ಒಮ್ಮೆಲೇ ಬರೋಬ್ಬರಿ ಏಳು ಹೊಸ ಬದಲಾವಣೆಗಳೊಂದಿಗೆ ಬಹಳ ವಿಶೇಷವಾಗಿರಲಿದೆ ಈ ಬಾರಿಯ ಐಪಿಎಲ್, ಯಾವ್ಯಾವ ಬದಲಾವಣೆ ನಡೆಯಲಿದೆ ಗೊತ್ತೇ??

ಒಮ್ಮೆಲೇ ಬರೋಬ್ಬರಿ ಏಳು ಹೊಸ ಬದಲಾವಣೆಗಳೊಂದಿಗೆ ಬಹಳ ವಿಶೇಷವಾಗಿರಲಿದೆ ಈ ಬಾರಿಯ ಐಪಿಎಲ್, ಯಾವ್ಯಾವ ಬದಲಾವಣೆ ನಡೆಯಲಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ 2022 ಇದೇ ಮಾರ್ಚ್ 26 ರಂದು ಪ್ರಾರಂಭವಾಗಲಿದ್ದು ಇನ್ನು ಕೇವಲ ನಾಲ್ಕು ದಿನಗಳಷ್ಟೇ ಉಳಿದುಕೊಂಡಿವೆ. ಇನ್ನು ಈ ಬಾರಿಯ ಐಪಿಎಲ್ ಹಲವಾರು ಬದಲಾವಣೆಗಳೊಂದಿಗೆ ಪ್ರಾರಂಭವಾಗುತ್ತಿದೆ. ಹಾಗಿದ್ದರೆ ಆ 7 ಬದಲಾವಣೆಗಳು ಯಾವುವು ಎಂದು ತಿಳಿಯೋಣ ಬನ್ನಿ.

ಈ ಬಾರಿಯ ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ ಸಿನಿಮಾ ಹೊಸ ತಂಡ ಭಾಗಿಯಾಗುತ್ತಿದೆ. ಈ ತಂಡವನ್ನು ಹಾರ್ದಿಕ್ ಪಾಂಡ್ಯ ರವರು ನಾಯಕನಾಗಿ ಮುನ್ನಡೆಸಲಿದ್ದಾರೆ. ಸಿವಿಸಿ ಕ್ಯಾಪಿಟಲ್ಸ್ ಸಂಸ್ಥೆ ಗುಜರಾತ್ ಟೈಟನ್ಸ್ ತಂಡವನ್ನು 5625 ಕೋಟಿ ರೂಪಾಯಿ ನೀಡಿ ಖರೀದಿಸಿದೆ ಎನ್ನುವುದು ಮತ್ತೊಂದು ವಿಶೇಷ ವಿಚಾರವಾಗಿದೆ.

ಎರಡನೇದಾಗಿ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತದ ಬೆಳಗ್ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ತಂಡದ ಮಾಲೀಕರಿಂದ ಖರೀದಿಗೆ ಬೆಳಗಾಗಿದೆ. ಹೌದು ಈ ತಂಡವನ್ನು ದಾಖಲೆಯ 7090 ಕೋಟಿ ರೂಪಾಯಿಗಳಿಗೆ ಸಂಜಯ್ ಗೊಯೆಂಕ ಅವರು ಖರೀದಿಸಿದ್ದಾರೆ. ಇನ್ನು ಈಗಾಗಲೇ ನಿಮಗೆ ತಿಳಿದಿರುವಂತೆ ಈ ತಂಡವನ್ನು ಕರ್ನಾಟಕ ಮೂಲದ ಕೆಎಲ್ ರಾಹುಲ್ ರವರು ನಾಯಕನಾಗಿ ಮುನ್ನಡೆಸಲಿದ್ದಾರೆ.

ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಡಿ ಆರ್ ಎಸ್ ಸಂಖ್ಯೆಯನ್ನು ಕೂಡ ದ್ವಿಗುಣಗೊಳಿಸಲಾಗಿದೆ. ಇದರಿಂದಾಗಿ ಖಂಡಿತವಾಗಿ ಉಭಯ ತಂಡಗಳಿಗೂ ಕೂಡ ಸಮಾನವಾದ ಅವಕಾಶ ಸಿಗಲಿದ್ದು ನಿಯಮವನ್ನು ಎಲ್ಲಾ ತಂಡಗಳು ಕೂಡ ಸ್ವಾಗತಿಸಿವೆ. ಇನ್ನು ಕೆಲವೊಮ್ಮೆ ಎರಡು ಬಾರಿ ಸೂಪರ್ ಓವರ್ ಗಳನ್ನು ನಡೆಯುವುದು ನೀವು ನೋಡಿರುತ್ತೀರಿ. ಹೀಗಾಗಿ ನೀಡಿದ ಸಮಯದಲ್ಲಿ ಸೂಪರ್ ಓವರ್ಗಳು ಮುಗಿಯದಿದ್ದರೆ ಆವೃತ್ತಿ ಅಂತ್ಯದ ವೇಳೆಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಹೆಚ್ಚಿನ ಸ್ಥಾನವನ್ನು ಪಡೆದಿರುವ ತಂಡಗಳನ್ನು ಪ್ಲೇಆಫ್ ಗೆ ತೇರ್ಗಡೆ ಮಾಡಲಾಗುತ್ತದೆ.

ಇನ್ನು ಕಳೆದ ಬಾರಿ ಬಯೋ ಬಬಲ್ ಉಲ್ಲಂಘನೆ ಆಗಿದ್ದರಿಂದಾಗಿ ಐಪಿಎಲ್ ಎರಡು ಭಾಗಗಳಲ್ಲಿ ನಡೆಯುವಂತಾಯಿತು. ಇದೇ ಕಾರಣಕ್ಕಾಗಿ ಈಗ ಬಯೋ ಬಬಲ್ ಉಲ್ಲಂಘನೆಯನ್ನು ಮಾಡಿದವರಿಗೆ ಕಠಿಣ ಶಿಕ್ಷೆಯನ್ನು ನೀಡಲು ಬಿಸಿಸಿಐ ನಿರ್ಧರಿಸಿದೆ. ಇದನ್ನು ಉಲ್ಲಂಘಿಸಿದರೆ ಪಂದ್ಯದ ಆಟಗಾರ ಅಥವಾ ಆತನ ಕುಟುಂಬದಿಂದ ಹಿಡಿದು ಪಂದ್ಯದ ಅಧಿಕಾರಿ ಅವರಿಗೂ ಕೂಡ ದಂಡವನ್ನು ವಿಧಿಸಲಾಗುತ್ತದೆ. ಬಯೋ ಬಬಲ್ ವಾತಾವರಣಕ್ಕೆ ಫ್ರಾಂಚೈಸಿ ಹೊರಗಿನ ವ್ಯಕ್ತಿಯನ್ನು ಕರೆತಂದರೆ ಒಂದು ಕೋಟಿ ರೂಪಾಯಿ ವರೆಗೆ ದಂಡವನ್ನು ವಿಧಿಸಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಮಹಾಮಾರಿಯನ್ನು ಯಾವಾಗ ಬರುತ್ತದೆ ಯಾವಾಗ ಹೋಗುತ್ತದೆ ಎಂಬುದು ಅನಿಶ್ಚಿತತೆಯಿಂದ ಕೂಡಿದೆ. ಹೀಗಾಗಿ ಮಹಾಮಾರಿ ಮುನ್ನಲೆಗೆ ಬರುವ ಮುನ್ನವೇ ಪ್ಲೇಯಿಂಗ್ ಇಲೆವೆನ್ ನೀಡಲು ಸಾಧ್ಯವಾಗದಿದ್ದರೆ ಆ ಪಂದ್ಯವನ್ನು ರೀ ಶೆಡ್ಯೂಲ್ ಮಾಡಲಾಗುತ್ತದೆ. ಅದು ಕೂಡ ಸಾಧ್ಯವಾಗದಿದ್ದರೆ ಟೆಕ್ನಿಕಲ್ ತಂಡಕ್ಕೆ ಈ ವಿಚಾರದ ಕುರಿತಂತೆ ಸುದ್ದಿ ಮುಟ್ಟಿಸಲಾಗುತ್ತದೆ.

ಕೊನೆಯದಾಗಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ರವರು ತೊರೆದಿರುವುದರಿಂದ ಪೂರ್ಣಪ್ರಮಾಣದ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ ಡುಪ್ಲೆಸಿಸ್ ರವರು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ತಾನನಾಗಿ ಮೊದಲ ಬಾರಿ ಕಾಣಿಸಿಕೊಳ್ಳಲಿದ್ದಾರೆ. ಇದಿಷ್ಟು ಬದಲಾವಣೆಗಳೊಂದಿಗೆ ಈ ಬಾರಿಯ ಟಾಟಾ ಐಪಿಎಲ್ 2022 ಪ್ರಾರಂಭವಾಗಲಿದೆ. ಈ ಬಾರಿಯ ಐಪಿಎಲ್ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.