ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅದೊಂದು ಕಾರಣದಿಂದಲೇ ಎಬಿಡಿ ಆರ್ಸಿಬಿ ಅಷ್ಟೇ ಅಲ್ಲ. ಐಪಿಎಲ್ ಅನ್ನೇ ಬಿಟ್ಟದ್ದು, ಇನ್ನು ಎರಡು ವರ್ಷ ಆಡಬಹುದಾಗಿತ್ತು ಆದರೆ ಏನಾಗಿತ್ತು ಗೊತ್ತೇ??

24

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ಹಬ್ಬವಾಗಿರುವ ಐಪಿಎಲ್ ಹಲವಾರು ಆಟಗಾರರಿಗೆ ದೊಡ್ಡಮಟ್ಟದ ವೇದಿಕೆಯನ್ನು ಹಾಗೂ ಅವಕಾಶಗಳನ್ನು ಮಾಡಿಕೊಟ್ಟಿದೆ. ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆದು ಕೊಂಡ ವರಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರನಾಗಿರುವ ಎಬಿ ಡಿವಿಲಿಯರ್ಸ್ ಅವರು ಕೂಡ ಒಬ್ಬರು. ಎಬಿ ಡಿವಿಲಿಯರ್ಸ್ ರವರು ವಿಶ್ವದ ಹಲವಾರು ಕ್ರಿಕೆಟ್ ಟೂರ್ನಿಗಳಲ್ಲಿ ಬೇರೆಬೇರೆ ತಂಡಗಳಲ್ಲಿ ಆಡಿದ್ದಾರೆ.

ಆದರೆ ಅವರು ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಪರವಾಗಿ ಆಡಿದಷ್ಟು ಯಾವ ತಂಡದಲ್ಲಿ ಕೂಡ ಆಡಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಸ್ವತಃ ಎಬಿ ಡಿವಿಲಿಯರ್ಸ್ ರವರೇ ಐಪಿಎಲ್ ನಲ್ಲಿ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬಿಟ್ಟು ಬೇರೆ ಯಾವ ತಂಡದಲ್ಲಿ ಕೂಡ ಆಡುವುದಿಲ್ಲ ಎಂಬುದಾಗಿ ಹೇಳಿದ್ದರು. ಬೆಂಗಳೂರು ನನ್ನ ಭಾರತದ ಮನೆ ಎಂಬುದಾಗಿ ಕೂಡ ಹೇಳಿಕೊಂಡಿದ್ದರು. ಇಷ್ಟೊಂದು ಚೆನ್ನಾಗಿ ಆಡುತ್ತಿದ್ದ ಎಬಿ ಡಿವಿಲಿಯರ್ಸ್ ಅವರು ಕಳೆದ ವರ್ಷ ನವೆಂಬರ್ ನಲ್ಲಿ ಎಲ್ಲಾ ಫಾರ್ಮೆಟ್ ಕ್ರಿಕೆಟ್ ಗಳಿಗೂ ಕೂಡ ನಿವೃತ್ತಿಯನ್ನು ಘೋಷಿಸಿದ್ದರು. ಬೇಕೆಂದಿದ್ದರೆ ಅವರು ಇನ್ನೂ ಕೂಡ ಎರಡು ವರ್ಷಗಳವರೆಗೆ ಆಡಬಹುದಾಗಿತ್ತು. ಆದರೆ ಅವರು ಐಪಿಎಲ್ ಗೆ ನಿವೃತ್ತಿ ಘೋಷಿಸಿದ್ದೇಕೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಎಬಿ ಡಿವಿಲಿಯರ್ಸ್ ರವರು ಐಪಿಎಲ್ ನಲ್ಲಿ ಆಡುವುದಾದರೆ ಕೇವಲ ರಾಯಲ್ ಚಾಲೆಂಜರ್ಸ್ ಪರವಾಗಿ ಮಾತ್ರ ಆಡುತ್ತೇನೆ ಎಂಬುದಾಗಿ ಹೇಳಿದ್ದರು. ಈ ಬಾರಿಯ ಹರಾಜಿಗೂ ಮುನ್ನ ಎಬಿ ಡಿವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಇವರಿಬ್ಬರಲ್ಲಿ ಫಾರ್ಮಿನಲ್ಲಿ ಇದ್ದಿದ್ದು ಮ್ಯಾಕ್ಸ್ವೆಲ್ ರವರು. ಹೀಗಾಗಿ ಅವರನ್ನು ತಂಡದಲ್ಲಿ ಇಟ್ಟುಕೊಂಡು ಎಬಿ ಡಿವಿಲಿಯರ್ಸ್ ರವರನ್ನು ಹರಾಜಿಗೆ ಬಿಡಬೇಕಾಗಿತ್ತು, ಅದು ಹೇಗೂ ನಡೆಯುತ್ತಿರಲಿಲ್ಲ, ಆರ್ಸಿಬಿ ಯವರು ಬಿಟ್ಟು ಕೊಡುವ ಮತ್ತೆ ಇರಲಿಲ್ಲ. ಆದರೆ ಒಂದು ವೇಳೆ ಹೀಗೆ ಮಾಡಿದರೆ ಆರ್ಸಿಬಿ ತಂಡಕ್ಕೆ ಹರಾಜಿನಲ್ಲಿ ಖರೀದಿ ಮಾಡಲು ಹಣ ಕೂಡ ಇರುತ್ತಿರಲಿಲ್ಲ, ಆಗ ಎಬಿಡಿ ಮ್ಯಾಕ್ಸ್ವೆಲ್ ಇಬ್ಬರಲ್ಲಿ ಒಬ್ಬರು ಹೊರಹೋಗಬೇಕಾಗಿತ್ತು. ಅಷ್ಟೇ ಅಲ್ಲದೆ ಎಬಿ ಡಿವಿಲಿಯರ್ಸ್ ಅವರು ಬೇರೆ ತಂಡದಲ್ಲಿ ಆಡಲು ಹಿಂಜರಿದಿದ್ದರು. ಹೀಗಾಗಿ ಅಧಿಕೃತವಾಗಿ ಹರಾಜಿಗೆ ಹೋಗುವ ಮುನ್ನವೇ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ವನ್ನು ಹೇಳಿದ್ದರು. ಆದರೂ ಕೂಡ ಎಬಿ ಡಿವಿಲಿಯರ್ಸ್ ಕ್ರಿಕೆಟ್ ಲೋಕದ ಎಂದೂ ಮರೆಯಲಾಗದ ತಾರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.

Get real time updates directly on you device, subscribe now.