ಐದನೇ ಟೆಸ್ಟ್ ಪಂದ್ಯಕ್ಕೆ ಮೇಜರ್ ಸರ್ಜರಿ ಮಾಡಿ ಎಂದ ವಿವಿಎಸ್ ಲಕ್ಷ್ಮಣ್, ಪಂದ್ಯ ಗೆದ್ದರೂ ಕೂಡ ಯಾರ್ಯಾರು ಬದಲಾಗಬೇಕಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಓವಲ್ ನಲ್ಲಿ ನಡೆದ ನಾಲ್ಕನೇ ಟೆಸ್ಟ್ ನಲ್ಲಿ ಭರ್ಜರಿ ಜಯಗಳಿಸುವ ಮೂಲಕ ತಾನು ಎಂತಹ ಸ್ಥಿತಿಯಲ್ಲಿದ್ದರೂ ಮರಳಿ ಕಂ ಬ್ಯಾಕ್ ಮಾಡುವ ತಂಡ ಎಂದು ನಿರೂಪಿಸಿದೆ. ಸರಣಿಯಲ್ಲಿ 2 – 1 ರ ಲೀಡ್ ಪಡೆದುಕೊಳ್ಳುವ ಮೂಲಕ ಮುಂದಿನ ಟೆಸ್ಟ್ ನಲ್ಲಿಯೂ ಸಹ ಜಯಗಳಿಸಿ ಸರಣಿಯನ್ನ ಸಂಪೂರ್ಣ ವಶಪಡಿಸಿಕೊಳ್ಳುವ ಚಿಂತನೆಯಲ್ಲಿದೆ. ಈ ಮಧ್ಯೆ ಮ್ಯಾಂಚೆಸ್ಟರ್ ನಲ್ಲಿ ನಡೆಯಲಿರುವ ಐದನೇ ಟೆಸ್ಟ್ ಬಗ್ಗೆ ಕಲಾತ್ಮಕ ಬ್ಯಾಟ್ಸಮನ್ ವಿ.ವಿ.ಎಸ್ ಲಕ್ಷ್ಮಣ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಾಯಕ ವಿರಾಟ್ ಕೊಹ್ಲಿಗೆ ಕೆಲವೊಂದು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.

ಪಂದ್ಯದ ಸಮಾರೋಪ ಸಭೆಯಲ್ಲಿ ಮಾತನಾಡುತ್ತಾ ಕೊಹ್ಲಿ ಬೌಲರ್ ಗಳನ್ನು ರೋಟೆಶನ್ ಆಧಾರದಲ್ಲಿ ಆಡಿಸಲಾಗುವುದು ಹಾಗಾಗಿ ಶಮಿಗೆ ವಿಶ್ರಾಂತಿ ನೀಡಿದ್ದೆವೆಂದು ಹೇಳಿದ್ದರು. ಆ ಪ್ರಕಾರ ಮುಂದಿನ ಟೆಸ್ಟ್ ಗೆ ಬುಮ್ರಾ ಸಹ ವಿಶ್ರಾಂತಿ ಪಡೆಯಬಹುದು ಎಂದು ಹೇಳಲಾಗಿತ್ತು. ಆದರೇ ಆ ನಿರ್ಧಾರಕ್ಕೆ ವಿರೋಧ ವ್ಯಕ್ತ ಪಡಿಸಿರುವ ವಿವಿಎಸ್ ಲಕ್ಷ್ಮಣ್ , ಜಸ್ಪ್ರಿತ್ ಬುಮ್ರಾ ಕೊನೆಯ ಟೆಸ್ಟ್ ಆಡಲೇಬೇಕು. ಈ ಮೂಲಕ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಬೇಕೆಂದರೇ ಭಾರತದ ಬೌಲಿಂಗ್ ಶಕ್ತಿಶಾಲಿಯಾಗಿರಬೇಕು. ಮಹಮದ್ ಶಮಿ ಫಿಟ್ ಆಗಿದ್ದರೇ, ಮಹಮದ್ ಸಿರಾಜ್ ಬದಲು ಅವರನ್ನ ಆಡಿಸಬೇಕು ಎಂದು ಹೇಳಿದ್ದಾರೆ.

ಇನ್ನು ಫಾರ್ಮ್ ಕಳೆದುಕೊಂಡಿರುವ ಅಜಿಂಕ್ಯಾ ರಹಾನೆ ಬದಲಿಗೆ ಹನುಮ ವಿಹಾರಿ ಗೆ ಸ್ಥಾನ ನೀಡಬೇಕೆಂದು ಲಕ್ಷ್ಮಣ್ ಹೇಳಿದ್ದಾರೆ. ಹನುಮ ವಿಹಾರಿ ಬಹಳಷ್ಟು ದಿನಗಳಿಂದ ಬೆಂಚ್ ಕಾಯಿಸಿದ್ದಾರೆ. ಇಂಗ್ಲೆಂಡ್ ನಲ್ಲಿ ಕೌಂಟಿ ಆಡಿರುವ ಅನುಭವ ಹೊಂದಿರುವ ಹನುಮ ವಿಹಾರಿ ಇಂಗ್ಲೆಂಡ್ ನೆಲದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸ ಇದೆ ಎಂದು ಲಕ್ಷ್ಮಣ್ ನುಡಿದಿದ್ದಾರೆ.

ಇನ್ನು ಸತತ ನಾಲ್ಕು ಟೆಸ್ಟ್ ಆಡಿರುವ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಿ, ಅವರ ಬದಲು ಆರ್.ಅಶ್ವಿನ್ ಅವರನ್ನ ಆಡಿಸಬೇಕು ಎಂದು ಹೇಳಿದ್ದಾರೆ. ಶಾರ್ದೂಲ್ ಠಾಕೂರ್ ಲಯದಲ್ಲಿರುವ ಕಾರಣ, ರವೀಂದ್ರ ಜಡೇಜಾ ಬದಲು ಅಶ್ವಿನ್ ಉತ್ತಮ ಆಯ್ಕೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ. ಐದನೇ ಟೆಸ್ಟ್ ನಲ್ಲಿ ಭಾರತ ಯಾವುದೇ ಕಾರಣಕ್ಕೂ ಸೋಲಬಾರದು. ಪಂದ್ಯವನ್ನು ಜಯಿಸಬೇಕು ಇಲ್ಲವೇ ಡ್ರಾ ಮಾಡಿಕೊಳ್ಳಬೇಕು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ಸರಣಿಯನ್ನು ಜಯಿಸುವ ಮೂಲಕ ಐತಿಹಾಸಿಕ ಗೆಲುವು ಪಡೆಯಬೇಕು ಎಂದು ಹೇಳಿದ್ದಾರೆ. ಐದನೇ ಟೆಸ್ಟ್ ಗೆ ವಿವಿಎಸ್ ಲಕ್ಷ್ಮಣ್ ಪ್ರಕಟಿಸಿರುವ ತಂಡ – ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ್, ವಿರಾಟ್ ಕೊಹ್ಲಿ, ಹನುಮ ವಿಹಾರಿ, ರಿಷಭ್ ಪಂತ್, ಶಾರ್ದೂಲ್ ಠಾಕೂರ್, ಆರ್.ಅಶ್ವಿನ್, ಉಮೇಶ್ ಯಾದವ್,ಮಹಮದ್ ಶಮಿ, ಜಸ್ಪ್ರಿತ್ ಬುಮ್ರಾ,

Post Author: Ravi Yadav