ಅಂತರಾಷ್ಟ್ರೀಯ ಮಾಧ್ಯಮಗಳ ಚಳಿ ಬಿಡಿಸಿದ ಮ್ಯಾಥ್ಯೂ ಹೇಡನ್, ಭಾರತದ ಕುರಿತು ಹೇಳಿದ್ದೇನು ಗೊತ್ತಾ??

ಅಂತರಾಷ್ಟ್ರೀಯ ಮಾಧ್ಯಮಗಳ ಚಳಿ ಬಿಡಿಸಿದ ಮ್ಯಾಥ್ಯೂ ಹೇಡನ್, ಭಾರತದ ಕುರಿತು ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದ ಯಾವುದೇ ಕ್ರಿಕೆಟಿಗರಾಗಿರಲಿ ಅವರು ಉತ್ತಮ ಪ್ರದರ್ಶನ ನೀಡುತ್ತಾರೆ ಎಂದರೇ ಖಂಡಿತ ಭಾರತ ದೇಶವು ಅವರಿಗೆ ಸಾಕಷ್ಟು ಅಭಿಮಾನವನ್ನು ಹಾಗೂ ಗೌರವವನ್ನು ನೀಡುತ್ತದೆ. ಇಲ್ಲಿನ ಕ್ರಿಕೆಟ್ ಅಭಿಮಾನಿಗಳು ಆಟಗಾರನ ಯಾವುದೇ ದೇಶ ನೋಡದೆ ಆತನ ಆಟಕ್ಕೆ ಗೌರವ ಸೂಚಿಸುತ್ತಾರೆ. ಅದು ಭಾರತದ ಪರಂಪರೆ. ಅದೇ ಕಾರಣಕ್ಕಾಗಿ ವಿಶ್ವದ ಬಹುತೇಕ ಕ್ರಿಕೆಟ್ ಆಟಗಾರರು ಭಾರತ ಎಂದರೇನು ವಿಶೇಷ ಗೌರವವನ್ನು ಕೂಡ ನೀಡುತ್ತಾರೆ.

ಇನ್ನು ಮ್ಯಾಥ್ಯೂ ಹೇಡನ್ ರವರು ಕೂಡ ಭಾರತದೊಂದಿಗೆ ಅವಿನಾಭಾವ ಸಂಬಂಧವನ್ನು ಇಟ್ಟು ಕೊಂಡಿದ್ದು, ಭಾರತದಲ್ಲಿರುವ ಆಧ್ಯಾತ್ಮದ ಕಡೆಗೆ ಕೂಡ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. ಇಷ್ಟೆಲ್ಲ ಭಾಂದವ್ಯ ಹೊಂದಿರುವ ಮ್ಯಾಥ್ಯೂ ಹೇಡನ್ ರವರು ಈಗ ಮಾತನಾಡಿ, ಕರುನಾ ವಿಚಾರದಲ್ಲಿ ಅಂತರರಾಷ್ಟ್ರೀಯ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೌದು ಸ್ನೇಹಿತರೇ ಇದೀಗ ಮಾತನಾಡಿರುವ ಮ್ಯಾಥ್ಯೂ ಹೇಡನ್ ರವರು, ಅಂತರ್ರಾಷ್ಟ್ರೀಯ ಮಾಧ್ಯಮಗಳು ಭಾರತವನ್ನು ಬಹು ಬೇಗನೆ ಜಡ್ಜ್ ಮಾಡುತ್ತಿವೆ, ಭಾರತದಲ್ಲಿ ಇರುವ ಜನಸಂಖ್ಯೆ ನೀವು ಗಮನಿಸಿದರೆ ಕಂಡು ಬರುತ್ತಿರುವ ಅಂಕಿ ಅಂಶಗಳು ಬಹಳ ಉತ್ತಮವಾಗಿದೆ. ಭಾರತ ದೇಶವು ಈಗಾಗಲೇ ಆಸ್ಟ್ರೇಲಿಯ ದೇಶದ ಜನಸಂಖ್ಯೆಗಿಂತ ಐದು ಪಟ್ಟು ಹೆಚ್ಚಿನ ಜನರಿಗೆ ಲಸಿಕೆಯನ್ನು ನೀಡಿದೆ, 130 ಕೋಟಿ ಜನರನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲ, ಸಾಧ್ಯವಾದಷ್ಟು ಹೆಚ್ಚಿನ ಜನರಿಗೆ ವೈದ್ಯಕೀಯ ಸೌಲಭ್ಯವನ್ನು ತಲುಪಿಸುವುದರಲ್ಲಿ ಭಾರತದ ಅತ್ಯಂತ ಯಶಸ್ವಿಯಾಗಿದೆ. ಇದನ್ನು ಮಾಧ್ಯಮಗಳು ಗೌರವಿಸಬೇಕು ಯಾವುದೋ ಚಿಕ್ಕ ದೇಶಕ್ಕೆ ಭಾರತ ದೇಶವನ್ನು ಹೋಲಿಕೆ ಮಾಡಿ ನಿರ್ಣಯ ತೆಗೆದು ಕೊಳ್ಳುವುದು ಅತ್ಯಂತ ದಡ್ಡತನದ ವಿಚಾರ ಎಂದು ಹೇಳಿದ್ದಾರೆ.