ಬಿಗ್ ನ್ಯೂಸ್: ಅಕ್ರಮ ಗಣಿಗಾರಿಕೆ ಬಯಲು ಮಾಡಲು ತಾನೇ ಕುದ್ದು ಅಖಾಡಕ್ಕೆ ಇಳಿದ ಸುಮಲತಾ, ದಳಪತಿಗಳಿಗೆ ಬಿಗ್ ಶಾಕ್, ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕೆಆರ್​ಎಸ್ ಜಲಾಶಯದಳ್ಳಿ ಬಿರುಕು ಬಿಟ್ಟಿದೆ ಎಂಬ ಹೇಳಿಕೆ ಬಾರಿ ಸದ್ದು ಮಾಡುತ್ತಿದೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಕುದ್ದು ಈ ಹೇಳಿಕೆ ಪ್ರತಿಕ್ರಿಯೆ ನೀಡಿದ್ದು, ಮತ್ತೊಮ್ಮೆ ಪದಗಳ ಬಳಕೆಯಲ್ಲಿ ಜಾರಿದ್ದಾರೆ. ಇದೇ ಸಮಯದಲ್ಲಿ ತಮ್ಮ ಕೆಆರ್​ಎಸ್ ಜಲಾಶಯದ ಬಿರುಕಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸುಮಲತಾ ರವರು, ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್ ಜಲಾಶಯದಲ್ಲಿ ಬಿರುಕು ಬಿಟ್ಟಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ.

ಇದೇ ಸಮಯದಲ್ಲಿ ಈ ಹೇಳಿಕೆಗಳ ವಿರುದ್ಧ ಜೆಡಿಎಸ್ ಬೆಂಬಲಿಗರು ಅನಗತ್ಯವಾಗಿ ಹೆಚ್ಚಿನ ರೀತಿಯಲ್ಲಿ ಉತ್ತರ ನೀಡುತ್ತಿರುವ ರೀತಿ ನೋಡಿದರೇ ಎಲ್ಲರಿಗೂ ಗಣಿಗಾರಿಕೆ ನಡೆಯುತ್ತಿದೆ ಎನಿಸುತ್ತಿದೆ. ಯಾಕೆಂದರೆ ಅಕ್ರಮ ಗಣಿಗಾರಿಗೆ ಎಂದು ಯಾರ ಹೆಸರು ಹೇಳದೆ ಹೋದರೂ ಪ್ರತಿ ಬಾರಿಯೂ ಜೆಡಿಎಸ್ ಬೆಂಬಲಿಗರು ಬಾರಿ ಪ್ರಮಾಣದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ಅಕ್ರಮ ಗಣಿಗಾರಿಕೆಯ ವಿಚಾರದಲ್ಲಿ ಜೆಡಿಎಸ್​ ಶಾಸಕ ರವೀಂದ್ರ ಶ್ರೀಕಂಠಯ್ಯ ರವರಿಗೂ ಹಾಗೂ ಸುಮಲತಾ ರವರಿಗೂ ನಡೆದ ವಾಕ್ಸಮರ ಅಷ್ಟಿಷ್ಟಲ್ಲ.

ಇನ್ನು ಹೀಗೆ ಇಷ್ಟೆಲ್ಲ ಬಿಸಿ ಬಿಸಿ ಚರ್ಚೆಗಳ ನಡುವೆ ಅಕ್ರಮ ಗಣಿಗಾರಿಕೆಯನ್ನು ಬಯಲು ಮಾಡಲು ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಕೆರೆ ಗ್ರಾಮದ ಬಳಿ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಲು ಸಿದ್ಧವಾಗಿದ್ದಾರೆ. ಇಂದು ಸಂಜೆ ಭಾಟಿ ತಾವೇ ಕುದ್ದು ಅಕ್ರಮ ಕ್ರಷರ್ ಗಳನ್ನು ಬಯಲು ಮಾಡಲಿದ್ದಾರೆ. ಬೇಬಿ ಬೆಟ್ಟದಲ್ಲಿ ಇದೀಗ 80 ಕ್ಕೂ ಹೆಚ್ಚು ಕ್ರಷರ್ ಗಳಿದ್ದು ಅದರಲ್ಲಿ 50 ಕ್ರಷರ್ ಗಳು ಅಕ್ರಮವಾಗಿವೆ ಅದನ್ನು ನಾನೇ ಬಯಲು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Facebook Comments

Post Author: Ravi Yadav