ಕೈ ಕೊಟ್ಟ ಸಿ.ಎಸ್.ಕೆ ಬಿಟ್ಟು ಬಹಿರಂಗವಾಗಿ ಆರ್ಸಿಬಿ ತಂಡಕ್ಕೆ ಜೈ ಎಂದ ಸುರೇಶ್ ರೈನಾ. ಊಹಿಸದ ರೀತಿಯಲ್ಲಿ ನಡೆದ್ದದೇನು ಗೊತ್ತೇ??

ಕೈ ಕೊಟ್ಟ ಸಿ.ಎಸ್.ಕೆ ಬಿಟ್ಟು ಬಹಿರಂಗವಾಗಿ ಆರ್ಸಿಬಿ ತಂಡಕ್ಕೆ ಜೈ ಎಂದ ಸುರೇಶ್ ರೈನಾ. ಊಹಿಸದ ರೀತಿಯಲ್ಲಿ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಈ ಭಾರಿಯ ಐಪಿಎಲ್ ಹರಾಜಿನಲ್ಲಿ ಯಾವ ತಂಡಕ್ಕೂ ಸೇಲಾಗಲಿಲ್ಲ. ಅವರ ಗಳಸ್ಯ ಕಂಠಸ್ಯ ಗೆಳೆಯರಾಗಿದ್ದ ಎಂ.ಎಸ್.ಧೋನಿ ಕೊನೆ ಗಳಿಗೆಯಲ್ಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿಸಿಕೊಳ್ಳುತ್ತಾರೆಂಬ ನೀರಿಕ್ಷೆ ಸಹ ಹುಸಿಯಾಯಿತು. 2 ಕೋಟಿ ರೂ ಮೂಲಬೆಲೆ ಹೊಂದಿದ್ದ ರೈನಾ ಐಪಿಎಲ್ ನಲ್ಲಿ ಅನಸೋಲ್ಡ್ ಪ್ಲೇಯರ್ ಆಗಿ ಉಳಿದು ಬಿಟ್ಟರು. ಈ ಮೂಲಕ ಐಪಿಎಲ್ ಗೆ ಆಟಗಾರನಾಗಿ ಪರೋಕ್ಷವಾಗಿ ವಿದಾಯ ಹೇಳಿದಂತಾಯಿತು.

ಇನ್ನು ಈ ಭಾರಿ ಐಪಿಎಲ್ ಆಟಗಾರನಾಗಿ ಅಲ್ಲದೇ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಹಿಂದಿ ವೀಕ್ಷಕ ವಿವರಣೆಗಾರನಾಗಿ ಕೆಲಸ ಮಾಡಲಿದ್ದಾರೆ. ಈ ಮೂಲಕ ಪ್ರೇಕ್ಷಕರು ರೈನಾರನ್ನು ಕಣ್ತುಂಬಿಕೊಳ್ಳಬಹುದು. ಆದರೇ ರೈನಾ ಈ ಭಾರಿ ಯಾವ ಐಪಿಎಲ್ ತಂಡಕ್ಕೆ ಸಪೋರ್ಟ್ ಮಾಡುತ್ತಾರೆಂಬ ಸುದ್ದಿ ಈಗ ಬಹಿರಂಗವಾಗಿದೆ. ರೈನಾ ಹನ್ನೇರೆಡು ವರ್ಷ ಪ್ರತಿನಿಧಿಸಿದ ಚೆನ್ನೈ ತಂಡವನ್ನೋ ಅಥವಾ ತಮ್ಮ ತವರು ಲಕ್ನೋ ತಂಡವನ್ನು ಬೆಂಬಲಿಸಬಹುದು ಎಂದು ನೀರಿಕ್ಷಿಸಲಾಗಿತ್ತು.

ಆದರೇ ರೈನಾ ಉತ್ತರ ನೀರಿಕ್ಷೆಯನ್ನೇ ತಲೆಕೆಳಗು ಮಾಡಿದೆ. ಹೌದು ರೈನಾ ಈ ಭಾರಿ ಸಿಎಸ್ಕೆ ತಂಡದ ಬದ್ಧ ವೈರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸಪೋರ್ಟ್ ಮಾಡಲಿದ್ದಾರಂತೆ. ಅದಕ್ಕೆ ಸೂಕ್ತ ಕಾರಣ ಸಹ ನೀಡಿದ್ದಾರೆ. ರೈನಾ ಆರ್ಸಿಬಿ ತಂಡ ಬೆಂಬಲಿಸಲು ಕಾರಣ, ಆರ್ಸಿಬಿ ತಂಡದ ನಾಯಕ ಫಾಪ್ ಡು ಪ್ಲೇಸಿಸ್. ಹೌದು ಡು ಪ್ಲೇಸಿಸ್ ಆರ್ಸಿಬಿಗೆ ಬರುವ ಮುನ್ನ ಚೆನ್ನೈ ತಂಡದಲ್ಲಿದ್ದರು. ಆಗ ರೈನಾ ಮತ್ತು ಡು ಪ್ಲೇಸಿಸ್ ಹಲವಾರು ಭಾರಿ ಒಟ್ಟಿಗೆ ಆಡಿ ಉತ್ತಮ ಸ್ನೇಹಿತರಾದರಂತೆ. ಹಾಗಾಗಿ ಈ ಭಾರಿ ತಮ್ಮ ಸ್ನೇಹಿತ ಕಪ್ ಎತ್ತಿ ಹಿಡಿಯಲಿ ಎಂಬ ಕಾರಣಕ್ಕೆ ನಾನು ಆರ್ಸಿಬಿ ತಂಡಕ್ಕೆ ಸಪೋರ್ಟ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.