ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ನಾಯಕತ್ವದಲ್ಲಿ ಹೊಸ ಪೈಪೋಟಿ ! ಮುಂದಿನ ಭಾರತದ ನಾಯಕ ಯಾರಾಗಬಹುದು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕೆಎಲ್ ರಾಹುಲ್ ರವರು ಸೀಮಿತ ಓವರುಗಳ ಕ್ರಿಕೆಟ್ನಲ್ಲಿ ಬಹಳ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದೇ ಕಾರಣಕ್ಕಾಗಿ ಭಾರತ ಕ್ರಿಕೆಟ್ ತಂಡವು ಕೂಡ ಕೆ ಎಲ್ ರಾಹುಲ್ ರವರನ್ನು ಉಪ ನಾಯಕ ಎಂದು ಘೋಷಣೆ ಮಾಡಿದೆ. ರೋಹಿತ ಶರ್ಮ ರವರ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ರವರು ಉಪ ನಾಯಕನಾಗುವುದು ಹೊಸದೇನಲ್ಲ, ಹಾಗೂ ಇದೇ ಸಮಯದಲ್ಲಿ ಹಲವಾರು ಸರಣಿಗಳಲ್ಲಿ ಕೆ ಎಲ್ ರಾಹುಲ್ ರವರು ತಂಡವನ್ನು ಕೂಡ ಮುನ್ನಡೆಸಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ನಾಯಕನಾಗಿ ನಿವೃತ್ತಿ ಪಡೆದು ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳುವ ಸಮಯದಲ್ಲಿ ರೋಹಿತ್ ಶರ್ಮರವರು ಕೂಡ ನಿವೃತ್ತಿ ಪಡೆಯುವುದು ಬಹುತೇಕ ಖಚಿತ, ಯಾಕೆಂದರೆ ಕೊಹ್ಲಿ ಅವರಿಗಿಂತ ಹೆಚ್ಚು ವಯಸ್ಸಿನವರಾಗಿದ್ದಾರೆ ರೋಹಿತ್ ಶರ್ಮಾ. ಇವರಿಬ್ಬರೂ ನಿವೃತ್ತಿಗೊಂಡು ಖಂಡಿತ ಮುಂದಿನ ನಾಯಕನ ಆಯ್ಕೆಗೆ ಎಲ್ಲರೂ ಕೇವಲ ರಾಹುಲ್ ರವರ ಕಡೆ ಗಮನ ಹರಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು, ಇದಕ್ಕೆ ಪೂರಕವೆಂಬಂತೆ ಹಲವಾರು ಬಾರಿ ಸೌರವ್ ಗಂಗೂಲಿ ಅವರು ಕೂಡ ಕೆಎಲ್ ರಾಹುಲ್ ರವರ ಸ್ಥಾನವನ್ನು ಹಲವಾರು ಬಾರಿ ತಂಡದಲ್ಲಿ ಕಾಯಂ ಸ್ಥಾನ ಪಡೆಯುತ್ತಾರೆ ಎಂದು ಖಚಿತಪಡಿಸಿದ್ದಾರೆ.

ಆದರೆ ಇದೀಗ ಸುನಿಲ್ ಗವಾಸ್ಕರ್ ಅವರು ಮಾತನಾಡಿರುವ ರೀತಿ ನೋಡಿದರೆ ಕೆಎಲ್ ರಾಹುಲ್ ರವರಿಗೆ ನಾಯಕತ್ವದ ಪೈಪೋಟಿಯಲ್ಲಿ ಮತ್ತೊಬ್ಬ ಹೊಸ ಆಟಗಾರನ ಉದಯ ವಾದಂತೆ ಕಾಣುತ್ತಿದೆ, ಹೌದು ಸ್ನೇಹಿತರೆ ವಿಶ್ವಕಪ್ ನಿಂದ ವಿಶ್ವಕಪ್ಗೆ ನಾಲ್ಕು ವರ್ಷಗಳ ಅಂತರ ಇರುವ ಕಾರಣ ಪ್ರತಿ ನಾಯಕನ ಕಾರ್ಯಕ್ಷಮತೆಯನ್ನು ಮುಂದಿನ ನಾಲ್ಕು ವರ್ಷಗಳಿಗೆ ಅಳೆದು ನಾಯಕನ ಸ್ಥಾನವನ್ನು ಘೋಷಣೆ ಮಾಡಲಾಗುತ್ತದೆ.

ಅದೇ ಕಾರಣಕ್ಕಾಗಿ ನನ್ನ ಪ್ರಕಾರ ಮುಂದಿನ ನಾಯಕ ರಿಷಬ್ ಪ್ಯಾಂಟ್ ರವರು ಆಗಬಹುದು, ಶ್ರೇಯಸ್ ಅಯ್ಯರ್ ರವರು ಇಲ್ಲದ ಕಾರಣ ನಾಯಕತ್ವ ಪಡೆದಿದ್ದರೂ ಕೂಡ ಆತನ ನಾಯಕತ್ವದ ಕುರಿತು ಸಮಿತಿ ಗಮನಹರಿಸಿದೆ. ತಪ್ಪುಗಳನ್ನು ಬಹಳ ಬೇಗ ತಿದ್ದುಕೊಂಡು ಉತ್ತಮ ನಾಯಕನಾಗುವ ಎಲ್ಲ ಸಾಧ್ಯತೆ ರಿಷಬ್ ಪಂತ್ ಅವರಿಗೆ ಇದೆ, ಮುಂದೊಂದು ದಿನ ಈತ ಭಾರತದ ನಾಯಕನಾದರೆ ಖಂಡಿತ ಭಾರತೀಯ ತಂಡ ಮತ್ತಷ್ಟು ಇತಿಹಾಸ ಸೃಷ್ಟಿಸಲಿದೆ ಎಂದು ಸುನಿಲ್ ಗವಾಸ್ಕರ್ ಅವರು ಹೇಳಿಕೆ ನೀಡಿದ್ದಾರೆ

Post Author: Ravi Yadav