ಸೋಲಿಲ್ಲದ ಸರದಾರನಾಗಿ ಬೀಗುತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡದ ಹುಟ್ಟಡಗಿಸಿದ ಆರ್ಸಿಬಿ. ಹೇಗೆ ಗೊತ್ತೇ?? ಪಂದ್ಯ ನಿಜಕ್ಕೂ ಹೇಗಿತ್ತು ಗೊತ್ತೇ??

ಸೋಲಿಲ್ಲದ ಸರದಾರನಾಗಿ ಬೀಗುತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡದ ಹುಟ್ಟಡಗಿಸಿದ ಆರ್ಸಿಬಿ. ಹೇಗೆ ಗೊತ್ತೇ?? ಪಂದ್ಯ ನಿಜಕ್ಕೂ ಹೇಗಿತ್ತು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ಐಪಿಎಲ್ ಅದರಲ್ಲೂ ವಿಶೇಷವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಆಟದ ಮೂಲಕ ಶುಭಾರಂಭವನ್ನು ಮಾಡಿದೆ ಎಂದು ಹೇಳಬಹುದಾಗಿದೆ. ಈ ಬಾರಿ ವಿರಾಟ್ ಕೊಹ್ಲಿ ರವರು ನಾಯಕನ ಸ್ಥಾನದಿಂದ ಕೆಳಗಿಳಿದಿದ್ದು ಹಾಗೂ ಎಬಿ ಡಿವಿಲಿಯರ್ಸ್ ರವರು ತಂಡವನ್ನು ತೊರೆದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ದುಃಖವನ್ನು ನೀಡಿತ್ತು ನಿಜ.

ಆದರೆ ವಿರಾಟ್ ಕೊಹ್ಲಿ ರವರ ನಾಯಕನ ಸ್ಥಾನವನ್ನು ಡುಪ್ಲೆಸಿಸ್ ರವರು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದಾರೆ. ಇನ್ನು ಎಬಿ ಡಿವಿಲಿಯರ್ಸ್ ರವರ ಫಿನಿಶರ್ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜವಾಬ್ದಾರಿಯನ್ನು ಸದ್ಯಕ್ಕೆ ದಿನೇಶ್ ಕಾರ್ತಿಕ್ ರವರು ನಿರೀಕ್ಷೆಗಿಂತ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಇವರಿಗೆ ಸಾಥ್ ನೀಡುವುದಕ್ಕೆ ಗ್ಲೆನ್ ಮ್ಯಾಕ್ಸ್ವೆಲ್ ರವರು ಕೂಡ ಇದ್ದಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡುತ್ತಿದೆ.

ಇನ್ನು ನಿನ್ನೆ ನಡೆದಿರುವ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮುಖಾಮುಖಿಯಲ್ಲಿ ನಮ್ಮೆಲ್ಲರ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ವಿಕೆಟ್ ಗಳಿಂದ ಗೆದ್ದಿದೆ. ಟಾಸ್ ಗೆದ್ದ ಡುಪ್ಲೆಸಿಸ್ ರವರು ರಾಜಸ್ಥಾನ ರಾಯಲ್ಸ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. 20 ಓವರುಗಳಲ್ಲಿ 3 ವಿಕೆಟ್ ಗಳನ್ನು ಕಳೆದುಕೊಂಡು 169 ರನ್ ಗಳಿಸಿದ ರಾಜಸ್ಥಾನ ರಾಯಲ್ಸ್ ತಂಡ 170 ರನ್ನುಗಳ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೀಡಿತು.

ರಾಜಸ್ಥಾನ ರಾಯಲ್ಸ್ ಇಷ್ಟೊಂದು ಚೆನ್ನಾಗಿ ಸ್ಪರ್ಧಾತ್ಮಕ ಗುರಿಯನ್ನು ನೀಡಲು ಸಾಧ್ಯವಾಗಿದ್ದು ಬಟ್ಲರ್ ಹಾಗೂ ಹೆಟ್ಮೈಯರ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ. ಅದರಲ್ಲೂ ಕೊನೆಯಲ್ಲಿ ಬಟ್ಲರ್ ಅವರು ಅಗ್ರೆಸ್ಸಿವ್ ಆಟದಿಂದಾಗಿ ತಂಡವನ್ನು ಉತ್ತಮ ಮೊತ್ತಕ್ಕೆ ಕರೆ ತಂದಿದ್ದಾರೆ. ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಗಳು ವಿಕೆಟ್ ಕೀಳುವಲ್ಲಿ ಕೊಂಚಮಟ್ಟಿಗೆ ವಿಫಲರಾಗಿದ್ದಾರೆ ಎಂದು ಹೇಳಬಹುದಾಗಿದೆ. ರಾಜಸ್ಥಾನ ರಾಯಲ್ಸ್ ನೀಡಿದಂತಹ 170 ರನ್ನುಗಳ ಗುರಿಯನ್ನು ಕೊನೆಯ ಐದು ಎಸೆತಗಳು ಬಾಕಿ ಉಳಿದಿರುವಂತೆ ಬಾರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಿದೆ.

ತಂಡವನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ಮನ್ಗಳು ಅದರಲ್ಲೂ ಆರಂಭಿಕ ಆಟಗಾರರಾಗಿರುವ ಡುಪ್ಲೆಸಿಸ್ ಹಾಗೂ ಅನುಜ್ ರವತ್ 55 ರನ್ನುಗಳ ಜೊತೆಯಾಟ ಆಡಿರುತ್ತಾರೆ. ಆದರೆ ಆರಂಭಿಕ ಆಟಗಾರರು ಔಟ್ ಆಗುತ್ತಿದ್ದಂತೆ ಮಧ್ಯಮ ಕ್ರಮಾಂಕ ಸಂಪೂರ್ಣವಾಗಿ ನೆಲಕಚ್ಚಿತ್ತು. ವಿರಾಟ್ ಕೊಹ್ಲಿ ಡೇವಿಡ್ ವಿಲ್ಲಿ ಹಾಗೂ ರುದರ್ ಫೋರ್ಡ್ ರನ್ ಗಳಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುತ್ತಾರೆ. ಒಂದು ಹಂತದಲ್ಲಿ 87 ರನ್ನುಗಳಿಗೆ ಐದು ವಿಕೆಟ್ ಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದುಕೊಂಡಿತು.

ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಸರೆಯಾದರು ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಆಹ್ಮದ್ ಇಬ್ಬರೂ ಸೇರಿಕೊಂಡು ಅದ್ಭುತವಾದ ಜೊತೆಯಾಟವನ್ನು ಆಡಿದರು. ಶಹಬಾಜ್ ಆಹ್ಮದ್ ರವರು 45 ರನ್ನುಗಳನ್ನು ಕಲೆ ಹಾಕಿದರೆ ಈ ಕಡೆ ಫಿನಿಶರ್ ದಿನೇಶ್ ಕಾರ್ತಿಕ್ ರವರು ಬರೋಬ್ಬರಿ 44 ರನ್ನುಗಳನ್ನು ಕಲೆ ಹಾಕಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಇವರಿಬ್ಬರ ಕಾರಣದಿಂದಾಗಿ ಈ ಬಾರಿಯ ಟೂರ್ನಮೆಂಟಿನಲ್ಲಿ ಅಜೇಯವಾಗಿ ಉಳಿದುಕೊಂಡಿದ್ದ ರಾಜಸ್ತಾನ ರಾಯಲ್ಸ್ ತಂಡ ಮೊದಲ ಸೋಲನ್ನು ಅನುಭವಿಸಿತು.

ಹಾಗೂ ನಮ್ಮೆಲ್ಲರ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಮೆಂಟಿನಲ್ಲಿ ಎರಡನೇ ಗೆಲುವು ದಾಖಲಿಸಿದೆ. ಪರಿಸರ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅಚ್ಚುಕಟ್ಟಾಗಿ ನಿಭಾಯಿಸಿರುವ ದಿನೇಶ್ ಕಾರ್ತಿಕ್ ರವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಎರಡು ತಂಡಗಳ ಬೌಲಿಂಗ್ ವಿಭಾಗವನ್ನು ಗಮನಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂತ ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಕೊಂಚಮಟ್ಟಿಗೆ ಶಕ್ತಿಶಾಲಿಯಾಗಿ ಕಾಣಿಸಿತ್ತು. ಆದರೆ ದಿನೇಶ್ ಕಾರ್ತಿಕ್ ಹಾಗೂ ಅನುಜ್ ರಾವತ್ ರವರನ್ನು ಕಟ್ಟಿಹಾಕುವಲ್ಲಿ ವಿಫಲವಾಯಿತು ಎಂದು ಹೇಳಬಹುದಾಗಿದೆ. ಅದರಲ್ಲೂ ಮಾಜಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾಗಿರುವ ಯಜುವೇಂದ್ರ ಚಹಾಲ್ ಹಾಗೂ ನವದೀಪ್ ಸೈನಿ ಇಬ್ಬರೂ ಕೂಡ ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡಿದ್ದಾರೆ.

ಈಗಾಗಲೇ ಟೂರ್ನಮೆಂಟಿನಲ್ಲಿ ಬಲಾಡ್ಯ ತಂಡಗಳಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಪಂದ್ಯಗಳಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ರವರನ್ನು ಕೂಡ ಆಡುವ ಬಳಗದಲ್ಲಿ ಹೊಂದಲಿದೆ. ಹೀಗಾಗಿ ಗೆಲುವಿನ ಕುದುರೆಯಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದನ್ನು ಖಡಾಖಂಡಿತವಾಗಿ ಹೇಳಬಹುದಾಗಿದೆ.