ಟೆಲಿಕಾಂ ಕ್ಷೇತ್ರದಲ್ಲಿ ಮಾಸ್ಟರ್ ಸ್ಟ್ರೋಕ್, ಜಿಯೋದ 399ರೂ. ಪ್ಲ್ಯಾನ್ ಸೇರಿದಂತೆ ಮತ್ತಷ್ಟು ಹೊಸ ಪ್ಲಾನ್ ಗಳು. ಯಾವೆಲ್ಲ ಪ್ಲಾನ್ಸ್ ನಲ್ಲಿ ಎಷ್ಟೆಲ್ಲಾ ಲಾಭ ಇದೆ ಗೊತ್ತೇ??

ಟೆಲಿಕಾಂ ಕ್ಷೇತ್ರದಲ್ಲಿ ಮಾಸ್ಟರ್ ಸ್ಟ್ರೋಕ್, ಜಿಯೋದ 399ರೂ. ಪ್ಲ್ಯಾನ್ ಸೇರಿದಂತೆ ಮತ್ತಷ್ಟು ಹೊಸ ಪ್ಲಾನ್ ಗಳು. ಯಾವೆಲ್ಲ ಪ್ಲಾನ್ಸ್ ನಲ್ಲಿ ಎಷ್ಟೆಲ್ಲಾ ಲಾಭ ಇದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಜಿಯೋ ತನ್ನ ಗ್ರಾಹಕರನ್ನು ಅಥವಾ ಬಳಕೆದಾರರನ್ನು ಎಂದಿಗೂ ಜಿಯೋ ಬಿಟ್ಟುಹೋಗದಂತೆ ತಮ್ಮ ವಿಶೇಷವಾದ ರೀಚಾರ್ಜ್ ಪ್ಲ್ಯಾನ್ ಗಳನ್ನು ಕೊಡುತ್ತಲೇ ಬಂದಿದೆ. ಅದರಲ್ಲೂ ರಿಲಯನ್ಸ್ ಜಿಯೋದಷ್ಟು ಕಡಿಮೆ ಬೆಲೆಯಲ್ಲಿ ಹಲವು ಸೌಲಭ್ಯಗಳನ್ನು ಒಳಗೊಂಡಿರುವ ಪ್ಲ್ಯಾನ್ ಗಳನ್ನು ಬೇರೆ ಯಾವ ಟೆಲಿಕಾ ಕಂಪನಿಗಳೂ ಇದುವರೆಗೆ ಕೊಟ್ಟಿಲ್ಲ. ಜಿಯೋ ಪರಿಚಯಿಸಿರುವ 399ರೂ. ಗಳ ಪ್ಲ್ಯಾನ್ ಏನೆಲ್ಲಾ ಒಳಗೊಂಡಿದೆ ಬನ್ನಿ ನೋಡೋಣ.

ಇದೀಗ ಯಾವುದೇ ಟೆಲಿಕಾಂ ಆಗಿರಲಿ ಒಟಿಟಿ ಚಂದಾದಾರಿಕೆಯನ್ನು ಗ್ರಾಹಕರಿಗೆ ನೀಡುವುದು ಅನಿವಾರ್ಯವಾಗಿದೆ. ಹಾಗಾಗಿ ಜಿಯೋ ಕೂಡ ಇತ್ತೀಚಿನ ತನ್ನ ಎಲ್ಲಾ ಯೋಜನೆಗಳಲ್ಲೂ ಈ ಸೌಲಭ್ಯವನ್ನು ಅಳವಡಿಸಿದೆ. ತನ ಬಳಕೆದಾರರಿಗೆ ಲಭ್ಯವಿರುವ ಅಗ್ಗದ ಜಿಯೋಪೋಸ್ಟ್ ಪೇಯ್ಡ್ ಪ್ಲಸ್ ಯೋಜನೆಯಲ್ಲಿ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಹಾಟ್ ಸ್ಟಾರ್ ಈ 3 ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ 200ಜಿಬಿ ಡೇಟಾ ರೋಲ್‌ಓವರ್‌ನೊಂದಿಗೆ 75ಜಿಬಿ ಡೇಟಾವನ್ನು ನೀಡುತ್ತದೆ.

75ಜಿಬಿ ಡೇಟಾದ ಮಿತಿ ಮುಗಿದರೆ, ಬಳಕೆದಾರರು ಪ್ರತಿ ಜಿಬಿ ಗೆ ರೂ.10 ದರದಲ್ಲಿ ಪ್ರತ್ಯೇಕವಾಗಿ ಡೇಟಾವನ್ನು ಖರೀದಿಸಬೇಕಾಗುತ್ತದೆ. ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು 100 ಎಸ್ ಎಂ ಎಸ್ ಸೌಲಭ್ಯವಿದೆ. ಇನ್ನು ಜಿಯೋದ 599ರೂ. ಯೋಜನೆ. 100ಜಿಬಿ ಡೇಟಾವನ್ನು ಮತ್ತು 200ಜಿಬಿ ಯ ಗರಿಷ್ಠ ಡೇಟಾ ರೋಲ್‌ಓವರ್ ಅನ್ನು ಈ ಯೋಜನೆ ಹೊಂದಿದೆ. ಇದರಲ್ಲೂ ಡೇಟಾ ಮುಗಿದ ನಂತರ ಪ್ರತಿ ಜಿಬಿ ಗೆ ರೂ.10 ಶುಲ್ಕ ಪಾವತಿಸಿ ಡೇಟಾ ಕೊಳ್ಳಬೇಕು.

ಈ ಜಿಯೋ ಪೋಸ್ಟ್ ಪೇಯ್ಡ್ ನಲ್ಲಿ ಕುಟುಂಬದ ಸದಸ್ಯರೊಂದಿಗೆ (ಒಬ್ಬರು) ಯೋಜನೆಯನ್ನು ಹಂಚಿಕೊಳ್ಳಬಹುದು. ಈ ಯೋಜನೆಯಲ್ಲಿಯೂ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಹಾಟ್ ಸ್ಟಾರ್ ಈ 3 ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ. ಜಿಯೋದ ದ 799 ರೂ. ಗಳ ಯೋಜನೆಯು ಗರಿಷ್ಠ 150ಜಿಬಿ ಡೇಟಾ ಮತ್ತು 200ಜಿಬಿ ಡೇಟಾ ರೋಲ್‌ಓವರ್ ಅನ್ನು ನೀಡುತ್ತದೆ ಕುಟುಂಬ ಯೋಜನೆಯ ಅಡಿಯಲ್ಲಿ 2 ಹೆಚ್ಚುವರಿ ಪೋಸ್ಟ್‌ಪೇಯ್ಡ್ ಸಂಪರ್ಕಗಳೊಂದಿಗೆ ಹಂಚಿಕೊಳ್ಳಬಹುದು.

ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಹಾಟ್ ಸ್ಟಾರ್ ಈ 3 ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ. ಜಿಯೋದ 999 ರು. ಗಳ ಯೋಜನೆ. ಇದರಲ್ಲಿ ಪ್ರತಿ ಬಿಲ್ಲಿಂಗ್ ಸೈಕಲ್‌ಗೆ ಗರಿಷ್ಠ 200ಜಿಬಿ ಸಿಗುತ್ತದೆ. ಗರಿಷ್ಠ ಡೇಟಾ ರೋಲ್‌ಓವರ್ 500ಜಿಬಿ. ಕುಟುಂಬ ಯೋಜನೆಯಡಿಯಲ್ಲಿ 3 ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಈ ಯೋಜನೆ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಹಾಟ್ ಸ್ಟಾರ್ ಈ 3 ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ.

ಹಾಗೆಯೇ ಜೀಯೋ ಪರಿಚಯಿಸಿರುವ 1,499 ಯೋಜನೆಯಲ್ಲಿ 500ಜಿಬಿ ರೋಲ್ ಒವರ್ ನೊಂದಿಗೆ 300ಜಿಬಿ ಡೇಟಾ ಸಿಗುತ್ತದೆ. ಆದರೆ ಇದರಲ್ಲಿ ಕುಟುಂಬ ಯೋಜನೆಯಡಿಯಲ್ಲಿ ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ನೀಡಲಾಗುವುದಿಲ್ಲ. ಆದರೆ, ಈ ಯೋಜನೆಯಲ್ಲಿಯೂ ಕುಡ ಇತರ ಯೋಜನೆಗಳಂತೆ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಹಾಟ್ ಸ್ಟಾರ್ ಈ 3 ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ.