ಯಾರೆಂದು ತಿಳಿಯದೆ ಬಿಗ್ ಬಾಸ್ ಗೆ ಹೋಗಿ, ಇದೀಗ ಎಲ್ಲೆಡೆ ಜನಪ್ರಿಯತೆ ಗಳಿಸಿರುವ ಅರವಿಂದ್ ರವರಿಗೆ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತೇ??
ಯಾರೆಂದು ತಿಳಿಯದೆ ಬಿಗ್ ಬಾಸ್ ಗೆ ಹೋಗಿ, ಇದೀಗ ಎಲ್ಲೆಡೆ ಜನಪ್ರಿಯತೆ ಗಳಿಸಿರುವ ಅರವಿಂದ್ ರವರಿಗೆ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿ ಬಿಗ್ ಬಾಸ್ ಸಾಕಷ್ಟು ಕುತೂಹಲ ಮೂಡಿಸಿದೆ. ಬಹುಶಹ ನೀವು ಈ ಲೇಖನ ಓದುವ ಹೊತ್ತಿಗೆ ವಿನ್ನರ್ ಘೋಷಣೆಯಾಗಿದ್ದರೂ ಕೂಡ ಯಾವುದೇ ಅಚ್ಚರಿ ಪಡಬೇಕಾಗಿಲ್ಲ, ಹೀಗಿರುವಾಗ ಮನೆಯಲ್ಲಿ ಯಾವ ಸ್ಪರ್ಧಿ ಗೆಲ್ಲುತ್ತಾರೆ ಎಂಬುದರ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಬಹುತೇಕ ಜನರ ಆಯ್ಕೆ ಮಂಜು ಪಾವಗಡ ರವರು ಆಗಿರುವ ಕಾರಣ ಈ ಬಾರಿಯ ಬಿಗ್ ಬಾಸ್ ಕಿರೀಟವನ್ನು ಮಂಜು ಪಾವಗಡ ರವರು ಮುಡಿಗೇರಿಸಿಕೊಳ್ಳಲು ಇದ್ದಾರೆ ಎಂಬುದರ ಚರ್ಚೆ ನಡೆಯುತ್ತಿದೆ.
ಅದೇ ಸಮಯದಲ್ಲಿ ಮಂಜು ರವರಿಗೆ ಅರವಿಂದ್ ಹಾಗೂ ಪ್ರಶಾಂತ ರವರು ಸಾಕಷ್ಟು ಉತ್ತಮ ಪೈಪೋಟಿ ನೀಡುತ್ತಿದ್ದಾರೆ, ಟಾಸ್ಕ್ ಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅರವಿಂದ್ ರವರು ಖಚಿತವಾಗಿ ಎರಡನೇ ಅಥವಾ ಮೊದಲನೇ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಇನ್ನು ಹೀಗೆ ಯಾವುದೇ ಜನಪ್ರಿಯತೆ ಇಲ್ಲದೆ ಮನೆಯ ಒಳಗಡೆ ಹೋಗಿ ಇದೀಗ ಅದ್ಭುತ ಆಟಗಾರನಾಗಿ ತೋರಿಸಿಕೊಂಡು ಜನರ ಮನ ಗೆದ್ದಿರುವ ಅರವಿಂದ ಕೆಪಿ ರವರು ಇದೀಗ ಎಲ್ಲೆಡೆ ಸಾಕಷ್ಟು ಚರ್ಚೆಗಳನ್ನು ಸೃಷ್ಟಿಸಿದ್ದಾರೆ.
ಇನ್ನು ಹೀಗೆ ಬಿಗ್ ಬಾಸ್ ಕಿರೀಟವನ್ನು ಒಂದು ವೇಳೆ ಮುಡಿಗೇರಿಸಿಕೊಳ್ಳದೆ ಇದ್ದರೂ ಕೂಡ ಅರವಿಂದ್ ರವರು ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ, ಹೀಗಾದಲ್ಲಿ ಸಿನಿಮಾ ರಂಗದಲ್ಲಿ ಆಸಕ್ತಿ ಹೊಂದಿರುವ ಅರವಿಂದ್ ರವರು ಬಿಗ್ ಬಾಸ್ ನಂತರ ಹಲವಾರು ಅವಕಾಶಗಳನ್ನು ಪಡೆದರು ಕೂಡ ಯಾವುದೇ ಅಚ್ಚರಿ ಇರುವುದಿಲ್ಲ. ಇನ್ನೂ ಈಗಾಗಲೇ ಇವರು ವಿನ್ನರ್ ಆಗುತ್ತಾರೆ ಎಂದು ಹೇಳುತ್ತಿದ್ದರೂ ಕೂಡ ಇಷ್ಟು ದಿವಸ ಮನೆಯಲ್ಲಿ ಇದ್ದ ಕಾರಣಕ್ಕಾಗಿ ಇವರಿಗೆ ಪ್ರತ್ಯೇಕವಾಗಿ ಸಂಭಾವನೆ ಖಚಿತವಾಗಿ ಸಿಗಲಿದೆ, ಇಷ್ಟು ದಿವಸ ಅಂದರೇನು ಒಟ್ಟು 17 ವಾರಗಳು ಮನೆಯಲ್ಲಿ ಇದ್ದ ಕಾರಣ ವಾರಕ್ಕೆ 60000 ರೂಪಾಯಿ ಅಂತೆ ಇವರಿಗೆ 10 ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಸಂಭಾವನೆ ಸಿಗಲಿದೆ. ಇದರ ಜೊತೆಗೆ ಟಾಸ್ಕ್ ನಲ್ಲಿ ಗೆದ್ದಿರುವ 2,00,000 ಹಾಗೂ ಒಂದು ವೇಳೆ ವಿನ್ನರ್ ಆದರೆ 50 ಲಕ್ಷ ರೂಪಾಯಿ ಕೂಡ ಸಿಗಲಿದೆ.