ದ್ರಾವಿಡ್ ಲಕ್ಷ್ಮಣ್ ನಂತರ ಜಯ್ ಷಾ ಹಾಗೂ ಗಂಗೂಲಿ ಇಂದ ಮತ್ತೊಂದು ಮ್ಯಾಜಿಕ್, ಬರುವುದೇ ಇಲ್ಲ ಎನ್ನುತ್ತಿದ್ದ ಲೆಜೆಂಡ್ ವಾಪಾಸ್ ಕ್ರಿಕೆಟ್ ಲೋಕಕ್ಕೆ. ಯಾರು ಗೊತ್ತೇ??

ದ್ರಾವಿಡ್ ಲಕ್ಷ್ಮಣ್ ನಂತರ ಜಯ್ ಷಾ ಹಾಗೂ ಗಂಗೂಲಿ ಇಂದ ಮತ್ತೊಂದು ಮ್ಯಾಜಿಕ್, ಬರುವುದೇ ಇಲ್ಲ ಎನ್ನುತ್ತಿದ್ದ ಲೆಜೆಂಡ್ ವಾಪಾಸ್ ಕ್ರಿಕೆಟ್ ಲೋಕಕ್ಕೆ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು 90 ರ ದಶಕದವರಾಗಿದ್ದರೇ ನಿಮ್ಮ ನೆಚ್ಚಿನ ಕ್ರಿಕೇಟರ್ ಗಳು ಯಾರೆಂದರೇ ನೀವು ಥಟ್ ಅಂತ ಹೇಳುವುದು ಸಚಿನ್, ಸೌರವ್ ಹಾಗೂ ದ್ರಾವಿಡ್ ಎಂದು. ದಶಕಗಳ ಕಾಲ ಕ್ರಿಕೇಟ್ ಅಭಿಮಾನಿಗಳನ್ನು ರಂಜಿಸಿದ್ದ ತ್ರಿಮೂರ್ತಿಗಳು ಈಗ ಕ್ರಿಕೇಟ್ ಆಡುವುದರಿಂದ ದೂರವುಳಿದರೂ, ಕ್ರಿಕೇಟ್ ಸಂಭಂದಿತ ಇನ್ನಿತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ.

ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಸದ್ಯ ಬಿಸಿಸಿಐ ನ ಅಧ್ಯಕ್ಷರಾಗಿದ್ದಾರೆ. ಕನ್ನಡಿಗ ಹಾಗೂ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಸದ್ಯ ಭಾರತೀಯ ಕ್ರಿಕೇಟ್ ತಂಡದ ಮುಖ್ಯ ಕೋಚ್ ಹುದ್ದೆ ಅಲಂಕರಿಸಿದ್ದಾರೆ. ಈ ಹಿಂದೆ ಅವರು ಎನ್.ಸಿ.ಎ ಮುಖ್ಯಸ್ಥರಾಗಿ ಹಾಗೂ ಭಾರತ ಎ ಮತ್ತು ಭಾರತ ಅಂಡರ್ 19 ತಂಡದ ಕೋಚ್ ಹುದ್ದೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸದ್ಯ ಈಗ ಹೈದರಾಬಾದ್ ನ ಕಲಾತ್ಮಕ ಬ್ಯಾಟ್ಸಮನ್ ವೆಂಗಿಪುರಪ್ಪ ವೆಂಕಟಸಾಯಿ ಲಕ್ಷ್ಮಣ್ ಸಹ ಸದ್ಯ ಎನ್.ಸಿ.ಎ ಕ್ರಿಕೇಟ್ ಮುಖ್ಯಸ್ಥ ಹುದ್ದೆಯಲ್ಲಿದ್ದಾರೆ.

ಆದರೇ ಭಾರತೀಯ ಕ್ರಿಕೇಟ್ ನ ಲೆಜೆಂಡ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ ಮಾತ್ರ ಮುಂಬೈ ಇಂಡಿಯನ್ಸ್ ಮೆಂಟರ್ ಆಗಿದ್ದರು. ಈಗ ಅವರನ್ನು ಸಹ ಭಾರತೀಯ ಕ್ರಿಕೇಟ್ ಸಧೃಡಗೊಳಿಸಲು ಬಿಸಿಸಿಐ ನ ಬಿಗ್ ಬಿ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜೈ ಶಾ ಯೋಜನೆಯೊಂದನ್ನ ಹಾಕಿಕೊಂಡಿದ್ದಾರೆ. ಸಚಿನ್ ಗಾಗಿಯೇ ಭಾರತ ತಂಡದಲ್ಲಿ ವಿಶೇಷವಾದ ಹುದ್ದೆಯೊಂದನ್ನು ಸೃಷ್ಠಿಸಲು ಈಗ ಮುಂದಾಗಿದೆ‌. ಭಾರತೀಯ ತಂಡದ ಸಲಹೆಗಾರ ಎಂಬ ಹುದ್ದೆ ಸೃಷ್ಠಿಸಿ ಅದಕ್ಕೆ ಸಚಿನ್ ತೆಂಡೂಲ್ಕರ್ ರವರನ್ನು ಕೂರಿಸಲು ಮುಂದಾಗಿದೆ. ಆದರೇ ಬಿಸಿಸಿಐನ ಈ ಆಫರ್ ನ್ನು ಸಚಿನ್ ಒಪ್ಪುತ್ತಾರೋ ಇಲ್ಲವೋ ಎಂಬುದನ್ನ ಕಾದು ನೋಡಬೇಕಿದೆ. ಸಚಿನ್ ಮನವೊಲಿಸುವ ಜವಾಬ್ದಾರಿಯನ್ನ ಖುದ್ದು ಸೌರವ್ ಗಂಗೂಲಿ ಹಾಗೂ ಜಯ್ ಶಾ ವಹಿಸಿಕೊಂಡಿದ್ದಾರಂತೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.