ಐಪಿಎಲ್ ನಿಂತು ಹೋಗಿದ್ದಕ್ಕಾಗಿ ನಿಯಮದಲ್ಲಿ ಬದಲಾವಣೆ ಮಾಡಿ ಆರ್ಸಿಬಿ ತಂಡಕ್ಕೆ ಭರ್ಜರಿ ಸಿಹಿ ಸುದ್ದಿ ನೀಡಿದ ಬಿಸಿಸಿಐ. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಐಪಿಎಲ್ ಟೂರ್ನಿಯು ಅರ್ಧಕ್ಕೆ ನಿಂತು ಹೋಗಿದೆ, ಹಾಗೂ ಐಪಿಎಲ್ ಟೂರ್ನಿಯು ಮುಂದುವರೆಯುದು ಸಾಧ್ಯವೇ ಇಲ್ಲ ಎಂಬ ಮಾತು ಕೂಡ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರವರು ಹೇಳಿಕೆ ನೀಡಿದ್ದಾರೆ, ಆದರೆ ಬಿಸಿಸಿಐ ವತಿಯಿಂದ ಯಾವುದೇ ಅದ್ರಿಕೃತ ಪ್ರಕಟಣೆ ಇನ್ನು ಮಾಡಿಲ್ಲ, ಹೀಗಿರುವಾಗ ಐಪಿಎಲ್ ನಡೆಯಬಹುದು ಎಂಬ ಮಾತುಗಳು ಕೂಡ ಕೇಳಿ ಬಂದಿವೆ, ಆದರೆ ಅದು ನಡೆಯುವ ಸಾಧ್ಯತೆ ತೀರಾ ಕಡಿಮೆ.

ಹೀಗಿರುವಾಗ ಎಲ್ಲ ಐಪಿಎಲ್ ಪ್ರಿಯರಿಗೆ ಹೆಚ್ಚಿನ ನಿರಾಸೆಯಾಗಿದೆ, ಅದರಲ್ಲಿಯೂ ಆರ್ಸಿಬಿ ತಂಡದ ಅಭಿಮಾನಿಗಳಿಗೆ ಹಾಗೂ ಆರ್ಸಿಬಿ ತಂಡಕ್ಕೆ ಕೂಡ ಹೆಚ್ಚಿನ ನಿರಾಸೆಯಾಗುತ್ತಿದೆ. ಯಾಕೆಂದರೆ ಆರ್ಸಿಬಿ ತಂಡದ ಆಟಗಾರರು ಈ ಬಾರಿ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದರು. ಬ್ಯಾಟ್ಸಮನ್ ಗಳು ಹಾಗೂ ಬೌಲರ್ ಗಳು ಇಬ್ಬರು ಕೂಡ ಉತ್ತಮವಾಗಿ ಆಟವಾಡುತ್ತಿದ್ದ ಕಾರಣ ಎಲ್ಲ ರೀತಿಯಲ್ಲೂ ಆರ್ಸಿಬಿ ತಂಡ ಕಪ್ ಗೆಲ್ಲುತ್ತದೆ ಎಂಬ ಲೆಕ್ಕಾಚಾರಗಳು ಕೇಳಿ ಬಂದಿದ್ದವು. ಆದರೆ ಐಪಿಎಲ್ ನಿಂತು ಹೋಗುವುದು ಬಹುತೇಕ ಖಚಿತವಾಗಿದೆ, ಕೇವಲ ಅಧಿಕೃತ ಆದೇಶವಷ್ಟೇ ಬಾಕಿಯಿದೆ.

ಹೀಗಿರುವಾಗ ಬಿಸಿಸಿಐ ಮುಂದಿನ ಐಪಿಎಲ್ ಗೆ ತೆಗೆದುಕೊಂಡಿರುವ ಆ ಒಂದು ನಿರ್ಧಾರ ಆರ್ಸಿಬಿ ತಂಡಕ್ಕೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಹೌದು ಸ್ನೇಹಿತರೇ, ಈ ಬಾರಿಯ ಐಪಿಎಲ್ ನಿಂತು ಹೋಗಿರುವ ಕಾರಣ ಐಪಿಎಲ್ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಆರ್ಸಿಬಿ ತಂಡಕ್ಕೆ ಭರ್ಜರಿ ಸಿಹಿ ಸುದ್ದಿ ದೊರಕಿದಂತಾಗಿದೆ, ಇದು ಇತರ ತಂಡಗಳಿಗಿಂತ ಆರ್ಸಿಬಿ ತಂಡಕ್ಕೆ ಹೆಚ್ಚಿನ ಲಾಭ ತಂದು ಕೊಡಲಿದೆ. ಹೇಗೆ ಅಂತೀರಾ?? ಆ ನಿಯಮವಾದರೂ ಏನು ಹಾಗೂ ಅದರಿಂದ ಆರ್ಸಿಬಿ ತಂಡಕ್ಕೆ ಹೇಗೆ ಲಾಭ ಎಂಬುದನ್ನು ನಾನು ತಿಳಿಸುತ್ತೇನೆ ಕೇಳಿ.

ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡ ಈ ಬಾರಿ ಬಹಳ ಸಮತೋಲನದಿಂದ ಕೂಡಿತ್ತು, ಉತ್ತಮ ಆರಂಭಿಕರು, ಶ್ರೇಷ್ಠ ಮಾಧ್ಯಮ ಕ್ರಮಾಂಕ, ಉತ್ತಮ ಆಲ್ ರೌಂಡರ್ ಗಳು, ಹಾಗೂ ಹೆಸರು ಗಳು ದೊಡ್ಡದು ಇಲ್ಲದೆ ಇದ್ದರೂ ಕೂಡ ಹಿಂದೆಂದೂ ಕಾಣದಂತಹ ಆರ್ಸಿಬಿ ತಂಡದ ಬೌಲರ್ ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದರು, ಅದರಲ್ಲಿಯೂ ಕೊನೆಯ ಓವರ್ ಗಳಲ್ಲಿ ಎಲ್ಲ ಬೌಲರ್ ಗಳು ಬಹುತೇಕ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಮಾಡಿದ್ದರು. ಹೀಗಿರುವಾದ ಆರ್ಸಿಬಿ ತಂಡಕ್ಕೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ಐಪಿಎಲ್ ನಿಂತು ಹೋಯಿತು.

ಹಾಗೂ ಇದೆ ಸಮಯದಲ್ಲಿ ಮುಂದಿನ ಐಪಿಎಲ್ ನಲ್ಲಿ ಕೇವಲ ಮೂರು ಆಟಗಾರರನ್ನು ಇರಿಸಿಕೊಂಡು ಉಳಿದ ಬೌಲರ್ ಗಳನ್ನು ಬಿಡುಗಡೆ ಮಾಡಬೇಕಾಗಿತ್ತು, ಇದರಿಂದ ಇದೆ ರೀತಿಯ ಬಲಾಢ್ಯ ತಂಡ ಕಟ್ಟುವುದು ಸುಲಭದ ಕೆಲಸವಾಗಿರಲಿಲ್ಲ ಹೀಗಿರುವಾಗ ಮುಂದಿನ ವರ್ಷ ಈ ರೀತಿಯ ತಂಡ ಸಿಗುವುದೇ ಎಂಬ ಪ್ರಶ್ನೆ ಕೂಡ ಮೂಡಿತ್ತು, ಆದರೆ ಇದೀಗ ಬಿಸಿಸಿಐ ಈ ಬಾರಿಯ ಐಪಿಎಲ್ ನಿಂತು ಹೋಗಿರುವ ಕಾರಣ ಮುಂದಿನ ಐಪಿಎಲ್ ನಲ್ಲಿಯೂ ಕೂಡ ಮಿನಿ ಹರಾಜು ಕೂಡ ಇರುತ್ತದೆ, ಹಾಗೂ ಯಾವುದೇ ಆಟಗಾರರನ್ನು ಬಿಡುಗಡೆ ಮಾಡುವ ಅವಶ್ಯಕತೆ ಇಲ್ಲ ಎಂಬ ಆದೇಶ ಹೊರಡಿಸಿದೆ. ಈ ಮೂಲಕ ಇದೆ ತಂಡ ಆರ್ಸಿಬಿ ಗೆ ಮುಂದಿನ ವರ್ಷವೂ ಉಳಿದುಕೊಳ್ಳಲಿದೆ.