ಅತಿ ಕಡಿಮೆ ವಿದ್ಯಾಭ್ಯಾಸ ಹೊಂದಿರುವ ಭಾರತೀಯ ಕ್ರಿಕೆಟಿಗರು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಕ್ರಿಕೆಟ್ ಗೆ ಇರುವ ಜನಪ್ರಿಯತೆಯ ಮತ್ಯಾವುದೇ ಕ್ರೀಡೆಗೆ ಇಲ್ಲ. ಇತ್ತೀಚೆಗಂತೂ ಪ್ರತಿದಿನ ಪಂದ್ಯ ಆಡಿದರೂ ಕೂಡ ಜನರು ಕ್ರಿಕೆಟ್ ಮೇಲಿನ ಆಸಕ್ತಿಯನ್ನು ಕಳೆದು ಕೊಳ್ಳುವುದಿಲ್ಲ. ಹೀಗಿರುವಾಗ ಒಮ್ಮೆ ನೀವು ಕ್ರಿಕೆಟ್ ಲೋಕದಲ್ಲಿ ಮಿಂಚಲು ಆರಂಭಿಸಿದರೇ ಜನರು ನಿಮ್ಮನ್ನು ಕೆಲವೇ ಕೆಲವು ಗಂಟೆಗಳಲ್ಲಿ ಸೆಲೆಬ್ರಿಟಿ ಯನ್ನಾಗಿ ಮಾಡಿ ಬಿಡುತ್ತಾರೆ. ಇನ್ನೊಬ್ಬರ ಭಾರತೀಯ ಕ್ರಿಕೆಟಿಗರು ಕೂಡ ಹೆಚ್ಚಿನ ಜನಪ್ರಿಯತೆಯನ್ನು ಪಡೆದು ಕೊಂಡಿದ್ದು, ಈಗ ದೇಶದ ಮೂಲೆ ಮೂಲೆಯಲ್ಲಿಯೂ ಗುರುತನ್ನು ಪಡೆದುಕೊಂಡಿದ್ದಾರೆ.

ಈ ಭಾರತೀಯ ಕ್ರಿಕೆಟಿಗರ ಬಗ್ಗೆ ಮಾತನಾಡುವುದಾದರೇ ನಾವು ಇಂದು ಅತಿ ಕಡಿಮೆ ವಿದ್ಯಭ್ಯಸ ಹೊಂದಿರುವ ಕ್ರಿಕೆಟಿಗರು ಯಾರ್ಯಾರು ಹಾಗೂ ಅವರಿಗೆ ಎಷ್ಟು ಓದಿದ್ದಾರೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇವೆ ಕೇಳಿ, ಮೊದಲನೆಯದಾಗಿ ಹಾರ್ದಿಕ್ ಪಾಂಡ್ಯ: 9ನೇ ಕ್ಲಾಸ್, ಸ್ನೇಹಿತರೇ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್-ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ರವರು ಕೇವಲ ಒಂಬತ್ತನೇ ಕ್ಲಾಸ್ ವರೆಗೂ ಮಾತ್ರ ಶಾಲೆಗೆ ತೆರಳಿದ್ದಾರೆ, ಅದು ಕೂಡ 9 ಕ್ಲಾಸಿನಲ್ಲಿ ಫೇಲ್ ಆಗಿದ್ದಾರೆ, ಇನ್ನು ಶಿಖರ್ ಧವನ್ ರವರು ಕೇವಲ ಪಿಯುಸಿವರೆಗೆ ಮಾತ್ರ ಓದಿದ್ದಾರೆ, ತದನಂತರ ಕ್ರಿಕೆಟ್ ಗಾಗಿ ವಿದ್ಯಾಭ್ಯಾಸದಿಂದ ದೂರವುಳಿದರು.

ಇನ್ನು ಭಾರತ ಕ್ರಿಕೆಟ್ ತಂಡದ ಏಕದಿನ ತಂಡದ ಉಪ ನಾಯಕ ರೋಹಿತ್ ಶರ್ಮಾ ರವರು ಕಾಲೇಜಿನ ಮೆಟ್ಟಿಲು ಕೂಡ ಹತ್ತಲಿಲ್ಲ, ತಾವು ಇದ್ದ ಶಾಲೆಯಲ್ಲಿಯೇ ಪಿಯುಸಿವರೆಗೆ ಓದಿಕೊಂಡು ತದ ನಂತರ ಕ್ರಿಕೆಟ್ ಲೋಕದಲ್ಲಿ ಮಿಂಚಲು ಆರಂಭಿಸಿದರು. ಇನ್ನು ಮಾಜಿ ನಾಯಕ ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರು ಕೂಡ ಕೇವಲ ಪಿಯುಸಿವರೆಗೆ ಮಾತ್ರ ಓದಿದ್ದಾರೆ.

Facebook Comments

Post Author: Ravi Yadav