ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊಹ್ಲಿ ಬಗ್ಗೆ ಕೆಟ್ಟದಾಗಿ ಮಾತಾಡಿದವರಿಗೆ ಖಡಕ್​​ ಉತ್ತರ ಕೊಟ್ಟ ರೋಹಿತ್​, ಹೇಳಿದ್ದೇನು ಗೊತ್ತೇ??

15

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸದ್ಯ ಭಾರತ ಕ್ರಿಕೆಟ್ ತಂಡದ ಆಧಾರಸ್ತಂಭಗಳೆಂದರೇ ಅದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ. ಇವರಿಬ್ಬರ ಜುಗಲ್ ಬಂದಿ ಭಾರತಕ್ಕೆ ಹಲವಾರು ಪಂದ್ಯಗಳಲ್ಲಿ ವಿಜಯಲಕ್ಷ್ಮಿ ನೀಡಿದರೂ, ಭಾರತಕ್ಕೆ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಲ್ಲ. ಇದೇ ಸದ್ಯ ಈ ಜೋಡಿಗಿರುವ ಕೊರತೆಯಾಗಿದೆ. ಇನ್ನು ಈ ಜೋಡಿ ಮೈದಾನದ ಒಳಗಡೆ ಮಾತ್ರವಲ್ಲದೇ ಹೊರಗಡೆ ಸಹ ಆಪ್ತಮಿತ್ರರು. ಆದರೇ ಕೆಲವು ಕಿಡಿಗೇಡಿಗಳು ಇವರ ಮಧ್ಯದ ಸಂಭಂದ ಸರಿಯಿಲ್ಲ ಎಂದೇ ಸುದ್ದಿ ಹರಡಿಸುತ್ತಿರುತ್ತಾರೆ.

ಸದ್ಯ ನಾಯಕತ್ವದಿಂದ ಇಳಿದ ಮೇಲೆ ವಿರಾಟ್ ಕೊಹ್ಲಿ ಬ್ಯಾಟ್ ಮೊದಲಿನಂತೆ ಸದ್ದು ಮಾಡುತ್ತಿಲ್ಲ. ನಾಯಕತ್ವದಿಂದ ಇಳಿದ ಮೇಲೆ ವಿರಾಟ್ ಕೊಹ್ಲಿ ಸ್ವಲ್ಪ ಮಂಕಾಗಿ ಕಾಣುತ್ತಿದ್ದಾರೆ. ಮೊದಲಿನ ಅಗ್ರೇಸಿವ್ ನೆಸ್ ಹಾಗೂ ಜವಾಬ್ದಾರಿಯುತ ಇನ್ನಿಂಗ್ಸ್ ಅವರಿಂದ ಬರುತ್ತಿಲ್ಲ. ಹೀಗಾಗಿ ಕೆಲವರು ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ. ಅವರನ್ನು ತಂಡದಿಂದ ಕೈಬಿಟ್ಟು ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಅದಕ್ಕೆ ರೋಹಿತ್ ಶರ್ಮಾ ಖಡಕ್ ಉತ್ತರ ನೀಡಿ ಅಂತಹವರ ಬಾಯಿ ಮುಚ್ಚಿಸಿದ್ದಾರೆ. ಆಟಗಾರರ ಬ್ಯಾಟಿಂಗ್ ಫಾರ್ಮ್ ಮೀಡಿಯಾದವರಿಂದ ಶುರುವಾಗುತ್ತದೆ. ಆಟಗಾರರಿಗೆ ಅವರು ಫಾರ್ಮ್ ಬಗ್ಗೆ ಅರಿವಿರುತ್ತದೆ. ಅವರು ಅದರಿಂದ ಹೊರಗೆ ಬರಲು ನೋಡುತ್ತಿರುತ್ತಾರೆ. ವಿರಾಟ್ ದಶಕಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರಿಗೆ ಇಂತಹ ಪರಿಸ್ಥಿತಿಯನ್ನು ನಿಭಾಯಿಸಿದ ಅನುಭವವಿರುತ್ತದೆ.ಬೇರೆಯವರು ಅದರ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳಬಾರದೆಂದು ಹೇಳಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.