ್ಷ ಕಾಯುತ್ತೇವೆ ಆದರೆ ಆರ್ಸಿಬಿ ತಂಡಕ್ಕೆ ಸಪೋರ್ಟ್ ಮಾಡುವುದನ್ನು ಮಾತ್ರ ಬಿಡುವುದಿಲ್ಲ ಎಂಬುದಾಗಿ ಹೇಳುತ್ತಿದ್ದಾರೆ. ನಿಜಕ್ಕೂ ಇಂತಹ ಪ್ರಾಮಾಣಿಕ ಅಭಿಮಾನಿಗಳನ್ನು ನೀವು ಬೇರೆ ಯಾವುದೇ ತಂಡದಲ್ಲಿ ಕೂಡ ಕಾಣಲು ಸಾಧ್ಯವಿಲ್ಲ ಎಂಬುದಾಗಿ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.