ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಒಟ್ಟಿಗೆ ಆಟವಾಡಿ ಬೆಳೆದವರ ಮದ್ಯೆ ಇದೆ ಅದೊಂದು ಅಸಮಾಧಾನ. ರಾಹುಲ್ ಎಂದರೆ ನನಗೆ ಇಷ್ಟವಿಲ್ಲ ಎಂದ ಮಯಾಂಕ್. ಯಾಕಂತೆ ಗೊತ್ತೇ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರವಾಲ್ ಬಗ್ಗೆ ನಿಮಗೆ ತಿಳಿದೇ ಇದೆ. ಇಬ್ಬರೂ ಗಳಸ್ಯ ಹಾಗೂ ಕಂಠಸ್ಯ ಸ್ನೇಹಿತರು. ಕ್ಲಬ್ ಕ್ರಿಕೇಟ್ ಸಮಯದಿಂದಲೂ ಇಬ್ಬರು ಆರಂಭಿಕರಾಗಿ ಆಡಿದವರು. ನಂತರ 2009ರಲ್ಲಿ ನಡೆದ ಅಂಡರ್ 19 ತಂಡದಲ್ಲಿ ಭಾರತ ತಂಡದ ಪರ ಆಡುವಾಗ ಸಹ ಆರಂಭಿಕರಾಗಿಯೇ ಕಣಕ್ಕಿಳಿದವರು. ಅದರ ಜೊತೆ ಕರ್ನಾಟಕ ರಣಜಿ ತಂಡದ ಪರ ಸಹ ಒಟ್ಟಿಗೆ ಆಡಿದವರು. ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಸಹ ಇವರಿಬ್ಬರೇ ಆರಂಭಿಕರಾಗಿ ಕಣಕ್ಕಿಳಿದವರು.

ಕ್ರೀಡೆಯ ಹೊರತಾಗಿ ಸಹ ಇವರಿಬ್ಬರು ಮೈದಾನದ ಹೊರಗಡೆಯೂ ಸಹ ಆತ್ಮೀಯರೇ. ರಜಾ ದಿನಗಳಲ್ಲಿ ಒಟ್ಟಾಗಿಯೇ ಹೊರಗಡೆ ಹೋಗುತ್ತಾರೆ, ಜಾಹೀರಾತುಗಳಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹ ಮಯಾಂಕ್ ಅಗರವಾಲ್ ಈಗ ಕೆ.ಎಲ್.ರಾಹುಲ್ ಬಗ್ಗೆ ಸ್ವಲ್ಪ ಬೇಸರ ಹೊಂದಿದ್ದಾರೆ. ಅದಕ್ಕೆ ಕಾರಣ ರಾಹುಲ್ ಅವರ ಒಂದು ಗುಣ, ಮಯಾಂಕ್ ಗೆ ಇಷ್ಟವಾಗುವುದಿಲ್ಲವಂತೆ. ಇತ್ತೀಚೆಗೆ ಸ್ಪೋರ್ಟ್ ಕ್ರೀಡಾ ಚಾನೆಲ್ ಗೆ ಸಂದರ್ಶನ ನೀಡುವ ಸಂದರ್ಭದಲ್ಲಿ ರಾಹುಲ್ ಬಗ್ಗೆ ತಮ್ಮ ಮನದಾಳದ ಮಾತನ್ನು ಬಿಚ್ಚಿಕೊಂಡಿದ್ದಾರೆ.

ಆಗ ಸಂದರ್ಶಕರು, ರಾಹುಲ್ ರಲ್ಲಿ ನಿಮಗೆ ಯಾವ ಗುಣ ಇಷ್ಟವಾಗುವುದಿಲ್ಲ ಎಂದು ಕೇಳಿದರು. ಅದಕ್ಕೆ ನೇರವಾಗಿ ಉತ್ತರಿಸಿದ ಮಯಾಂಕ್ ರಾಹುಲ್ ರವರ ಶಾಂತ ಸ್ವಭಾವ ನನಗೆ ಇಷ್ಟವಾಗುವುದಿಲ್ಲ. ಅವರು ಆಕ್ರಮಣಕಾರಿ ಅಲ್ಲ ಎಂದು ಹೇಳಿದರು. ರಾಹುಲ್ ನಾಯಕತ್ವದಡಿಯಲ್ಲಿ ನಾನು ಆಡಲು ಹೆಚ್ಚು ಇಷ್ಟಪಡುತ್ತೇನೆ ಎಂದು ಹೇಳಿದರು‌. ಆದರೇ ಮುಂದಿನ ಸರಣಿಗಳಲ್ಲಿ ಮಯಾಂಕ್ ರನ್ನ ಭಾರತ ತಂಡಕ್ಕೆ ಸೇರಿಸಿಕೊಳ್ಳುವುದು ಅನುಮಾನ. ಏಕೆಂದರೇ ಅವರು ಒಂದು ಮ್ಯಾಚ್ ಆಡಿದರೇ, ಹತ್ತು ಮ್ಯಾಚ್ ಆಡುವುದಿಲ್ಲ. ಇದು ದಕ್ಷಿಣ ಆಫ್ರಿಕಾ ಸರಣಿಯಲ್ಲಿಯೂ ಮುಂದುವರೆದಿದೆ. ಹಾಗಾಗಿ ಮಯಾಂಕ್ ಗೆ ಟೀಮ್ ಇಂಡಿಯಾದಲ್ಲಿ ಇನ್ನೊಂದು ಅವಕಾಶ ಸಿಗುವುದು ಅನುಮಾನ ಎಂಬಂತಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.