ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆರ್ಸಿಬಿ ತಂಡ ಈ ಬಾರಿ ಹಳೆಯ ಇಬ್ಬರನ್ನು ಹಾಗೂ ಹೊಸ ಈ ಆಲ್ ರೌಂಡರ್ ಅನ್ನು ಖರೀದಿ ಮಾಡಲೇಬೇಕು. ಕಣ್ಣಿಟ್ಟಿರುವ ಟಾಪ್ 3 ಆಟಗಾರರು ಯಾರ್ಯಾರು ಗೊತ್ತೇ?

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪ್ರತಿ ಭಾರಿ ಐಪಿಎಲ್ ಶುರುವಾದಾಗ ಈ ಸಲ ಕಪ್ ನಮ್ಮದೇ ಎಂಬ ಕೂಗು ಕೇಳಿ ಬರುತ್ತದೆಯಾದರೂ ಆ ಕನಸು ನನಸಾಗುತ್ತಿಲ್ಲ. ಸದ್ಯ ಈ ಭಾರಿ ಆಟಗಾರರ ಮೆಗಾ ಹರಾಜು ನಡೆಯಲಿದ್ದು, ಈ ಭಾರಿಯಾದರೂ ಆರ್ಸಿಬಿ ತಂಡ ಬಲಿಷ್ಠ ತಂಡ ಕಟ್ಟಿ ಕಪ್ ಗೆಲ್ಲಬೇಕು ಎಂಬುದು ಆರ್ಸಿಬಿ ಅಭಿಮಾನಿಗಳ ಕನಸು. ಸದ್ಯ ಆರ್ಸಿಬಿ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, ಅವರೆಂದರೇ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸವೆಲ್ ಹಾಗೂ ಮಹಮದ್ ಸಿರಾಜ್. ತಂಡ ಮತ್ತಷ್ಟು ಬಲಿಷ್ಠಗೊಳ್ಳಲು ಈ ಮೂವರನ್ನ ಆರ್ಸಿಬಿ ಕಡ್ಡಾಯವಾಗಿ ಖರೀದಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಬನ್ನಿ ಅವರು ಯಾರೆಂದು ತಿಳಿಯೋಣ.

ಮೊದಲನೆಯದಾಗಿ ಯುಜವೆಂದ್ರ ಚಾಹಲ್ : ಆರ್ಸಿಬಿ ತಂಡದ ಖಾಯಂ ಸ್ಪಿನ್ನರ್ ಆಗಿದ್ದ ಚಾಹಲ್, ಆರ್ಸಿಬಿ ಪರ ಅತಿ ಹೆಚ್ಚು ವಿಕೇಟ್ ಪಡೆದ ಆಟಗಾರ ಎಂಬ ಹೆಸರು ಪಡೆದಿದ್ದಾರೆ. ಆರ್ಸಿಬಿ ತಂಡ ಸಂಕಷ್ಟದಲ್ಲಿದ್ದಾಗ ವಿಕೇಟ್ ತೆಗೆದು ಕೊಟ್ಟಿದ್ದಾರೆ. ಹಾಗಾಗಿ ಆರ್ಸಿಬಿ ಫ್ರಾಂಚೈಸಿ ಇವರನ್ನ ಹರಾಜಿನಲ್ಲಿ ಖರೀದಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಎರಡನೆಯದಾಗಿ ಹರ್ಷಲ್ ಪಟೇಲ್ : ಕಳೆದ ವರ್ಷದ ಪರ್ಪಲ್ ಕ್ಯಾಪ್ ಹೋಲ್ಡರ್ ಪಟೇಲ್, ಅನಕ್ಯಾಪ್ ಆಟಗಾರನೊಬ್ಬ ಅತಿ ಹೆಚ್ಚು ವಿಕೇಟ್ ಪಡೆದ ದಾಖಲೆ ಮಾಡಿದ್ದರು. ಡೆತ್ ಓವರ್ ಗಳಲ್ಲಿ ತಮ್ಮ ಕರಾರೀವಕ್ಕು ಬೌಲಿಂಗ್ ನಿಂದ ಗಮನ ಸೆಳೆದ ಹರ್ಷಲ್ ರನ್ನ ಈ ಭಾರಿಯೂ ಆರ್ಸಿಬಿ ತಂಡವೇ ಖರೀದಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಮೂರನೆಯದಾಗಿ ಬೆನ್ ಸ್ಟೋಕ್ಸ್ : ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹರಾಜಿನಲ್ಲಿ ಲಭ್ಯರಿದ್ದಾರೆ. ಆರ್ಸಿಬಿಗೆ ಜಾಕ್ ಕಾಲೀಸ್ ನಂತರ ನಾಲ್ಕು ಓವರ್ ಬೌಲಿಂಗ್ ಮಾಡುವ ಹಾಗೂ ಭರ್ಜರಿಯಾಗಿ ಬ್ಯಾಟಿಂಗ್ ಆಡುವ ಆಟಗಾರ ಸಿಕ್ಕಿಲ್ಲ. ಈ ಭಾರಿಯಾದರೂ, ಬೆನ್ ಸ್ಟೋಕ್ಸ್ ಖರೀದಿಸಿ, ಆ ಕೊರತೆಯನ್ನ ನೀಗಿಸಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.