ಮನೆಯಲ್ಲಿಯೇ ಅದ್ಭುತ ರುಚಿಯ ಪುದಿನ ರೈಸ್ ಒಮ್ಮೆ ಮಾಡಿ ನೋಡಿ, ಎಲ್ಲರೂ ಪ್ಲೇಟ್ ಖಾಲಿ ಮಾಡ್ತಾರೆ. ಹೇಗೆ ಗೊತ್ತೇ??

ಮನೆಯಲ್ಲಿಯೇ ಅದ್ಭುತ ರುಚಿಯ ಪುದಿನ ರೈಸ್ ಒಮ್ಮೆ ಮಾಡಿ ನೋಡಿ, ಎಲ್ಲರೂ ಪ್ಲೇಟ್ ಖಾಲಿ ಮಾಡ್ತಾರೆ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಪುದೀನಾ ರೈಸ್ ಮಾಡುವ ವಿಧಾನವನ್ನು ತಿಳಿಯೋಣ. ಪುದೀನಾ ರೈಸ್ ಮಾಡಲು ಬೇಕಾಗುವ ಸಾಮಗ್ರಿಗಳು ಈ ಕೆಳಗಿನಂತಿವೆ. 2 ಚಮಚ ಎಣ್ಣೆ,1 ಚಮಚ ತುಪ್ಪ,ಉದ್ದಿನ ಬೇಳೆ 1 .1/2 ಚಮಚ, ಕಡಲೆ ಬೇಳೆ 1 .1/2 ಚಮಚ,ಅರ್ಧ ಚಮಚದಷ್ಟು ಸಾಸುವೆ, 1 ಚಮಚ ಜೀರಿಗೆ, ನಾಲ್ಕು ಕೆಂಪು ಮೆಣಸಿನಕಾಯಿ, 2 ಹಸಿಮೆಣಸಿನಕಾಯಿ , ಅರ್ಧ ಚಮಚ ಶುಂಠಿ -ಬೆಳ್ಳುಳ್ಳಿ ಪೇಸ್ಟ್, ಸುಮಾರು ಒಂದು ಬಟ್ಟಲು ಪುದೀನಾ,ಕೊತ್ತಮಿರಿ ಸೊಪ್ಪು ಸ್ವಲ್ಪ,ಕಾಲು ಬಟ್ಟಲು ತೆಂಗಿನ ಪುಡಿ,ಹುಣಸೆ ಹಣ್ಣು ಸ್ವಲ್ಪ ,ಒಂದು ಈರುಳ್ಳಿ ,ಒಂದು ಟೊಮೇಟೊ ,ಸುಮಾರು 1 ಬಟ್ಟಲು ಅನ್ನ,ರುಚಿಗೆ ತಕ್ಕಷ್ಟು ಉಪ್ಪು , 1 ಬಟ್ಟಲು ಹುರಿದ ಕಡಲೆಬೀಜ .

ಪುದೀನಾ ರೈಸ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟುಕೊಳ್ಳಬೇಕು. ನಂತರ ಸರಿ ಸುಮಾರು 2 ಚಮಚದಷ್ಟು ಎಣ್ಣೆಯನ್ನು ಹಾಕಿ.ಎಣ್ಣೆ ಚೆನ್ನಾಗಿ ಕಾದ ನಂತರ ಸ್ವಲ್ಪ ಸಾಸಿವೆ ,ಜೀರಿಗೆ ,ಕಡಲೆ ಬೇಳೆ ,ಉದ್ದಿನ ಬೇಳೆ ,ಕೆಂಪು ಮೆಣಸಿನಕಾಯಿ ,ಹಸಿಮೆಣಸಿನಕಾಯಿ ,ಶುಂಠಿ -ಬೆಳ್ಳುಳ್ಳಿ ಪೇಸ್ಟ್ ,ಪುದೀನಾ,ಕೊತ್ತಮಿರಿ ಸೊಪ್ಪು,ತೆಂಗಿನಕಾಯಿ ತುರಿ ಹಾಕಿ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ. ಈ ಮಿಶ್ರಣವನ್ನು ಹುರಿಯುವವರೆಗೂ ಗ್ಯಾಸ್ ಅನ್ನು ಸ್ಲಿಮ್ ನಲ್ಲಿ ಇಟ್ಟುಕೊಳ್ಳುವುದನ್ನು ಮರೆಯಬೇಡಿ.

ನಂತರ ಈ ಮಿಶ್ರಣಕ್ಕೆ ಸ್ವಲ್ಪ ಹುಣಸೆಹಣ್ಣಿನ ರಸ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಈ ಮಿಶ್ರಣ ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ಇರುವ ಹಾಗೆ ರುಬ್ಬಿಕೊಳ್ಳಬೇಕು. ನಂತರ ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಕಾಯುವವರೆಗೂ ಕಾದು ಸಾಸಿವೆ ,ಜೀರಿಗೆ ,ಕಡಲೆ ಬೇಳೆ ,ಸಣ್ಣಗೆ ಹಚ್ಚಿದ ಈರುಳ್ಳಿ ,ಟೊಮೇಟೊ ಹಾಕಿ ಕಂದು ಬಣ್ಣ ಬರುವವರೆಗೂ ಹುರಿಯಬೇಕು. ನಂತರ ಅದೇ ಬಾಣಲಿಗೆ ರುಬ್ಬಿದ ಮಿಶ್ರಣವನ್ನುಹಾಕಬೇಕು. ಕೊನೆಯದಾಗಿ ಅನ್ನವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿ ರುಚಿಯಾದ ಪುದೀನಾ ರೈಸ್ ಸವಿಯಲು ಸಿದ್ದ.