ಅಭ್ಯಾಸ ಪಂದ್ಯವಾಡಿದ ಭಾರತ, ಶಿಖರ್ ಹಾಗೂ ಭುವಿ ತಂಡಗಳಲ್ಲಿ ಗೆದ್ದದು ಯಾರು ಗೊತ್ತೇ, ಮನೀಶ್ ಸೂರ್ಯ ಭರ್ಜರಿ ಆರಂಭ.
ಅಭ್ಯಾಸ ಪಂದ್ಯವಾಡಿದ ಭಾರತ, ಶಿಖರ್ ಹಾಗೂ ಭುವಿ ತಂಡಗಳಲ್ಲಿ ಗೆದ್ದದು ಯಾರು ಗೊತ್ತೇ, ಮನೀಶ್ ಸೂರ್ಯ ಭರ್ಜರಿ ಆರಂಭ.
ನಮಸ್ಕಾರ ಸ್ನೇಹಿತರೇ ಭಾರತದ ಒಂದು ತಂಡ ಶ್ರೀಲಂಕಾ ವಿರುದ್ದದ ಸರಣಿಗೆ ಈಗಾಗಲೇ ಪ್ರವಾಸ ಕೈಗೊಂಡಿರುವುದು ನಿಮಗೆ ತಿಳಿದಿರುವ ವಿಷಯವಾಗಿದೆ. ಶಿಖರ್ ಧವನ್ ನೇತೃತ್ವದ ತಂಡ ಇದೇ ಜುಲೈ 13 ರಂದು ಮೂರು ಏಕದಿನ ಮೂರು ಟಿ 20 ಸರಣಿ ಆಡಲಿದೆ. ಕನ್ನಡಿಗ ರಾಹುಲ್ ದ್ರಾವಿಡ್ ಈ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 20 ಜನರ ತಂಡ ಈಗಾಗಲೇ ಕ್ವಾರಂಟೈನ್ ಅವಧಿ ಮುಗಿಸಿಕೊಂಡು ಅಭ್ಯಾಸ ನಡೆಸುತ್ತಿದೆ.
ಈ ಮಧ್ಯೆ ತಂಡದಲ್ಲೆ ಎರಡು ತಂಡ ಮಾಡಿಕೊಂಡು ನಿನ್ನೆ ಒಂದು ಅಭ್ಯಾಸ ಪಂದವನ್ನ ಆಡಿದೆ. ಒಂದು ತಂಡಕ್ಕೆ ಶಿಖರ್ ಧವನ್ ನಾಯಕತ್ವ ವಹಿಸಿದರೇ, ಮತ್ತೊಂದು ತಂಡಕ್ಕೆ ಭುವನೇಶ್ವರ್ ಕುಮಾರ್ ನಾಯಕರಾಗಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಶಿಖರ್ ಧವನ್ ತಂಡದ ಪರ ಆಡಿದ್ದ ಮನೀಷ್ ಪಾಂಡೆ ಉಪಯುಕ್ತ ಅರ್ಧ ಶತಕ ಭಾರಿಸಿದರು. ನಂತರ ಬ್ಯಾಟ್ ಮಾಡಿದ ಭುವನೇಶ್ವರ್ ತಂಡದ ಪರ ಸೂರ್ಯ ಕುಮಾರ್ ಯಾದವ್ ಅತಿ ವೇಗದ ಅರ್ಧಶತಕ ಭಾರಿಸಿ ಗಮನಸೆಳೆದರು. ಕೊನೆಗೆ ಶಿಖರ್ ಧವನ್ ತಂಡವನ್ನ ಭುವನೇಶ್ವರ್ ತಂಡ ಸೋಲಿಸಿದೆ ಎಂಬ ಮಾಹಿತಿಯನ್ನ ಬಿಸಿಸಿಐ ತಿಳಿಸಿದೆ.
ಈ ಬಗ್ಗೆ ವಿಡಿಯೋ ಒಂದನ್ನ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ಬಿಸಿಸಿಐನ ಸಪೋರ್ಟಿಂಗ್ ಸ್ಟಾಫ್ ತಂಡ ಪಂದ್ಯದ ಸಂಪೂರ್ಣ ಮಾಹಿತಿಯನ್ನ ಆ ವಿಡೀಯೋದಲ್ಲಿ ನೀಡಿದೆ. ಈ ಪಂದ್ಯದಿಂದ ತಂಡದಲ್ಲಿನ ಆಟಗಾರರ ಆತ್ಮವಿಶ್ವಾಸ ಹೆಚ್ಚಿದ್ದು ಶ್ರೀಲಂಕಾ ವಿರುದ್ದದ ಸರಣಿಯಲ್ಲಿ 3- 0 ಅಂತರದಲ್ಲಿ ಭಾರತ ಜಯಿಸಲಿದೆ ಎಂದು ವಿಶ್ವಾಸ ನುಡಿದಿದ್ದಾರೆ. ಅದಾಗಲೇ ಆಂತರಿಕ ಕಚ್ಚಾಟದಿಂದ ಜರ್ಜರಿತವಾಗಿರುವ ಶ್ರೀಲಂಕಾ ತಂಡ ಭಾರತಕ್ಕೆ ಯಾವ ರೀತಿಯ ಸವಾಲು ನೀಡಲಿದೆ ಎಂಬುದೇ ಈಗ ಎಲ್ಲರ ನೀರಿಕ್ಷೆಗೆ ಕಾರಣವಾಗಿದೆ. ಭಾರತ ಶ್ರೀಲಂಕಾ ನಡುವಿನ ಸರಣಿಯಲ್ಲಿ ಭಾರತದ ಆಡುವ 11 ರ ಬಳಗ ಹೇಗಿರಬೇಕು ಎಂಬುದನ್ನ ಕಮೆಂಟ್ ಮಾಡಿ.