ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಪರವಾಗಿ ಆಡುವುದಕ್ಕಾಗಿ ರಜತ್ ಪಾಟಿದಾರ್ ಅವರು ಏನು ಮಾಡಿದ್ರು ಗೊತ್ತಾ, ಎಷ್ಟೆಲ್ಲ ತ್ಯಾಗ ಮಾಡಿದ್ದಾರೆ ಗೊತ್ತೇ?

ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಪರವಾಗಿ ಆಡುವುದಕ್ಕಾಗಿ ರಜತ್ ಪಾಟಿದಾರ್ ಅವರು ಏನು ಮಾಡಿದ್ರು ಗೊತ್ತಾ, ಎಷ್ಟೆಲ್ಲ ತ್ಯಾಗ ಮಾಡಿದ್ದಾರೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಒತ್ತಡದ ನಡುವೆಯೂ ಕೂಡ ಎಲಿಮಿನೇಟರ್ ಪಂದ್ಯದಲ್ಲಿ ರಜತ್ ಪಾಟಿದಾರ್ ರವರು ಅನುಭವಿ ಆಟಗಾರನಂತೆ ಬ್ಯಾಟ್ ಬೀಸಿದ್ದು ಎಲ್ಲರ ಮನಗೆದ್ದಿದೆ. ಹೌದು ಗೆಳೆಯರೆ ರಾಜತ್ ಪಾಟಿದಾರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ತಂಡದ ವಿರುದ್ಧ ಅಧಿಕಾರಯುತ 207 ರನ್ನುಗಳನ್ನು ಬಾರಿಸಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ರಜತ್ ಪಾಟಿದಾರ್ ಆಗಿದ್ದಾರೆ ಎನ್ನುವುದನ್ನು ಅನುಮಾನವಿಲ್ಲದೆ ಹೇಳಬಹುದಾಗಿದೆ.

ಅವರ ಕುರಿತಂತೆ ಇನ್ನಷ್ಟು ವಿವರವಾಗಿ ಹೇಳುವುದಾದರೆ ರಜತ್ ಪಾಟಿದಾರ್ ಅವರು ಈ ಬಾರಿಯ ಮೆಗಾ ಹರಾಜಿನಲ್ಲಿ ಸೇಲ್ ಆಗದೆ ಉಳಿದುಕೊಂಡಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಆಗಿದ್ದ ಸಿಸೋಡಿಯಾ ರವರು ಇಂಜುರಿ ಯಿಂದ ತಂಡದಿಂದ ಹೊರಕ್ಕೆ ಹೋದ ಕಾರಣದಿಂದಾಗಿ ರಜತ್ ಪಾಟಿದಾರ್ ಅವರನ್ನು ಅವರ ಬದಲಿಗೆ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಲಾಗಿತ್ತು. ಇದುವರೆಗೂ ಈ ಬಾರಿಯ ಐಪಿಎಲ್ ನಲ್ಲಿ ರಜತ್ ಪಾಟಿದಾರ್ ರವರು ಆಡಿರುವ ಎಲ್ಲಾ ಪಂದ್ಯಗಳನ್ನು ಕೂಡ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಅದರಲ್ಲಿಯೂ ಪ್ರಮುಖವಾಗಿ ಲಕ್ನೋ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿಯ ಮನದಲ್ಲಿ ರಾಜನಂತೆ ವಿರಾಜಮಾನರಾಗಿದ್ದಾರೆ.

ಇಷ್ಟೊಂದು ಭರವಸೆಯ ಪ್ರದರ್ಶನವನ್ನು ಸತತವಾಗಿ ಪ್ರತಿಯೊಂದು ಪಂದ್ಯಗಳಲ್ಲಿ ನೀಡುತ್ತಿರುವ ರಜತ್ ಪಾಟಿದಾರ್ ಅವರ ಕುರಿತಂತೆ ಒಂದು ವಿಷಯ ಈಗ ಬೆಳಕಿಗೆ ಬಂದಿದ್ದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಕೂಡ ಅವರ ಕ್ರಿಕೆಟ್ ಪ್ರೀತಿಗೆ ಬೆರಗಾಗಿದ್ದಾರೆ. ಹೌದು ಗೆಳೆಯರೇ ಈ ಬಾರಿಯ ಐಪಿಎಲ್ ನಲ್ಲಿ ಆರ್ಸಿಬಿ ತಂಡದಲ್ಲಿ ಆಡುವುದಕ್ಕಾಗಿ ರಜತ್ ಪಾಟಿದಾರ್ ತಮ್ಮ ಮದುವೆಯನ್ನು ಮುಂದೂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯರೆ ಇದನ್ನು ನಂಬಲು ಕಷ್ಟವಾದರೂ ಕೂಡ ಇದೇ ಸತ್ಯವಾಗಿದೆ.

ಇದೇ ಫೆಬ್ರವರಿ ಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಯಾವುದೇ ತಂಡಕ್ಕೆ ಕೂಡ ರಜತ್ ಪಾಟಿದಾರ್ ಅವರು ಹರಾಜ್ ಆಗಿರಲಿಲ್ಲ. ಈ ಕಾರಣದಿಂದಾಗಿಯೇ ಮೇ ತಿಂಗಳಿನಲ್ಲಿ ಮದುವೆಯಾಗುವ ನಿರ್ಧಾರವನ್ನು ರಜತ್ ಪಾಟಿದಾರ್ ರವರು ತೆಗೆದುಕೊಂಡಿದ್ದರು. ಆದರೆ ಮಧ್ಯದಲ್ಲಿಯೇ ಆರ್ಸಿಬಿ ತಂಡದಿಂದ ತಂಡವನ್ನು ಸೇರಲು ಆಹ್ವಾನದ ಕರೆ ಬಂದ ಕಾರಣದಿಂದಾಗಿ ತಮ್ಮ ಮದುವೆಯನ್ನು ಕೊಂಚಮಟ್ಟಿಗೆ ನಿಲ್ಲಿಸಿ ಆರ್ಸಿಬಿ ತಂಡದ ಆಹ್ವಾನವನ್ನು ಸ್ವೀಕರಿಸುವ ಮೂಲಕ ಐಪಿಎಲ್ ಅನ್ನು ತಮ್ಮ ಸಾಮರ್ಥ್ಯದ ಅನಾವರಣಕ್ಕಾಗಿ ಬಳಸಿಕೊಳ್ಳುವ ನಿರ್ಧಾರವನ್ನು ರಜತ್ ಪಾಟಿದಾರ್ ಅವರು ಮಾಡುತ್ತಾರೆ.

ಈ ಕುರಿತಂತೆ ಸಂದರ್ಶನದಲ್ಲಿ ರಜತ್ ಪಾಟಿದಾರ್ ಅವರ ತಂದೆ ಮನೋಹರ್ ಪಾಟಿದಾರ್ ಅವರು ಹೇಳುವಂತೆ ಅವರ ಮಗನ ಮದುವೆ ಮೇ ತಿಂಗಳಿನಲ್ಲಿ ನಡೆಯಬೇಕಾಗಿತ್ತು. ಕೇವಲ ಕುಟುಂಬಸ್ಥರು ಹಾಗೂ ಅತ್ಯಂತ ಆಪ್ತ ಸ್ನೇಹಿತರನ್ನು ಮಾತ್ರ ಒಳಗೊಂಡಂತಹ ಈ ಮದುವೆ ಸರಳವಾಗಿ ಹೋಟೆಲ್ ನಲ್ಲಿ ನಡೆಸುವ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು. ಸದ್ಯಕ್ಕೆ ರಜತ್ ಪಾಟಿದಾರ್ ಅವರು ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಪರವಾಗಿ ಆಡುತ್ತಿದ್ದು ಐಪಿಎಲ್ ಮುಗಿದ ನಂತರ ರಣಜಿ ಪಂದ್ಯಕ್ಕೆ ಕೂಡ ಅವರು ಹಾಜರಾಗಬೇಕಾಗಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ರಜತ್ ಪಾಟಿದಾರ್ ಅವರ ತಂದೆ ಹೇಳುವ ಪ್ರಕಾರ ಇವರ ಮದುವೆ ಜುಲೈ ತಿಂಗಳಿನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂಬುದಾಗಿ ಕೇಳಿಬರುತ್ತಿದೆ.

ಕಳೆದ ಬಾರಿಯ ಐಪಿಎಲ್ ನಲ್ಲಿ ಕೂಡ ರಜತ್ ಪಾಟಿದಾರ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿ ಉಳಿದುಕೊಂಡಿದ್ದರು. ಆದರೆ ಸಿಕ್ಕಿರುವ ಅವಕಾಶದಲ್ಲಿ ನಾಲ್ಕು ಪಂದ್ಯಗಳಿಂದ ಕೇವಲ 71 ರನ್ನುಗಳನ್ನು ಮಾತ್ರ ಗಳಿಸಲು ಶಕ್ತರಾಗಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ಅವರನ್ನು ಖರೀದಿಸುವ ಮನಸ್ಸನ್ನು ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಮಾಡಿಲ್ಲ ಎಂದು ಹೇಳಬಹುದಾಗಿದೆ. ಆದರೆ ಸಿಸೋಡಿಯಾ ರವರ ಇಂಜುರಿಯ ಕಾರಣದಿಂದಾಗಿ ಅವರನ್ನು ಮೂಲಬೆಲೆ ಅಂದರೆ 20 ಲಕ್ಷ ರೂಪಾಯಿ ಬೆಲೆಗೆ ಸಿಸೋಡಿಯಾ ರವರ ಬದಲಿಗೆ ತಂಡದಲ್ಲಿ ರಜತ್ ಪಾಟಿದಾರ್ ರವರನ್ನು ಸೇರಿಸಿಕೊಳ್ಳಲಾಗಿತ್ತು.

ಇನ್ನು ಲಕ್ನೋ ತಂಡದ ವಿರುದ್ಧ ರಜತ್ ಪಾಟಿದಾರ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ನೋಡಿದ ನಂತರ ಸ್ವತಹ ಕಿಂಗ್ ಕೊಹ್ಲಿ ರವರೆ ರಜತ್ ಪಾಟಿದಾರ್ ಅವರ ಬ್ಯಾಟಿಂಗ್ ಪ್ರದರ್ಶನದ ಕುರಿತಂತೆ ಹೊಗಳಿ ತಲೆದೂಗಿದ್ದಾರೆ. ನಿರ್ಣಾಯಕ ಪಂದ್ಯದಲ್ಲಿ ಲಕ್ನೋ ವಿರುದ್ಧ ಶತಕವನ್ನು ಬಾರಿಸುವ ಮೂಲಕ ಯಾವುದೇ ಒತ್ತಡವಿಲ್ಲದೆ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿರುವ ರಜತ್ ಪಾಟಿದಾರ್ ರವರ ನಿರ್ಭೀತ ಬ್ಯಾಟಿಂಗ್ ಶೈಲಿಗೆ ನಾನು ಅಭಿಮಾನಿ ಆಗಿದ್ದೇನೆ ಎಂಬುದಾಗಿ ಕೂಡ ವಿರಾಟ್ ಕೊಹ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

ಒಟ್ಟಾರೆಯಾಗಿ ಐಪಿಎಲ್ ನಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿ ತಾನು ಯಾರು ಎಂದು ಹಾಗು ತನ್ನ ಮಹತ್ವ ಏನು ಎಂಬುದನ್ನು ಆರ್ಸಿಬಿ ತಂಡದಲ್ಲಿ ಆಡುವ ಮೂಲಕ ಕ್ರಿಕೆಟ್ ಜಗತ್ತಿಗೆ ಸಾಬೀತು ಪಡಿಸಿರುವ ರಜತ್ ಪಾಟಿದಾರ್ ರವರು ತಮ್ಮ ಕ್ರಿಕೆಟ್ ಗಾಗಿ ಮದುವೆಯನ್ನೇ ಮುಂದು ಹೂಡಿರುವುದು ನಿಜಕ್ಕೂ ಕೂಡ ಎಲ್ಲರ ಮನಗೆದ್ದಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.