ಅಸಲಿ ದ್ರಾವಿಡ್ ಆಟ ಈಗ ಶುರು, ಸರಣಿ ಸೋತಿದ್ದರು ತಲೆ ಕೆಡಿಸಿಕೊಳ್ಳದೆ ಮಾಸ್ಟರ್ ಪ್ಲಾನ್ ಮಾಡಿದ ದ್ರಾವಿಡ್, ಹೊಸ ಅಸ್ತ್ರ ಪ್ರಯೋಗಿಸಿದ ದ್ರಾವಿಡ್, ಏನು ಗೊತ್ತೇ??

ಅಸಲಿ ದ್ರಾವಿಡ್ ಆಟ ಈಗ ಶುರು, ಸರಣಿ ಸೋತಿದ್ದರು ತಲೆ ಕೆಡಿಸಿಕೊಳ್ಳದೆ ಮಾಸ್ಟರ್ ಪ್ಲಾನ್ ಮಾಡಿದ ದ್ರಾವಿಡ್, ಹೊಸ ಅಸ್ತ್ರ ಪ್ರಯೋಗಿಸಿದ ದ್ರಾವಿಡ್, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ನಾಯಕತ್ವದ ಬದಲಾವಣೆಗಳಿಂದಾಗಿ ಭಾರತೀಯ ಕ್ರಿಕೆಟ್ ತಂಡ ಇನ್ನೂ ಕೂಡ ಚೇತರಿಸುವ ಹಂತದಲ್ಲೇ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಸೋತಿದೆ. ಸದ್ಯಕ್ಕೆ ಈಗ ಭಾರತೀಯ ಕ್ರಿಕೆಟ್ ತಂಡ ವಿಶ್ರಾಂತಿಯಲ್ಲಿದೆ ಇದೇ ಫೆಬ್ರವರಿ 6ರಂದು ಪ್ರಾರಂಭವಾಗಲಿರುವ ಮೂರು ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವನ್ನು ಅಹಮದಾಬಾದ್ ಹಾಗೂ ಕೊಲ್ಕತ್ತಾ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಈ ಸರಣಿಗೆ ತಂಡವನ್ನು ಆಯ್ಕೆ ಮಾಡಿರುವ ರೀತಿ ಕೂಡ ವಿಭಿನ್ನವಾಗಿದೆ.

ಈಗಾಗಲೇ ಸುದೀರ್ಘ ವಿಶ್ರಾಂತಿಯ ನಂತರ ಈ ಸರಣಿಯನ್ನು ಭಾರತೀಯ ಕ್ರಿಕೆಟ್ ತಂಡ ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಎದುರಿಸಲಿದೆ. ಈ ತಂಡದ ಆಯ್ಕೆ ಪ್ರಕ್ರಿಯೆ ಕೂಡ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ರವರ ಮಾಸ್ಟರ್ ಪ್ಲಾನ್ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಹೇಳಬೇಕೆಂದರೆ ಈ ತಂಡದ ಆಯ್ಕೆ ನಡೆದಿರುವುದು ಸದ್ಯಕ್ಕೆ ವೆಸ್ಟ್ ಇಂಡೀಸ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಅಲ್ಲ. ಹಾಗಿದ್ದರೆ ರಾಹುಲ್ ದ್ರಾವಿಡ್ ಅವರ ಮಾಸ್ಟರ್ ಪ್ಲಾನ್ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಮಜಬೂತು ಮಾಡಲು ರಾಹುಲ್ ದ್ರಾವಿಡ್ ಅವರು ಈಗಿನಿಂದಲೇ ತಂಡವನ್ನು ಆಯ್ಕೆ ಮಾಡುವ ಹಾಗೂ ತಯಾರು ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಹೀಗಾಗಿ ತಂಡದಲ್ಲಿ 6 ವೇಗದ ಬೌಲರ್ ಗಳನ್ನು ಮತ್ತು 3 ವ್ರಿಸ್ಟ್ ಸ್ಪಿನ್ನರ್ ಗಳನ್ನು ಆಯ್ಕೆ ಮಾಡಿದ್ದಾರೆ. ಆವೇಶ್ ಖಾನ್ ದೀಪಕ್ ಚಹರ್ ಮೊಹಮ್ಮದ್ ಸಿರಾಜ್ ಹಾಗೂ ಹರ್ಷಲ್ ಪಟೇಲ್ ರವರ ಆಯ್ಕೆ ಕೂಡ ಇದೇ ದೃಷ್ಟಿಯನ್ನಿಟ್ಟುಕೊಂಡು ನಡೆದಿದೆ ಎಂದು ಹೇಳಬಹುದಾಗಿದೆ.

ಯಾಕೆಂದರೆ ಇವರು ಬೌಲಿಂಗ್ನಲ್ಲಿ ವೈವಿಧ್ಯತೆಯನ್ನು ತರಬಹುದಾಗಿದೆ. ಇವರ ಜೊತೆಗೆ ಅನುಭವಿ ಬೌಲರ್ ಗಳಾಗಿರುವ ಮೊಹಮ್ಮದ್ ಶಮಿ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ ಕುಮಾರ್ ಅವರು ಕೂಡ ಇರುತ್ತಾರೆ. ಸದ್ಯಕ್ಕೆ ಇವರಿಗೆ ವಿಶ್ರಾಂತಿ ನೀಡಲಾಗಿದೆ. ಸ್ಪಿನ್ ವಿಭಾಗದಲ್ಲಿ ಹೇಳುವುದಾದರೆ ಕುಲದೀಪ್ ಯಾದವ್ ಮತ್ತೆ ತಂಡಕ್ಕೆ ವಾಪಸಾಗಿದ್ದಾರೆ. ಇವರೊಂದಿಗೆ ರವಿ ಬಿಷ್ನೋಯ್ ಹಾಗೂ ಚಹಾಲ್ ಕೂಡ ಇರಲಿದ್ದಾರೆ. ಈ ಮಾಸ್ಟರ್ ಪ್ಲಾನ್ ಮೊದಲಿಗೆ ವೆಸ್ಟ್ಇಂಡೀಸ್ ಸರಣಿಯಲ್ಲಿ ವರ್ಕೌಟ್ ಆದರೆ ಇದನ್ನು ಇನ್ನಷ್ಟು ಉತ್ತಮ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬಹುದಾಗಿದೆ.