ಶಿಕ್ಷಣ ಕ್ಷೇತ್ರಗಳಲ್ಲಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಯೋಗಿ ! ಕರ್ನಾಟಕದಲ್ಲಿ ಹೀಗೆ ಮಾಡಿದರೆ ಎಷ್ಟು ಚಂದ ಅಲ್ಲವೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕೆಲಸ ಹುಡುಕುವುದು ಸಾಮಾನ್ಯದ ಕೆಲಸವಲ್ಲ, ಹಲವಾರು ಜನ ಪದವಿಯನ್ನು ಪಡೆದು ಕೊಂಡರೂ ಕೂಡ ಕಂಪನಿಗಳಲ್ಲಿ ಕೆಲಸ ಸಿಗುತ್ತಿಲ್ಲ, ಕೇವಲ ಸರ್ಕಾರಿ ಉದ್ಯೋಗ ಮಾಡಬೇಕು ಇಲ್ಲವಾದಲ್ಲಿ ತಮ್ಮ ಓದಿಗೆ ಹಾಗೂ ತಮ್ಮ ಕೆಲಸಕ್ಕೆ ಸಂಬಂಧವೇ ಇಲ್ಲದ ಕೆಲಸ ಸೇರಿಕೊಂಡು ಹೇಗಾದರೂ ಜೀವನ ಸಾಗಿಸಬೇಕು.

ಇದಕ್ಕೆಲ್ಲ ನಾವು ಕಾರಣಗಳನ್ನು ಹುಡುಕುವುದಾದರೆ ಮೊದಲನೆಯದಾಗಿ ನಮಗೆ ಕೇಳಿ ಬರುವುದು ಇಂಗ್ಲಿಷ್ ಭಾಷೆ ಹಾಗೂ ಎರಡನೆಯದಾಗಿ ಕಾಲೇಜಿನಲ್ಲಿ ಓದಿರುವ ಯಾವುದೇ ವಿಷಯಗಳು ಕಂಪನಿಗಳಲ್ಲಿ ಕೆಲಸ ಮಾಡುವಾಗ ಬಹುತೇಕ ಕೆಲಸಕ್ಕೆ ಬಾರದೇ ಇರುವುದು, ಯಾಕೆಂದರೆ ಭಾರತದಲ್ಲಿ ಹಲವಾರು ವರ್ಷಗಳಿಗೆ ಒಮ್ಮೆ ಸಿಲೆಬಸ್ ಬದಲಾಯಿಸಲಾಗುತ್ತದೆ ಆದರೆ ಆಧುನಿಕ ಜಗತ್ತಿನಲ್ಲಿ ಪ್ರತಿ ಎರಡು ಮೂರು ವರ್ಷಕ್ಕೊಮ್ಮೆ ಹೊಸ ಹೊಸ ರೀತಿಯ ಆವಿಷ್ಕಾರಗಳು ನಡೆದು ಕಂಪನಿಗಳು ಹೊಸ ರೀತಿಯ ಕೌಶಲ್ಯಗಳನ್ನು ತಿಳಿದಿರುವವರಿಗೆ ಆದ್ಯತೆ ನೀಡುತ್ತಾರೆ.

ಆದರೆ ಇದೇ ಸಮಯದಲ್ಲಿ ನಮಗೆ ಭಾಷೆ ಕೂಡ ಪ್ರಮುಖ ಪ್ರಭಾವವಿರುತ್ತದೆ ಯಾಕೆಂದರೆ ಕಾಲೇಜು ಬಿಟ್ಟ ಮೇಲೆ ಹೊಸ ತಂತ್ರಜ್ಞಾನಗಳನ್ನು ಕಲಿಯಲು ಇಂಗ್ಲಿಷ್ ಅತ್ಯಗತ್ಯ ಅಷ್ಟೇ ಅಲ್ಲದೆ ಯಾವುದೇ ಕಂಪನಿಗಳಿಗೆ ಹೋದರೂ ಕೂಡ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವಂತೆ ಕೇಳುತ್ತಾರೆ, ಆದರೆ ಎಲ್ಲರೂ ಕೂಡ ಇಂಗ್ಲಿಷ್ ಮಾಧ್ಯಮಗಳ ಶಾಲೆಗೆ ಹೋಗಿ ಓದಿರುವುದಿಲ್ಲ, ಸರ್ಕಾರ ಕನ್ನಡ ಮಾಧ್ಯಮ ಬಿಟ್ಟು ಬೇರೆ ನಡೆಸುವುದಿಲ್ಲ, ಇಂತಹ ಸಂದರ್ಭದಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ರವರು ಹಿಂದಿ ಮಾಧ್ಯಮದ 15000 ಪ್ರಾರ್ಥಮಿಕ ಹಾಗೂ ಹೈಸ್ಕೂಲು ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಬದಲಾಯಿಸಿದ್ದಾರೆ, ಈ ಮೂಲಕ ಮಾತೃಭಾಷೆಗೂ ಸರಿಯಾದ ಮಹತ್ವ ನೀಡಿ ಅದರ ಜೊತೆಗೆ ಇಂಗ್ಲಿಷ್ ಪರಿಣಿತಿಯನ್ನು ಕೂಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಕರ್ನಾಟಕದಲ್ಲಿ ಈ ರೀತಿಯ ಯೋಜನೆ ಜಾರಿ ಬಂದರೆ ಖಂಡಿತ ಎಲ್ಲರಿಗೂ ಉಪಯೋಗವಾಗಲಿದೆ. ಏನಂತೀರಿ???

Facebook Comments

Post Author: Ravi Yadav