ಎಲ್ಲರೂ ಇಷ್ಟ ಪಟ್ಟು ಕೇಳಿ ಮಾಡಿಸಿಕೊಳ್ಳುವ ರೀತಿಯಲ್ಲಿ ಕಾಳು ಗೊಜ್ಜು ಮಾಡುವುದು ಹೇಗೆ ಗೊತ್ತೇ??

ಎಲ್ಲರೂ ಇಷ್ಟ ಪಟ್ಟು ಕೇಳಿ ಮಾಡಿಸಿಕೊಳ್ಳುವ ರೀತಿಯಲ್ಲಿ ಕಾಳು ಗೊಜ್ಜು ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಕಾಳು ಗೊಜ್ಜು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಕಾಳು ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಕಡಲೆ ಕಾಳು,2 ಬಾಳೆಕಾಯಿ, 1 ಆಲೂಗೆಡ್ಡೆ, 3 ಈರುಳ್ಳಿ,2 ಟೊಮೋಟೊ, ಅರ್ಧ ಬಟ್ಟಲು ತೆಂಗಿನಕಾಯಿ ತುರಿ, 3 ಚಮಚ ಧನಿಯಾ ಪುಡಿ, 5 -6 ಚಮಚ ಎಣ್ಣೆ, ಸ್ವಲ್ಪ ಪುದಿನ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, 1 ಗೆಡ್ಡೆ ಬೆಳ್ಳುಳ್ಳಿ, 1 ಇಂಚು ಶುಂಠಿ, 2 ಚಮಚ ಹುರಿಗಡಲೆ,1 ಚಮಚ ಗಸಗಸೆ, 1 ಚಮಚ ಅಚ್ಚಖಾರದ ಪುಡಿ, ಸ್ವಲ್ಪ ಅರಿಶಿನ ಪುಡಿ, 5 -6 ಕಾಳುಮೆಣಸು, ಸ್ವಲ್ಪ ಇಂಗು, ಸ್ವಲ್ಪ ಸಾಸಿವೆ, 1 ಇಂಚು ಚಕ್ಕೆ, 4 ಲವಂಗ, ರುಚಿಗೆ ತಕ್ಕಷ್ಟು ಉಪ್ಪು.

ಕಾಳು ಗೊಜ್ಜು ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲಿಗೆ ತೆಗೆದುಕೊಂಡ ಕಡಲೆಕಾಳನ್ನು ನೀರಿಗೆ ಹಾಕಿ 8 – 10 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಹಚ್ಚಿದ 2 ಈರುಳ್ಳಿಯನ್ನು ಹಾಕಿ 4 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹಚ್ಚಿದ 1 ಟೊಮೇಟೊವನ್ನು ಹಾಕಿ ಮತ್ತೆ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ 1ಗಡ್ಡೆ ಸುಲಿದ ಬೆಳ್ಳುಳ್ಳಿ, ಸಣ್ಣಗೆ ಹಚ್ಚಿದ ಶುಂಠಿ, 1 ಚಮಚ ಗಸಗಸೆ, 2 ಚಮಚ ಹುರಿಗಡಲೆ, ಚಕ್ಕೆ, ಲವಂಗ, 5 – 6 ಕಾಳುಮೆಣಸನ್ನು ಹಾಕಿ 2 ನಿಮಿಷಗಳ ಕಾಲ ಮತ್ತೆ ಫ್ರೈ ಮಾಡಿಕೊಳ್ಳಿ. ತದನಂತರ ಇದಕ್ಕೆ ಧನಿಯ ಪುಡಿ, 1 ಚಮಚ ಖಾರದ ಪುಡಿ, ಸ್ವಲ್ಪ ಅರಿಶಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಹುರಿದ ಮಿಶ್ರಣ, ತೆಂಗಿನಕಾಯಿತುರಿ, ಸ್ವಲ್ಪ ಪುದೀನಾ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ನಂತರ ಗ್ಯಾಸ್ ಮೇಲೆ ಒಂದು ಕುಕ್ಕರನ್ನು ಇಟ್ಟು ಅದಕ್ಕೆ 4 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಇಂಗು, ಕರಿಬೇವು, ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ 1 ಟೊಮೊಟೊವನ್ನು ಹಾಕಿ ಟೊಮೇಟೊ ಸಾಫ್ಟ್ ಆಗುವವರೆಗೂ ಪ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ನೆನೆಸಿದ ಕಡಲೆಕಾಳು, ಸಣ್ಣಗೆ ಹಚ್ಚಿದ ಆಲೂಗೆಡ್ಡೆ, ಸಿಪ್ಪೆ ತೆಗೆದು ಸಣ್ಣಗೆ ಹಚ್ಚಿದ ಬಾಳೆಕಾಯಿ,ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿದ ಮಸಾಲೆ, ಸ್ವಲ್ಪ ನೀರು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ನ ಮುಚ್ಚಳ ವನ್ನು ಮುಚ್ಚಿ 2 ವಿಷಲ್ ಕೂಗಿಸಿಕೊಳ್ಳಿ. ಕುಕ್ಕರ್ ತಣ್ಣಗಾದ ನಂತರ ಒಂದು ಬಾರಿ ಮಿಕ್ಸ್ ಮಾಡಿಕೊಂಡರೆ ಕಾಳು ಗೊಜ್ಜು ಸವಿಯಲು ಸಿದ್ಧ