2022 ರ ಹೊಸ್ತಿಲಿನಲ್ಲಿ ಸಿಲಿಕಾನ್ ಸಿಟಿಗೆ ಬರಲಿದೆ 5 ಜಿ ಸೇವೆ; ಈಗ ಇಂಟರ್ನ್ನೆಟ್ ಇನ್ನಷ್ಟು ಸ್ಪೀಡ್. ಹೇಗಿರಲಿದೆ ಗೊತ್ತೇ ಹೊಸ ಆವೃತ್ತಿ??

2022 ರ ಹೊಸ್ತಿಲಿನಲ್ಲಿ ಸಿಲಿಕಾನ್ ಸಿಟಿಗೆ ಬರಲಿದೆ 5 ಜಿ ಸೇವೆ; ಈಗ ಇಂಟರ್ನ್ನೆಟ್ ಇನ್ನಷ್ಟು ಸ್ಪೀಡ್. ಹೇಗಿರಲಿದೆ ಗೊತ್ತೇ ಹೊಸ ಆವೃತ್ತಿ??

ನಮಸ್ಕಾರ ಸ್ನೇಹಿತರೇ 2022 ರ ಆರಂಭದಲ್ಲೆ ಬೆಂಗಳೂರು, ಮುಂಬೈ, ದೆಹಲಿ, ಅಹಮದಾಬಾದ್‌ ಸೇರಿದಂತೆ 13 ಮಹಾ ನಗರಗಳಲ್ಲಿ 5ಜಿ ಸೇವೆ ಬದಗಿಸಲಿದ್ದೇವೆ ಎಂದು ದೂರಸಂಪರ್ಕ ಇಲಾಖೆ ಹೇಳಿದೆ. ೨೦೨೨ರ ಮಾರ್ಚ್ ಎಪ್ರೀಲ್ ತಿಂಗಳಿನಿಂದಲೇ 5ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆ ಆರಂಭವಾಗಲಿದೆ.

ಟೆಲಿಕಾಂ ಕಂಪನಿಗಳಾದ ಏರ್‌ಟೆಲ್‌, ರಿಲಯನ್ಸ್‌ ಜಿಯೋ, ವೊಡಾಫೋನ್‌-ಐಡಿಯಾ ಮೊದಲಾದವುಗಳ ಪಾಲುದಾರಿಕೆಯಲ್ಲಿ ತರಂಗಾಂತರಗಳ ಹಂಚಿಕೆಯಾಗಲಿದ್ದು ಈಗಾಗಲೇ ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ಮುಂಬೈ, ಚಂಡೀಗಢ, ದೆಹಲಿ, ಜಾಮ್‌ನಗರ, ಅಹಮದಾಬಾದ್‌, ಲಖನೌ, ಚೆನ್ನೈ, ಹೈದ್ರಾಬಾದ್‌, ಪುಣೆ ಮತ್ತು ಗಾಂಧೀ ನಗರಗಳಲ್ಲಿ 5ಜಿ ಸ್ಪೆಕ್ಟ್ರಂ ಪ್ರಯೋಗ ನಡೆಸಲಾಗುತ್ತಿದೆ.

5ಜಿ ಲಾಭ ಏನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. 4ಜಿಗಿಂತ 100 ಪಟ್ಟು ಹೆಚ್ಚು ವೇಗದ ಇಂಟರ್ನೆಟ್‌ ಹೊಂದಿರುತ್ತೆ ೫ಜಿ. ಹೀಗಾಗಿ ನಿರ್ವಹಣಾ ವೆಚ್ಚವೂ ಕೂಡ ಕಡಿಮೆಯಾಗುತ್ತದೆ. ಇನ್ನು ಯಾವುದೇ ಡೌನ್ ಲೋಡ್ ಪ್ರಕ್ರಿಯೆಗಳೂ ಲೋಡಿಂಗ್ ಇಲ್ಲದೇ ಕ್ಷಣಾರ್ಧದಲ್ಲಿ ನಡೆಯುತ್ತದೆ. ಇನ್ನು ನೆಟ್ ಸ್ಪೀಡ್ ಆಗುತ್ತಿದ್ದಂತೆ ಹೊಸ ಗೇಮಿಂಗ್‌, ವೀಡಿಯೋ ಉದ್ಯಮಕ್ಕೆ ಹೆಚ್ಚು ಅವಕಾಶಗಳು ದೊರೆಯಲಿವೆ.

ವಿಶ್ವದಲ್ಲಿ ಕೇವಲ 60 ದೇಶಗಳಲ್ಲಿ ಮಾತ್ರ ೫ಜಿ ಸೇವೆ ಲಭ್ಯವಿದ್ದು ಇದೀಗ ಭಾರತವೂ ಕೂಡ ಆ ಪಟ್ಟಿಗೆ ಸೇರ್ಪಡೆಯಾಗಲಿದ. ಇದು ತಂತ್ರಜ್ಞಾನದ ವಿಷಯದಲ್ಲಿ ಭಾರತ ಇಡುತ್ತಿರುವ ಮಹತ್ತರ ಹೆಜ್ಜೆಯಾಗಿದ್ದರೂ ಕೂಡ ಇದರಿಂದ ಅಪಾಯವೂ ತಪ್ಪಿದ್ದಲ್ಲ. 4G ಟೆಕ್ನಾಲಜಿಯಿಂದಲೇ ಈಗಾಗಲೇ ನಮ್ಮಲ್ಲಿ ಹಲವು ಪ್ರಾಣಿ ಸಂಕುಲಗಳು ನಾಶಗೊಂಡಿವೆ. ಹೀಗಾಗಿ ಸರಿಯಾಗಿ ಪರೀಕ್ಷೆ ಮಾಡದೇ ೫ಜಿಗೆ ಅವಕಾಶ ಕೊಡದಂತೆ ನಟಿ ಜೂಹಿ ಚಾವ್ಲಾ, ವಿರೇಶ್ ಮಲಿಕ್ ಹಾಗೂ ಟೀನಾ ವಾಚನಿ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ಮಾಧ್ಯಮ ಪ್ರಚಾರ ಗಿಟ್ಟಿಸಿಕೊಳ್ಳಲ ಹಾಗೂ ಕಾನೂನ ಪ್ರಕ್ರಿಯೆ ದುರುಪಯೋಗ ಪಡಿಸಕೊಳ್ಳಲು ಬಳಸಿಕೊಂಡಿದ್ದಾರೆ ಎಂದು ದೆಹಲಿ ಹೈಕೋರ್ಟ್ ಹೇಳಿದ್ದು ಅರ್ಜಿದಾರರಿಗೆ 20 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಇನ್ನು ಜನರಿಗೆ ಲಭ್ಯವಿರುವ ಕಾಗೂ ಪ್ರಾಣಿ ಸಂಕೂಲಕ್ಕೂ ಮಾರಕವಾಹಲೂ ಬಹುದಾದ ೫ಜಿ ಸೇವೆ ಹೇಗೆ ಅನುಷ್ಠಾನಕ್ಕೆ ಬರುತ್ತದೆಯೋ ಕಾದು ನೋಡಬೇಕು.