ಪ್ರತಿಯೊಬ್ಬರ ಚಿನ್ನಕ್ಕೆ ಸಂಬಂಧಿಸಿದಂತೆ ಆಗಸ್ಟ್ 31ರಿಂದ ನಿಯಮಗಳು ಬದಲಾಗುತ್ತವೆ, ಯಾವೆಲ್ಲ ನಿಯಮಗಳು ಗೊತ್ತಾ??
ಪ್ರತಿಯೊಬ್ಬರ ಚಿನ್ನಕ್ಕೆ ಸಂಬಂಧಿಸಿದಂತೆ ಆಗಸ್ಟ್ 31ರಿಂದ ನಿಯಮಗಳು ಬದಲಾಗುತ್ತವೆ, ಯಾವೆಲ್ಲ ನಿಯಮಗಳು ಗೊತ್ತಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಚಿನ್ನದ ಆಭರಣದ ಪ್ರಿಯರು ಜಾಸ್ತಿ ಇದ್ದಾರೆ, ಇತರ ದೇಶಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ಹೆಚ್ಚಿನ ದಿನನಿತ್ಯದ ಬದುಕಿನಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದೆ, ಒಂದು ಚಿಕ್ಕ ಬಡ ಕುಟುಂಬದಿಂದ ಹಿಡಿದು ಶ್ರೀಮಂತರ ಕುಟುಂಬದವರೆಗೆ ಪ್ರತಿಯೊಬ್ಬರಿಗೂ ಕೂಡ ಚಿನ್ನ ಧರಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹೀಗೆ ಚಿನ್ನು ಪ್ರತಿಯೊಬ್ಬರ ಕನಸಾಗಿರುವ ಕಾರಣ ಅದರಂತೆ ವಂಚನೆಗಳು ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ
ಯಾಕೆಂದರೆ ಚಿನ್ನಕ್ಕೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿರುವ ಸಮಯದಲ್ಲಿ ವ್ಯಾಪಾರಿಗಳ ನಡುವೆ ಪೈಪೋಟಿ ಕೂಡ ಹೆಚ್ಚಾಗುತ್ತಿದೆ ಅಂತಹ ಸಮಯದಲ್ಲಿ ವಿವಿಧ ರೀತಿಯಲ್ಲಿ ಡಿಸ್ಕೌಂಟ್ ನೀಡಲು ಕಳಪೆ ಗುಣಮಟ್ಟದ ಚಿನ್ನವನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಹೀಗೆ ಕಡಿಮೆ ಗುಣಮಟ್ಟದ ಚಿನ್ನವನ್ನು ಕೊಂಡುಕೊಂಡು ಮತ್ತೆ ಮಾರಲು ಹೋದಾಗ ಚಿನ್ನ ಬಹಳ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ, ಕಷ್ಟ ಎಂದು ಬಂದಾಗ ಎಲ್ಲರಿಗೂ ಮೊದಲು ನೆನಪಾಗುವುದು ಚಿನ್ನ ಆದರೆ ಆ ಚಿನ್ನ ಕಡಿಮೆ ಗುಣಮಟ್ಟದ್ದು ಆಗಿದ್ದರೆ ನಮ್ಮ ಕಷ್ಟಗಳಿಗೆ ಯಾವುದೇ ಪರಿಹಾರ ನೀಡುವುದಿಲ್ಲ.
ಹಾಗೆಂದು ಚಿನ್ನ ಖರೀದಿ ಮಾಡಿದ ಹಲವಾರು ವರ್ಷಗಳ ನಂತರ ನೀವು ಗುಣಮಟ್ಟದ ಕುರಿತು ಪ್ರಶ್ನೆ ಮಾಡುವ ಯಾವುದೇ ಆಯ್ಕೆ ನಿಮ್ಮ ಮುಂದೆ ಇರುವುದಿಲ್ಲ, ಇದೇ ಕಾರಣಕ್ಕಾಗಿ ಇದೇ ತಿಂಗಳ ಕೊನೆಯಿಂದ ಅಂದರೆ ಆಗಸ್ಟ್ 31 ನೇ ತಾರೀಖಿನಿಂದ ಭಾರತದಲ್ಲಿ ಚಿನ್ನದ ಕುರಿತು ನಿಯಮಾವಳಿಗಳು ಬದಲಾಗಲಿದ್ದು ಪ್ರತಿ ವ್ಯಾಪಾರಿಯು ಕೂಡ ಹಾಲ್ಮಾರ್ಕ್ ಚಿನ್ನ ಮಾತ್ರ ಮಾರಾಟ ಮಾಡಬೇಕು, ಹಾಲ್ಮಾರ್ಕ್ ಮೌಲ್ಯಮಾಪನ ಇಲ್ಲದೆ ಒಂದು ಗ್ರಾಂ ಚಿನ್ನವನ್ನು ಕೂಡ ಮಾರಾಟ ಮಾಡುವುದನ್ನು ತಡೆಹಿಡಿಯಲಾಗಿದೆ. ಈ ಮೂಲಕ ನೀವು ಕಷ್ಟ ಎಂದು ಬಂದಾಗ ಚಿನ್ನ ಮಾರಾಟ ಮಾಡಲು ಹೋದರೆ ನಿಮಗೆ ಅಂದಿನ ದರದಲ್ಲಿ ಚಿನ್ನ ಮಾರಾಟ ಮಾಡಬಹುದಾಗಿದೆ ಹಾಗೂ ಚಿನ್ನ ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಳಿಸುವುದನ್ನು ಮರೆಯಬೇಡಿ