ಆರ್ಸಿಬಿ ಅಭಿಮಾನಿಗಳು ಆಯ್ಕೆ ಮಾಡಿರುವ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಗೊತ್ತೇ?? ಈ ತಂಡದಿಂದ ಕಪ್ ಗೆಲ್ಲಲು ಸಾಧ್ಯವೇ??

ಆರ್ಸಿಬಿ ಅಭಿಮಾನಿಗಳು ಆಯ್ಕೆ ಮಾಡಿರುವ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಗೊತ್ತೇ?? ಈ ತಂಡದಿಂದ ಕಪ್ ಗೆಲ್ಲಲು ಸಾಧ್ಯವೇ??

ನಮಸ್ಕಾರ ಸ್ನೇಹಿತರೇ ಮಹತ್ವದ ಹಾಗೂ ಅತಿ ನೀರಿಕ್ಷಿತ ಐಪಿಎಲ್ ಸರಣಿ ಆರಂಭವಾಗಿದೆ. ನೀರಿಕ್ಷೆಯಂತೆ ಕನ್ನಡಿಗರ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ಭಾನುವಾರ ಅಂದರೇ ಮಾರ್ಚ್ 27 ರಂದು ತನ್ನ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಆಡಲಿದೆ. ಈ ಮೊದಲ ಪಂದ್ಯಕ್ಕೆ ಆರ್ಸಿಬಿಯ ಸ್ಟಾರ್ ಆಟಗಾರರಾದ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಜೋಶ್ ಹೇಜಲ್ವುಡ್ ಅಲಭ್ಯರಾಗಿದ್ದಾರೆ. ಇವರ ಅಲಭ್ಯತೆ ಕಾರಣ ಆಡುವ ಪ್ಲೇಯಿಂಗ್ ಇಲೆವೆನ್ ಬಗ್ಗೆ ಈಗ ತೀವ್ರ ಕುತೂಹಲ ಮೂಡಿದೆ. ಬನ್ನಿ ಅಭಿಮಾನಿಗಳು ಆಯ್ಕೆ ಮಾಡಿರುವ ಆರ್ಸಿಬಿಯ ಇಲೆವೆನ್ ನಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಎಂಬುದನ್ನು ತಿಳಿಯೋಣ.

ತಂಡದ ಆರಂಭಿಕರಾಗಿ ನಾಯಕ ಫಾಪ್ ಡು ಪ್ಲೇಸಿಸ್ ಮತ್ತು ನ್ಯೂಜಿಲೆಂಡ್ ನ ವಿಕೇಟ್ ಕೀಪರ್ ಬ್ಯಾಟ್ಸಮನ್ ಫಿನ್ ಅಲೆನ್ ಆಡಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಿದರೇ, ನಾಲ್ಕನೇ ಕ್ರಮಾಂಕದಲ್ಲಿ ಮಹಿಪಾಲ್ ಲೋಮ್ರೋರ್ ಆಡಲಿದ್ದಾರೆ. ಐದನೇ ಕ್ರಮಾಂಕದಲ್ಲಿ ವಿಕೇಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತಿಕ್ ಆಡಿದರೇ, ಆರನೇ ಕ್ರಮಾಂಕದಲ್ಲಿ ಆಲ್ ರೌಂಡರ್ ಶಹಬಾಜ್ ಅಹಮದ್ ಆಡಲಿದ್ದಾರೆ.

ಏಳನೇ ಕ್ರಮಾಂಕದಲ್ಲಿ ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗ ಆಡಿದರೇ, ಎಂಟನೇ ಕ್ರಮಾಂಕದಲ್ಲಿ ವೇಗಿ ಡೇವಿಡ್ ವಿಲ್ಲಿ ಆಡಲಿದ್ದಾರೆ. ಒಂಬತ್ತನೇ ಕ್ರಮಾಂಕದಲ್ಲಿ ವೇಗಿ ಹರ್ಷಲ್ ಪಟೇಲ್ ಆಡಿದರೇ, ಹತ್ತನೇ ಕ್ರಮಾಂಕದಲ್ಲಿ ವೇಗಿ ಮಹಮದ್ ಸಿರಾಜ್ ಆಡಿದರೇ, ಹನ್ನೊಂದನೇ ಕ್ರಮಾಂಕದಲ್ಲಿ ಮತ್ತೊಬ್ಬ ವೇಗಿ ಸಿದ್ದಾರ್ಥ್ ಕೌಲ್ ಆಡಲಿದ್ದಾರೆ. ಈ ತಂಡವನ್ನು ಅಭಿಮಾನಿಗಳೇ ಆಯ್ಕೆ ಮಾಡಿದ್ದು, ಪಂದ್ಯ ಆಡುವಾಗ ಆರ್ಸಿಬಿ ಹೇಗೆ ಬದಲಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ತಂಡದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ತಂಡ ಇಂತಿದೆ : ಫಾಪ್ ಡು ಪ್ಲೇಸಿಸ್, ಫಿನ್ ಅಲೆನ್, ವಿರಾಟ್ ಕೊಹ್ಲಿ, ಮಹಿಪಾಲ್ ಲೋಮ್ರೋರ್, ದಿನೇಶ್ ಕಾರ್ತಿಕ್, ಶಹಬಾಜ್ ಅಹಮದ್, ವನಿಂದು ಹಸರಂಗ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಮಹಮದ್ ಸಿರಾಜ್, ಸಿದ್ದಾರ್ಥ್ ಕೌಲ್.