ಮತ್ತಷ್ಟು ಅಭಿವೃದ್ಧಿ ಹೊಂದುತ್ತಿರುವ ನವ ಭಾರತ, ದೇಶದ ಮೊದಲ ಆರ್ ಅರ್ ಟಿ ಎಸ್ ರೈಲು ಯಾವಾಗ ಸಿದ್ದ ಗೊತ್ತೇ?? ವಿಶೇಷತೆ ಏನು ಗೊತ್ತೇ?

ಮತ್ತಷ್ಟು ಅಭಿವೃದ್ಧಿ ಹೊಂದುತ್ತಿರುವ ನವ ಭಾರತ, ದೇಶದ ಮೊದಲ ಆರ್ ಅರ್ ಟಿ ಎಸ್ ರೈಲು ಯಾವಾಗ ಸಿದ್ದ ಗೊತ್ತೇ?? ವಿಶೇಷತೆ ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ, ದೆಹಲಿ ಮೀರತ್ ಪ್ರಯಾಣಿಕರಿಗೆ ಒಂಡು ಸಿಹಿ ಸುದ್ದಿ. 82 ಕಿ.ಮೀ ಉದ್ದದ ಕಾರಿಡಾರ್‌ನಲ್ಲಿ ಚಲಿಸಲಿರುವ ದೆಹಲಿ-ಗಾಜಿಯಾಬಾದ್-ಮೀರತ್ ಆರ್‌ಆರ್‌ಟಿಎಸ್ ರೈಲು ಮಾರ್ಚ್ 2023ರ ವೇಳೆಗೆ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿನಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇದು ದೇಶದ ಮೊದಲ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಮಾರ್ಚನಲ್ಲಿ ಲೋಕಾರ್ಪಣೆಗೊಳ್ಳಲಿವೆ ಟ್ರೈನ್ ವಿಶೇಷತೆಯನ್ನು ನೋಡುವುದಾದರೆ ದೆಹಲಿಯಿಂದ ಮೀರತ್ ಗೆ ಕೇವಲ ಒಂದು ಗಂಟೆಯಲ್ಲಿ ಪ್ರಯಾಣಿಕರು ತಲುಪಬಹುದು. ದೆಹಲಿಯಿಂದ ಮೇರೆಗೆ ರಸ್ತೆ ಮಾರ್ಗವಾಗಿ ಪ್ರಯಾಣಿಸಿದರೆ ಕನಿಷ್ಠ 3-4 ನಾಲ್ಕು ಗಂಟೆ ಬೇಕಾಗುತ್ತದೆ. ಅದೇ ರೈಲಲ್ಲಿ ಪ್ರಯಾಣಿಸಿದರೆ ಕೇವಲ ಒಂದು ಗಂಟೆ ಒಳಗೆ ಪ್ರಯಾಣಿಸಬಹುದು.

ಇನ್ನು ಮೆಟ್ರೋಗಿಂತಲೂ ಮೂರು ಪಟ್ಟು ವೇಗವಾಗಿ ಆರ್ ಆರ್ ಟಿ ಎಸ್ ರೈಲು ಚಲಿಸಬಲ್ಲದು. ಅಂದರೆ ಇದರ ವೇಗ 160 ಕಿಲೋಮೀಟರ್ ಗಳು. ಇನ್ನು ಪ್ರಧಾನಮಂತ್ರಿಯವರ ಮೇಕ್ ಇನ್ ಇಂಡಿಯಾ ನೀತಿಗೆ ಅನುಗುಣವಾಗಿ ಪ್ರತಿಶತ ನೂರರಷ್ಟು ದೇಶದಲ್ಲಿಯೇ ಈ ರೈಲು ತಯಾರಿಸಲಾಗಿರುವುದು ವಿಶೇಷ ಹಾಗೂ ದೇಶದ ಹೆಮ್ಮೆಯೂ ಕೂಡ. ಲಘು ಹಾಗೂ ಸ್ಟೇನ್‌ಲೆಸ್ ಸ್ಟೀಲ್ ನಿರ್ಮಾಣವಾಗಿರುವ ರೈಲಿನಲ್ಲಿ ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆ ಇದೆ ಹಾಗೆಯೇ ಒಂದು ಬಾರಿಗೆ 1,500 ಜನರು ಪ್ರಯಾಣಿಸಬಹುದು. ಉಚಿತ ವೈಫೈ ವ್ಯವಸ್ಥೆ ಕೂಡಾ ರೈಲಿನಲ್ಲಿ ಇರಲಿದ್ದು, ಒಂದು ಕೋಚ್‌ನಲ್ಲಿ ಸಂಪೂರ್ಣ ಪ್ರೀಮಿಯಂ ಕ್ಲಾಸ್ ಇರಲಿದೆ ಎಂದು ತಿಳಿಸಲಾಗಿದೆ. ಹಾಗಾಗಿ ಆರ್ ಆರ್ ಟಿ ಎಸ್ ರೈಲು ಪ್ರಯಾಣಿಕರಿಗೆ ಸಾಕಷ್ಟು ಪ್ರಯೋಜನಕಾರಿ ಎನಿಸಲಿದೆ.