ಕೊನೆಗೂ ಝೋಮೋಟೋ ಡಿಲೆವರಿ ಕಾಮರಾಜ್ ರವರಿಗೆ ಗುಡ್ ನ್ಯೂಸ್ ನೀಡಿದ ಝೋಮೋಟೋ ಸಂಸ್ಥೆ !

ಕೊನೆಗೂ ಝೋಮೋಟೋ ಡಿಲೆವರಿ ಕಾಮರಾಜ್ ರವರಿಗೆ ಗುಡ್ ನ್ಯೂಸ್ ನೀಡಿದ ಝೋಮೋಟೋ ಸಂಸ್ಥೆ !

ನಮಸ್ಕಾರ ಸ್ನೇಹಿತರೇ ಇದೀಗ ಜೋಮೋಟೋ ಡಿಲೆವರಿ ಬಾಯಿ ಕಾಮರಾಜ್ ಅವರ ಮೇಲೆ ಕೇಳಿ ಬಂದಿರುವ ಮಾತುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ, ಬಹುತೇಕ ಮಂದಿ ಕಾಮರಾಜ್ ರವರ ಪರವಾಗಿ ನಿಂತು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಲು ಆರಂಭಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಕೂಡ ಕಾಮರಾಜ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಇದೇ ಸಮಯದಲ್ಲಿ ಫುಡ್ ಆರ್ಡರ್ ಮಾಡಿದ ಯುವತಿ ವಿಡಿಯೋ ಕೂಡ ವೈರಲ್ ಆಗಿದ್ದು ಕೋಟಿಗಟ್ಟಲೆ ವ್ಯೂಸ್ ಬಂದಿದೆ.

ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಮರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು, ತದ ನಂತರ ಕಾಮರಾಜ್ ರವರ ಹೇಳಿಕೆ ಪಡೆದು ತಮ್ಮ ಬಂಧನದಲ್ಲೇ ಇರಿಸಿಕೊಳ್ಳಲು ನಿರ್ಧಾರ ಮಾಡಿದ್ದರು, ಹೀಗೆ ನಿರ್ಧಾರ ಮಾಡಿದ ಕಾರಣ ಕಾಮರಾಜ್ ಅವರು ಹೊರಗಡೆ ಬರಲು ಬರೋಬ್ಬರಿ 25 ಸಾವಿರ ರೂಪಾಯಿಗಳನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.

ಅಷ್ಟೇ ಅಲ್ಲದೆ ಇನ್ನು ಮುಂದಿನ ಕಾನೂನು ಪ್ರಕ್ರಿಯೆ ಗಳಿಗಾಗಿ ಕಾಮರಾಜ್ ರವರು ಸಾಕಷ್ಟು ಹಣ ಹೊಂದಿಸಬೇಕಾದ ಪರಿಸ್ಥಿತಿ ಎದುರಾಗಿತ್ತು, ಇಂತಹ ಸಂದರ್ಭದಲ್ಲಿ ಕೆಲಸದಿಂದ ತಾತ್ಕಾಲಿಕ ವಜಾ ಮಾಡಿದ್ದರು ಕೂಡ ಇವರ ಕುರಿತು ಇಲ್ಲಿಯವರೆಗೂ ಗ್ರಾಹಕರು ಉತ್ತಮ ರೇಟಿಂಗ್ ನೀಡಿರುವ ಕಾರಣ ಜೋಮೋಟೋ ಸಂಸ್ಥೆ ನಾವು ಇವರನ್ನು ತಾತ್ಕಾಲಿಕವಾಗಿ ಮಾತ್ರ ಕೆಲಸದಿಂದ ತೆಗೆದಿದ್ದೇವೆ. ಇಂತಹ ಸಂದರ್ಭದಲ್ಲಿ ಇವರಿಗೆ ಅಗತ್ಯವಿರುವ ಎಲ್ಲಾ ಖರ್ಚುಗಳನ್ನು ಹಾಗೂ ವಕೀಲರ ಪ್ರಕ್ರಿಯೆಗಳನ್ನು ಜೋಮೋಟೋ ಸಂಸ್ಥೆ ನೋಡಿಕೊಳ್ಳುತ್ತದೆ ಎಂದು ಘೋಷಣೆ ಮಾಡುವ ಮೂಲಕ ಉತ್ತಮ ನಿರ್ಧಾರ ಘೋಷಣೆ ಮಾಡಿದೆ. ಇದರಿಂದ ಕಾಮರಾಜ್ ಅವರಿಗೆ ತುಸು ನೆಮ್ಮದಿ ದೊರಕಿದೆ, ಯಾಕೆಂದರೆ 25000 ಹಾಗೂ ಮುಂದಿನ ಖರ್ಚುಗಳು ಎಂದರೆ ಮಧ್ಯಮ ವರ್ಗಕ್ಕೆ ಅದು ಹಲವಾರು ತಿಂಗಳುಗಳ ಕಾಲ ದುಡಿಮೆ ಎಂದರೆ ತಪ್ಪಾಗಲಾರದು.