ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹರಾಜಿಗೂ ಮುನ್ನವೇ ಆಡುವ ಹನ್ನೊಂದರ ಬಳಗವನ್ನ ಪ್ರಕಟಿಸಿದ ಅಹಮದಾಬಾದ್ ತಂಡ, ಹೇಗಿದೆ ಗೊತ್ತೇ ಬಲಿಷ್ಠ ತಂಡದ ಪ್ಲಾನ್??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ ಮೆಗಾ ಹರಾಜಿಗೆ ಇನ್ನು ಒಂದು ತಿಂಗಳು ಬಾಕಿ ಇದೆ. ಹಾಲಿ ಇರುವ ಫ್ರಾಂಚೈಸೀಗಳು ಕೆಲವು ಆಟಗಾರರನ್ನ ರಿಟೇನ್ ಮಾಡಿಕೊಂಡಿವೆ. ಈ ನಡುವೆ ಹೊಸ ಫ್ರಾಂಚೈಸಿಗಳಾದ ಅಹಮದಾಬಾದ್ ಹಾಗೂ ಲಕ್ನೋ ತಂಡಗಳು ಹರಾಜಿಗೂ ಮುನ್ನ ಕೆಲವು ಆಟಗಾರರನ್ನುಖರೀದಿಸಬಹುದು ಎಂದು ಹೇಳಿದೆ. ಹಾಗಾಗಿ ಹರಾಜಿಗೂ ಮುನ್ನ ಮೂವರು ಆಟಗಾರರ ಜೊತೆ ತನ್ನ ಕನಸಿನ ಹನ್ನೊಂದರ ತಂಡ ಹೀಗಿದೆ ಎಂದು ಅಹಮದಾಬಾದ್ ಫ್ರಾಂಚೈಸಿ ಹೇಳಿದೆ.

ಹರಾಜಿಗೂ ಮುನ್ನ ಶ್ರೇಯಸ್ ಅಯ್ಯರ್, ಆರ್.ಅಶ್ವಿನ್, ಶಾರ್ದೂಲ್ ಠಾಕೂರ್ ರವರನ್ನ ಖರೀದಿಸಲಿದೆ ಎಂದು ಹೇಳಲಾಗುತ್ತಿದೆ. ಅದಾದ ನಂತರ ಹರಾಜಿನಲ್ಲಿ ಇಂಗ್ಲೆಂಡ್ ನ ಜಾನಿ ಬೈರ್ ಸ್ಟೋ, ಇಯಾನ್ ಮಾರ್ಗನ್, ಬಾಂಗ್ಲಾ ದೇಶದ ಶಕೀಬ್ ಅಲ್ ಹಸನ್, ವೆಸ್ಟ್ ಇಂಡೀಸ್ ನ ಜೇಸನ್ ಹೋಲ್ಡರ್ ಮೇಲೆ ಕಣ್ಣಿಟ್ಟಿದೆ. ಈ ಜೊತೆ ಭಾರತದ ಯುವ ಆಟಗಾರರಾದ ದೇವದತ್ ಪಡಿಕ್ಕಲ್, ರವಿ ಬಿಷ್ಣೋಯಿ,.ಚೇತನ್ ಸಕಾರಿಯಾ, ಮಹಮದ್ ಅಜರುದ್ದೀನ್ ಮೇಲೆ ಕಣ್ಣಿಟ್ಟಿದೆ. ಈ ತಂಡದ ನಾಯಕರಾಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗುವುದು ಬಹುತೇಖ ಖಚಿತವಾಗಿದ್ದು, ಯುವ ಹಾಗೂ ಅನುಭವಿ ಹೊಡಿ-ಬಡಿ ಆಟಗಾರರ ತಂಡವನ್ನು ಕಟ್ಟುವ ಆಸೆ ಇಟ್ಟುಕೊಂಡಿದೆ ಅಹಮದಾದ್ ಫ್ರಾಂಚೈಸಿ.

ಇನ್ನು ಭಾರತದ ವೇಗಿಗಳಾದ ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣರ ಮೇಲೂ ಸಹ ಕಣ್ಣಿಟ್ಟಿದೆ. ನಾಯಕತ್ವ ವಿಚಾರದಲ್ಲಿ ಶ್ರೇಯಸ್ ಗೆ ಸಲಹೆ ನೀಡಲು ಇಯಾನ್ ಮಾರ್ಗನ್ ನೆರವಾಗಲಿದ್ದಾರೆ. ಇನ್ನು ಆಲ್ ರೌಂಡರ್ ಗಳಾದ ಶಕೀಬ್ ಅಲ್ ಹಸನ್ ಹಾಗೂ ಜೇಸನ್ ಹೋಲ್ಡರ್ ತಂಡಕ್ಕೆ ಆಧಾರವಾಗಲಿದ್ದಾರೆ. ಒಟ್ಟಿನಲ್ಲಿ ಈ ಭಾರಿ ಶತಾಯಗತಾಯ ತಮ್ಮ ತಂಡವನ್ನ ಗೆಲ್ಲಿಸಲೇಬೇಕೆಂಬ ಇರಾದೆ ಹೊಂದಿರುವ ಅಹಮದಾಬಾದ್ ತಂಡ ಮತ್ತಷ್ಟು ಟಿ 20 ಅನುಭವಿಗಳಿಗಾಗಿ ಹುಡುಕಾಟ ನಡೆಸಿದೆ. ಸದ್ಯದ ಮಾಹಿತಿ ಪ್ರಕಾರ ಅಹಮದಾಬಾದ್ ಫ್ರಾಂಚೈಸಿಯ ಸಂಭಾವ್ಯ ಇಲೆವೆನ್ ತಂಡ ಹೀಗಿದೆ. ಮಹಮದ್ ಅಜರುದ್ದೀನ್, ದೇವದತ್ ಪಡಿಕ್ಕಲ್ (ಒಪನರ್ಸ್), ಜಾನಿ ಬೈರ್ ಸ್ಟೋವ್ (ವಿಕೇಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ) ಇಯಾನ್ ಮಾರ್ಗನ್, ಶಕೀಬ್ ಅಲ್ ಹಸನ್ , ಜೇಸನ್ ಹೋಲ್ಡರ್ (ಆಲ್ ರೌಂಡರ್ಸ್), ಶಾರ್ದೂಲ್ ಠಾಕೂರ್, ಆರ್.ಅಶ್ವಿನ್, ರವಿ ಬಿಷ್ಣೋಯಿ, ಚೇತನ್ ಸಾಕರಿಯಾ.

Get real time updates directly on you device, subscribe now.