ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇಡೀ ಕರ್ನಾಟಕ ಮಕ್ಕಳ ಸಮಸ್ಯೆಗೆ ಹೊಸ ಪರಿಹಾರದೊಂದಿಗೆ ಮುಂದೆ ಬಂದ ಕಿಚ್ಚ ಸುದೀಪ್, ಮಾಡಿದ್ದೇನು ಗೊತ್ತೇ??

2

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಫೇಮಸ್ ಹಾಗೂ ಸಿನಿ ಪ್ರಿಯರ ನೆಚ್ಚಿನ ನಟ ಅಂದ್ರೆ ಅದು ಕಿಚ್ಚ ಸುದೀಪ್. ಇವರು ನಟನೆಯಲ್ಲಿ ಮಾತ್ರವಲ್ಲ, ಇನ್ನಿತರ ಸಮಾಜ ಮುಖಿ ಕಾರ್ಯಗಳನ್ನೂ ಮಾಡುವ ಮೂಲಕ ಹೆಸರು ಗಳಿಸಿದ್ದಾರೆ. ಅದರಲ್ಲೂ ಅಗತ್ಯವಿರುವ ಶಾಲೆಗಳನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದು ಕೂಡ ಒಂದು. ಇತ್ತೀಚಿಗೆ ಶೀವಮೊಗ್ಗದಲ್ಲಿ 103 ವರ್ಷ ಹಳೆಯ ಶಾಲೆಯೊಂದನ್ನು ದತ್ತು ತೆಗೆದುಕೊಂಡಿದ್ದು ನಮಗೆಲ್ಲಾ ಗೊತ್ತೇ ಇದೆ.

ಇನ್ನು ಕರೋನಾ ಸಮಯದಲ್ಲಿಯೂ ಕೂಡ ಸಾಕಷ್ಟು ಜನರಿಗೆ ಸಹಾಯ ಹಸ್ತ ಚಾಚಿರುವ ನಟ ಅಭಿನಯ ಚಕ್ರವರ್ತಿ, ಮಕ್ಕಳಿಗೆ ಆನ್ ಲೈನ್ ಕ್ಲಾಸ್ ನಿಂದ ಆಗುತ್ತಿರುವ ಕಿರಿಕಿರಿಯನ್ನು ಚೆನ್ನಾಗಿ ಬಲ್ಲರು. ಹಾಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಮಕ್ಕಳೂ ಕೂಡ ಖುಷಿಯಲ್ಲಿ ಅಧ್ಯಯನ ಮಾಡುವಂತೆ ಮಾಡಲು ಕಿಚ್ಚ ಹೊಸ ಆ್ಯಪ್ ಒಂದನ್ನು ಬಿಡುಗಡೆ ಮಾಡಿದ್ದಾರೆ.

ಕಿಚ್ಚ ಸುದೀಪ್ ಅವರ ಆ್ಯಪ್ ನಲ್ಲಿ ಏನ್ ಸ್ಪೇಶಲ್: ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಆನ್‌ಲೈನ್ ಕಲಿಕೆಗಾಗಿ ಮಕ್ಕಳಿಗೆ ಕಲಿಯಲು ಸುಲಭವಾಗುವಂಥ ಹಾಗೂ ಬಳಕೆಗೆ ಸರಳವಾಗುವಂಥ ಹೊಸ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಇದರಿಂದಾಗಿ ಆನ್ ಲೈನ್ ತರಗತಿಯನ್ನು ಕಷ್ಟಪಟ್ಟು ಕಲಿಯುವ ಅಗತ್ಯವಿಲ್ಲ. ಶಿಕ್ಷಣದ ಬಗ್ಗೆ ಹೆಚ್ಚು ಗಮನ ನೀಡುವ ಕಿಚ್ಚ ಸುದೀಪ್ ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಮಕ್ಕಳಿಗೆ ಅನುಕೂಲವಾಗುವ ಈ ಆ್ಯಪ್ ನ್ನು ಮಕ್ಕಳಿಗೆ ಪಾಠ ಸರಿಯಾಗಿ ಅರ್ಥ ಮಾಡಿಕೊಳ್ಳಲು ಅನುಕೂಲವಾಗುವಂತೆ ರೂಪಿಸಿದ್ದಾರೆ.

ಈ ಆ್ಯಪ್ ನ ಹೆಸರು ಡಾರ್ಕ್ ಬೋರ್ಡ್ ಆನಿಮೇಷನ್ ಎಜ್ಯೂಕೇಷನ್. ಇದನ್ನು ಬಳಸಿ ಶಾಲೆಗಳಲ್ಲಿ ಡಾರ್ಕ್ ಬೋರ್ಡ್ ರೂಮ್ ಮಾಡಿ ಪಾಠ ಮಾಡಬಹುದು. ಇದರಿಂದ ಮಕ್ಕಳಿಗೆ ಶಿಕ್ಷಕರು ಹೇಳಿದ ಪಾಠ ಚೆನ್ನಾಗಿ ಅರ್ಥವಾಗತ್ತೆ ಹಾಗೂ ಪಾಠವನ್ನು ರೆಕಾರ್ಡ್ ಮಾಡಿಯೂ ಮಕ್ಕಳಿಗೆ ಕಳುಹಿಸಬಹುದು. ಇದು ಶಾಲೆಯಲ್ಲಿ ಕುಳಿತು ಪಾಠ ಕೇಳಿದ ಅನುಭವವನ್ನು ಮಕ್ಕಳಿಗೆ ನೀಡುತ್ತೆ. ಇನ್ನು ಮಕ್ಕಳಿಗೆ ಅನುಕೂಲ ಆಗುವ ಈ ಆ್ಯಪ್ ನ್ನು ರಾಜ್ಯ ಸರ್ಕಾರದ ಗಮನಕ್ಕೂ ತಂದು ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಬಳಸುವಂತೆ ಮನವಿ ಮಾಡಿಕೊಳ್ಳಲಿದ್ದಾರೆ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್. ಈ ಡಾರ್ಕ್ ಬೋರ್ಡ್ ಆನಿಮೇಶನ್ ಎಜ್ಯೂಕೇಶನ್ ಆ್ಯಪ್ ನ್ನು ಮೊದಲು ಕಿಚ್ಚ ಸಿದೀಪ್ ದತ್ತು ತೆಗೆದುಕೊಂಡ ಶಾಲೆಗಳಲ್ಲಿ ಬಳಸಲಾಗುವುದು ನಂತರ ರಾಜ್ಯಾದ್ಯಂತ ಎಲ್ಲೆಡೆ ಬಳಸುವಂತೆ ಪ್ರೇರೇಪಿಸಲಾಗುವುದು ಎಂದು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಮೇಶ್ ಕಿಟ್ಟಿ ಹೇಳಿದ್ದಾರೆ.