ದುಬೈ ನೆಲಕ್ಕೆ ತಕ್ಕಂತೆ ಟಿ 20 ವಿಶ್ವಕಪ್ ಗೆ ಹೊಸ ನಿಯಮಗಳನ್ನು ಜಾರಿ ಮಾಡಿದ ಐಸಿಸಿ, ಯಾವೆಲ್ಲ ನಿಯಮ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಹುನೀರಿಕ್ಷಿತ ಟಿ 20 ವಿಶ್ವಕಪ್ ಇನ್ನೊಂದು ವಾರದಲ್ಲಿ ಆರಂಭವಾಗಲಿದೆ. ಆದರೇ ಈ ಭಾರಿ ಐಸಿಸಿ ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಇದೇ ಮೊದಲ ಭಾರಿಗೆ ಅರ್ಹತಾ ಸುತ್ತಿನಲ್ಲಿ ತೇರ್ಗಡೆಯಾಗುವ ತಂಡಗಳನ್ನ ಸೇರಿಸಿ ಸೂಪರ್ 12 ಎಂಬ ಸುತ್ತನ್ನ ಜಾರಿಗೆ ತಂದಿದೆ. ವಿಶ್ವಕಪ್ ಅರ್ಹತಾ ಸುತ್ತು ಇಂದಿನಿಂದ ಆರಂಭವಾಗುತ್ತಿದ್ದು, ಕ್ರಿಕೇಟ್ ಆಡುವ ದೇಶಗಳಲ್ಲಿ 8 ದೇಶದ ತಂಡಗಳು ಅರ್ಹತಾ ಸುತ್ತಿನಲ್ಲಿ ಆಡುತ್ತಿದ್ದು, ಇದರಲ್ಲಿ ಟಾಪ್ 4 ದೇಶಗಳು ಮುಖ್ಯ ಸುತ್ತಿಗೆ ಅರ್ಹತೆ ಪಡೆಯಲಿವೆ. ಇದೇ ಮೊದಲ ಭಾರಿಗೆ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಿ ಕ್ವಾಲಿಫೈ ಆಗುವ ಸ್ಥಿತಿ ಉಂಟಾಗಿದೆ.

ಆ ನಂತರ ಟೂರ್ನಿ ಅಧಿಕೃತವಾಗಿ ಚಾಲನೆಯಾಗಲಿದ್ದು ಸೂಪರ್ 12 ಮಾದರಿಯಲ್ಲಿ ಟೂರ್ನಿ ಶುರುವಾಗಲಿದೆ. ಒಟ್ಟು ಹನ್ನೆರೆಡು ತಂಡಗಳನ್ನ ಎರಡು ಗುಂಪುಗಳಾಗಿ ವಿಭಾಗಿಸಲಾಗಿದ್ದು ಪ್ರತಿ ಗುಂಪಿನ ಟಾಪ್ 2 ತಂಡಗಳು ಸೆಮಿ ಫೈನಲ್ ತಲುಪಲಿವೆ. ಪ್ರತಿ ತಂಡ ಗೆದ್ದರೇ ಎರಡು ಅಂಕ ನೀಡಲಾಗುತ್ತಿದ್ದರೇ, ಪಂದ್ಯ ಟೈ ಆದರೇ 1 ಅಂಕ ಹಾಗೂ ಸೋತರೇ ಅಥವಾ ಮಳೆಯಿಂದ ಪಂದ್ಯ ರದ್ದಾದರೇ ಯಾವುದೇ ಅಂಕಗಳು ಸಹ ಲಭಿಸುವುದಿಲ್ಲ.

ಇನ್ನು ಪಂದ್ಯ ಟೈ ಆಗಿ ಸೂಪರ್ ಓವರ್ ನಲ್ಲಿ ಫಲಿತಾಂಶ ಬಾರದಿದ್ದರೇ, ಪಂದ್ಯದ ಫಲಿತಾಂಶ ನಿರ್ಣಯವಾಗುವವರೆಗೂ ಸೂಪರ್ ಓವರ್ ನ್ನು ಆಡಿಸಲಾಗುತ್ತಿದೆ. ಇನ್ನು ವಿಶೇಷವಾಗಿ ಸೆಮಿ ಫೈನಲ್ ಪಂದ್ಯಗಳು ಒಂದು ವೇಳೆ ಟೈ ಆಗಿ, ಸೂಪರ್ ಓವರ್ ಸಹ ಟೈ ಆದರೇ, ಆಗ ಸೂಪರ್ 12 ಪಾಯಿಂಟ್ಸ್ ಟೇಬಲ್ ನಲ್ಲಿ ಹೆಚ್ಚು ಪಾಯಿಂಟ್ಸ್ ಪಡೆದ ತಂಡ ನೇರವಾಗಿ ಫೈನಲ್ ಪ್ರವೇಶಿಸುತ್ತದೆ.

ಇನ್ನು ಇದೇ ಮೊದಲ ಭಾರಿ ಐಸಿಸಿ ಟಿ 20 ಕ್ರಿಕೇಟ್ ನಲ್ಲಿಯೂ ಸಹ ಡಿ.ಆರ್.ಎಸ್ ಜಾರಿಗೆ ತಂದಿದ್ದು, ಪ್ರತಿ ತಂಡಗಳಿಗೂ 2 ಡಿ‌.ಆರ್‌.ಎಸ್ ಮೇಲ್ಮನವಿ ಸಲ್ಲಿಸಬಹುದಾಗಿದೆ. ಇನ್ನು ಲೀಗ್ ಹಂತದ ಪಂದ್ಯದ ವೇಳೆ ಮಳೆ ಬಂದರೇ, ಆ ಪಂದ್ಯಗಳಿಗೆ ಮೀಸಲು ದಿನ ನಿಗದಿ ಪಡಿಸಿಲ್ಲ. ಆದರೇ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಮಳೆ ಅಡಚಣೆ ಮಾಡಿದರೇ, ಮೀಸಲು ದಿನ ಏರ್ಪಾಡಾಗಿರುತ್ತದೆ. ಮೀಸಲು ದಿನದಲ್ಲಿಯೂ ಮಳೆ ಅಡಚಣೆ ನೀಡಿದರೇ, ಪಂದ್ಯವನ್ನ ಹತ್ತು ಓವರ್ ಗಳ ತನಕ ಆಡಿಸಿ ನಂತರ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಆದರೇ ದುಬೈ, ಅಬುಧಾಬಿ, ಶಾರ್ಜಾದಲ್ಲಿ ಪಂದ್ಯ ನಡೆಯುವ ಕಾರಣ ಮಳೆಯ ಅಡಚಣೆ ಆಗುವುದಿಲ್ಲ. ಆದರೇ ಸ್ಯಾಂಡ್ ಸ್ಟಾರ್ಮ್ (ಮರಳು ಬಿರುಗಾಳಿ) ಆಗಾಗ ಪಂದ್ಯಕ್ಕೆ ಅಡಚಣೆ ನೀಡಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ‌.

Post Author: Ravi Yadav