ಸತತ ಮೂರು ಸೋಲಿನ ಬಳಿಕ ಚೆನ್ನೈ ವಿರುದ್ಧ ಗೆದ್ದ ಆರ್ಸಿಬಿ ತಂಡ. ಅಂಕಪಟ್ಟಿಯ ಟೇಬಲ್ ನಲ್ಲಿ ಬಾರಿ ಬದಲಾವಣೆ. ಯಾವ್ಯಾವ ತಂಡಗಳು ಯಾವ ಸ್ಥಾನ ಗೊತ್ತೇ??

ಸತತ ಮೂರು ಸೋಲಿನ ಬಳಿಕ ಚೆನ್ನೈ ವಿರುದ್ಧ ಗೆದ್ದ ಆರ್ಸಿಬಿ ತಂಡ. ಅಂಕಪಟ್ಟಿಯ ಟೇಬಲ್ ನಲ್ಲಿ ಬಾರಿ ಬದಲಾವಣೆ. ಯಾವ್ಯಾವ ತಂಡಗಳು ಯಾವ ಸ್ಥಾನ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿ ರೋಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲರ್ಧದಲ್ಲಿ ಸತತವಾಗಿ ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್ ಹಂತಕ್ಕೆ ಸುಲಭವಾಗಿ ತೇರ್ಗಡೆ ಆಗುವಂತಹ ಸೂಚನೆಯನ್ನು ನೀಡಿತ್ತು. ಆದರೆ ದ್ವಿತಿಯಾರ್ಧ ಪ್ರಾರಂಭವಾಗುತ್ತಿದ್ದಂತೆ ತಂಡ ಸಂಪೂರ್ಣ ಕಳಪೆ ಪ್ರದರ್ಶನವನ್ನು ನೀಡುವ ಮೂಲಕ ಅಭಿಮಾನಿಗಳಿಗೆ ನಿರಾಶೆಯನ್ನು ಮೂಡಿಸಿತ್ತು. ಹೌದು ಗೆಳೆಯರೇ ದ್ವಿತೀಯಾರ್ಧದಲ್ಲಿ ಒಂದು ಲೆಕ್ಕದಲ್ಲಿ ಹೇಳುವುದಾದರೆ ಮಾಡಿದಂತಹ ಎಲ್ಲಾ ಪಂದ್ಯಗಳನ್ನು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತಿತ್ತು.

ಕೊನೆಗೂ ಹ್ಯಾಟ್ರಿಕ್ ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗೆಲ್ಲುವ ಮೂಲಕ ಕೇವಲ ಗೆದ್ದಿದ್ದು ಮಾತ್ರವಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಈ ಪ್ಲೇಆಫ್ ರೇಸ್ ನಿಂದ ಈ ಬಾರಿಯ ಸೀಸನ್ ನಿಂದ ಹೊರ ಹಾಕಿದೆ ಎಂಬುದಾಗಿ ಹೇಳಬಹುದಾಗಿದೆ. ಇನ್ನು ದ್ವಿತಿಯಾರ್ಧದ ಚರಣ ಆರಂಭವಾದ ದಿನದಿಂದಲೂ ಕೂಡ ಸಾಕಷ್ಟು ಹಿನ್ನಡೆಯನ್ನು ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗೆದ್ದನಂತರ ಪಾಯಿಂಟ್ಸ್ ಟೇಬಲ್ ನಲ್ಲಿ ಯಾವ ರೀತಿಯ ಬದಲಾವಣೆಗೆ ಕಾರಣವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಗಳು ತೋರಿಸಿದ ಶಿಸ್ತುಬದ್ಧ ಆಟಕ್ಕೆ ನಾವು ಸಲಾಂ ಹೇಳಲೇಬೇಕು. ಈ ಮೂಲಕ ಪಾಯಿಂಟ್ಸ್ ಟೇಬಲ್ ನಲ್ಲಿ ಆರು ಗೆಲುವಿನೊಂದಿಗೆ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಚಾಲೆಂಜರ್ಸ್ ಬೆಂಗಳೂರು ತಂಡವಿದೆ. ಸುರಕ್ಷಿತವಾಗಿ ಪ್ಲೇಆಫ್ ಹಂತಕ್ಕೆ ತಲುಪಲು ಉಳಿದಿರುವಂತಹ ಮೂರು ಪಂದ್ಯಗಳಲ್ಲಿ ರಾಜ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಬೇಕಾಗಿದೆ. ಗುಜರಾತ್ 16 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿ ಲಕ್ನೋ 14 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ರಾಜಸ್ಥಾನ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಹಾಗೂ 5ನೇ ಸ್ಥಾನದಲ್ಲಿ ಸನ್ರೈಸರ್ಸ್ ಹೈದರಾಬಾದ್ 10 ಅಂಕಗಳೊಂದಿಗೆ ಪ್ಲೇ ಆಫ್ ರೇಸ್ ನಲ್ಲಿ ಇರುವಂತಹ ತಂಡಗಳಾಗಿವೆ. ಖಂಡಿತವಾಗಿ ಐಪಿಎಲ್ ನ ಕೊನೆಯ ಚರಣದಲ್ಲಿ ರೋಚಕ ಪಂದ್ಯಗಳು ಪ್ರೇಕ್ಷಕರ ಮನ ಗೆಲ್ಲುವುದು ಗ್ಯಾರಂಟಿ.