ಯೋಗಿ ನಾಡಲ್ಲಿ ಚುನಾವಣಾ ಅಖಾಡಕ್ಕೆ ಶೋಭಾ, ಮೊದಲ ಬಾರಿಗೆ ಶೋಭಾರವರಿಗೆ ಮಹತ್ವದ ಜವಾಬ್ದಾರಿ ನೀಡಿದ ಬಿಜೆಪಿ, ಏನು ಗೊತ್ತೇ??
ಯೋಗಿ ನಾಡಲ್ಲಿ ಚುನಾವಣಾ ಅಖಾಡಕ್ಕೆ ಶೋಭಾ, ಮೊದಲ ಬಾರಿಗೆ ಶೋಭಾರವರಿಗೆ ಮಹತ್ವದ ಜವಾಬ್ದಾರಿ ನೀಡಿದ ಬಿಜೆಪಿ, ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಅತ್ಯಂತ ದೊಡ್ಡ ರಾಜ್ಯವೆಂದರೇ ಅದು ಉತ್ತರ ಪ್ರದೇಶ. ಬರೋಬ್ಬರಿ 80 ಲೋಕಸಭಾ ಕ್ಷೇತ್ರ ಹಾಗೂ 402 ವಿಧಾನಸಭಾ ಕ್ಷೇತ್ರಗಳು ಈ ರಾಜ್ಯದಲ್ಲಿ ಬರುತ್ತವೆ. ಈ ರಾಜ್ಯವನ್ನು ಗೆದ್ದವರು ಭಾರತವನ್ನು ಗೆದ್ದಂತೆ ಎಂಬ ನಾಣ್ಣುಡಿ ಪ್ರಸಿದ್ಧವಾಗಿದೆ. ಇನ್ನು ಮುಂದಿನ ವರ್ಷ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯುವ ಈ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸಿದ್ದತೆ ಆರಂಭಿಸಿದ್ದು, ಇದೇ ಮೊದಲ ಭಾರಿಗೆ ಕನ್ನಡಿಗರೊಬ್ಬರಿಗೆ ಮಹತ್ವದ ಜವಾಬ್ದಾರಿ ನೀಡಿದೆ.
ಹೌದು ಕೇಂದ್ರ ರಾಜ್ಯ ಖಾತೆ ಕೃಷಿ ಸಚಿವೆ, ಕನ್ನಡತಿ ಶೋಭಾ ಕರಂದ್ಲಾಜೆಯವರಿಗೆ ಚುನಾವಣೆ ಉಸ್ತುವಾರಿ ಜವಾಬ್ದಾರಿಯನ್ನು ನೀಡಿದೆ. ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಮುಖ್ಯ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡಿದ್ದು, ಇವರಿಗೆ ಸಹ ಪ್ರಭಾರಿಗಳಾಗಿ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್,ಅರ್ಜುನ್ ರಾಮ್, ಅನ್ನಪೂರ್ಣ ದೇವಿಯವರ ಜೊತೆ , ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಸಹ ಸಹ ಪ್ರಭಾರಿಯಾಗಿ ಆಯ್ಕೆಗೊಂಡಿದ್ದಾರೆ.
ಈ ಮಹತ್ವದ ಜವಾಬ್ದಾರಿ ದೊರೆತಿರುವ ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿರುವ ಶೋಭಾ ಕರಂದ್ಲಜೆ , ಈ ಜವಾಬ್ದಾರಿಯನ್ನ ನೀಡಿರುವ ಕೇಂದ್ರ ನಾಯಕರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಅದಲ್ಲದೇ ಮುಂದಿನ ಉತ್ತರ ಪ್ರದೇಶ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಸರ್ಕಾರಗಳು ನೀಡಿರುವ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ, ಮತ್ತೊಮ್ಮೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಬರುವಂತೆ ಮಾಡುತ್ತವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸಿದ್ದು, ಶೋಭಾ ಕರಂದ್ಲಾಜೆಯವರ ಹಿಂದಿ ಭಾಷೆ ಅತ್ಯಂತ ದುರ್ಬಲವಾಗಿದ್ದು, ಅವರು ಹೇಗೆ ತಾನೇ ಸಂವಹನ ನಡೆಸಿ, ಉತ್ತರ ಪ್ರದೇಶದ ನಾಯಕರ, ಕಾರ್ಯಕರ್ತರ, ಜನರ ಜೊತೆ ಕೆಲಸ ಮಾಡಬಹುದು ಎಂಬ ಟ್ರೋಲ್ ಗಳು ಜೋರಾಗಿದೆ. ಒಟ್ಟಿನಲ್ಲಿ ಕರ್ನಾಟಕದ ಜನಪ್ರತಿನಿಧಿಯೊಬ್ಬರಿಗೆ ಬೇರೆ ರಾಜ್ಯದ ಚುನಾವಣೆಯ ಮಹತ್ವದ ಜವಾಬ್ದಾರಿ ದೊರೆತಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ತಿಳಿಸಿ.