ಪಾತಾಳಕ್ಕೆ ಕುಸಿದ ಚಿನ್ನ, ಕೈಗೆಟುವ ಬೆಲೆಯಲ್ಲಿ ಚಿನ್ನ, ಆದರೆ ಊಡಿಕೆಗೆ ಇದು ಸರಿಯಾದ ಸಮಯವೇ??

ಪಾತಾಳಕ್ಕೆ ಕುಸಿದ ಚಿನ್ನ, ಕೈಗೆಟುವ ಬೆಲೆಯಲ್ಲಿ ಚಿನ್ನ, ಆದರೆ ಊಡಿಕೆಗೆ ಇದು ಸರಿಯಾದ ಸಮಯವೇ??

ನಮಸ್ಕಾರ ಸ್ನೇಹಿತರೇ ಚಿನ್ನ ಎಂದ ಕೂಡಲೇ ಎಲ್ಲರಿಗೂ ಇಷ್ಟವಾಗುವುದು ಸಹಜ, ಕೆಲವರು ನಾವು ಮುಂದೆ ಬೆಲೆ ಹೆಚ್ಚಾಗುವ ಕಾರಣ ಊಡಿಕೆಯ ರೀತಿಯಲ್ಲಿ ಕೊಂಡು ಕೊಂಡು ಸಂಗ್ರಹ ಮಾಡುತ್ತೇವೆ ಎಂದರೆ ಇನ್ನೂ ಕೆಲವರು ಇವಾಗ ಬೆಲೆ ಕಡಿಮೆ ಇದೆ ಕೊಂಡು ಕೊಂಡು ಇಟ್ಟು ಕೊಂಡರೆ ಕಷ್ಟದ ಸಮಯದಲ್ಲಿ ಕೆಲಸಕ್ಕೆ ಬರುತ್ತದೆ ಎಂಬುದರ ಕುರಿತು ಆಲೋಚನೆ ಮಾಡುತ್ತಾರೆ. ಅದರಲ್ಲಿಯೂ ಮಧ್ಯಮ ವರ್ಗದ ಜನರಿಗೆ ಚಿನ್ನ ಒಂದು ರೀತಿಯ ದೊಡ್ಡ ಐಶ್ವರ್ಯ ವಿದ್ದಂತೆ. ಚಿನ್ನ ಮನೆಯಲ್ಲಿದೆ ಎಂದರೆ ಸಮಸ್ಯೆಗಳು ಬಂದರೆ ಖಂಡಿತ ಉಪಯೋಗಕ್ಕೆ ಬರುತ್ತದೆ ಎಂಬುದು ಮಧ್ಯಮ ವರ್ಗದ ಲೆಕ್ಕಚಾರ.

ಹೀಗೆ ಒಂದೊಂದು ವರ್ಗದ ಕುಟುಂಬದವರ ಒಂದೊಂದು ರೀತಿಯ ಲೆಕ್ಕಾಚಾರದಲ್ಲಿ ಚಿನ್ನ ಕಣ್ಣಿಗೆ ಕಾಣಿಸುತ್ತದೆ, ಅದೇ ಕಾರಣಕ್ಕಾಗಿ ಇಡೀ ಭಾರತದಲ್ಲಿ ಚಿನ್ನದ ಮೇಲಿನ ಮೋಹ ಪ್ರತಿ ದಿನವೂ ಹೆಚ್ಚಾಗುತ್ತಿದೆ. ಬಡವನಿಂದ ಹಿಡಿದು ಶ್ರೀಮಂತರವರೆಗೂ ಕೂಡ ಚಿನ್ನದ ಆಭರಣಗಳನ್ನು ಕೊಂಡು ಕೊಳ್ಳಲು ಅವಕಾಶಕ್ಕಾಗಿ ಸದಾ ಕಾಯುತ್ತಿರುತ್ತಾರೆ, ಒಂದು ವೇಳೆ ನೀವು ಕೂಡ ಈ ರೀತಿಯ ಮಧ್ಯಮ ಕುಟುಂಬ ವರ್ಗಕ್ಕೆ ಸೇರಿದ್ದು ಚಿನ್ನ ಎಂಬುದು ನಿಮ್ಮ ಕನಸಾಗಿದ್ದರೇ ಬನ್ನಿ ಇಂದಿನ ಬೆಲೆ ಹಾಗೂ ಚಿನ್ನ ಕಳೆದ ಕೆಲವು ದಿನಗಳಿಗೆ ಹೋಲಿಸಿ ಕೊಂಡರೆ ಎಷ್ಟು ಕಡಿಮೆಯಾಗಿದೆ, ಅಷ್ಟೇ ಅಲ್ಲದೆ ನೀವು ಈ ಸಮಯದಲ್ಲಿ ಹೂಡಿಕೆ ಮಾಡಬಹುದೇ ಅಥವಾ ಬೇಡವೇ ಎಂಬುದನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ.

ಸ್ನೇಹಿತರೇ ಕಳೆದ ಜುಲೈ 29 ನೇ ತಾರೀಖಿನಂದು 24 ಕ್ಯಾರೆಟ್ ಚಿನ್ನದ ಬೆಲೆ ಬರೋಬ್ಬರಿ 49370 ರೂಪಾಯಿ ಇತ್ತು, ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ 45250 ರೂಪಾಯಿ ಇತ್ತೂ, ಆದರೆ ಕ್ರಮೇಣ ಚಿನ್ನದ ಬೆಲೆ ಕಡಿಮೆಯಾಗಿ ನಿನ್ನೆ 24 ಕ್ಯಾರೆಟ್ ಗೆ 47840 ಹಾಗೂ 22 ಕ್ಯಾರೆಟ್ ಚಿನ್ನಕ್ಕೆ 44600 ರೂಪಾಯಿ ತಲುಪಿತ್ತು. ಆದರೆ ಇಂದು ಮತ್ತೆ ಕುಸಿತ ಕಂಡು 24 ಕ್ಯಾರೆಟ್ ಚಿನ್ನದ ಬೆಲೆ 820 ರುಪಾಯಿ ಕಡಿಮೆಯಾಗಿ 47840 ಗೆ ಬಂದು ತಲುಪಿದೆ, ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ 750 ರೂಪಾಯಿ ಕಡಿಮೆಯಾಗಿ 43850 ರೂಪಾಯಿಗೆ ತಲುಪಿದೆ. ಇನ್ನು ಇದುಹೂಡಿಕೆಗೆ ಸರಿಯಾದ ಸಮಯ ಎನ್ನಲಾಗುತ್ತಿದ್ದು ಕೊಂಚ ಹೂಡಿಕೆ ಮಾಡಬಹುದಾಗಿದೆ, ಹೆಚ್ಚ್ಚಾಗಿ ಹೂಡಿಕೆ ಮಾಡುವುದಾದರೆ ಕೊಂಚ ಸಮಯ ಕಾಯುವುದು ಉತ್ತಮ.