ನೀವು ಎಂದು ಮಾಡಿರದ ಹೊಸ ರುಚಿಯ ಹುಣಸೆಹಣ್ಣಿನ ರೈಸ್ ಬಾತ್ ಮಾಡುವುದು ಹೇಗೆ ಗೊತ್ತೇ??

ನೀವು ಎಂದು ಮಾಡಿರದ ಹೊಸ ರುಚಿಯ ಹುಣಸೆಹಣ್ಣಿನ ರೈಸ್ ಬಾತ್ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಹುಣಸೆಹಣ್ಣಿನ ರೈಸ್ ಬಾತ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹುಣಸೆಹಣ್ಣಿನ ರೈಸ್ ಬಾತ್ ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಅಕ್ಕಿ, 2 ಈರುಳ್ಳಿ, 1 ಟೊಮೇಟೊ, 2 ಚಮಚ ಕಡಲೇಬೀಜ, 2 ಚಮಚ ಕಡಲೆ ಬೇಳೆ, 4 ಚಮಚ ಎಣ್ಣೆ, 8 ಒಣಮೆಣಸಿನಕಾಯಿ, 2 ಚಮಚ ಜೀರಿಗೆ ಪುಡಿ, ಸಣ್ಣ ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು, ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಗೆಡ್ಡೆ ಬೆಳ್ಳುಳ್ಳಿ, ಸ್ವಲ್ಪ ಸಾಸಿವೆ, ಅರ್ಧ ಚಮಚ ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಹುಣಸೆಹಣ್ಣಿನ ರೈಸ್ ಬಾತ್ ಮಾಡುವ ವಿಧಾನ: ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ತೆಗೆದುಕೊಂಡ ಅಕ್ಕಿಯನ್ನು ಹಾಕಿ 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಯಲು ಬಿಡಿ. ಮತ್ತೊಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ತೆಗೆದುಕೊಂಡ ಹುಣಸೆಹಣ್ಣನ್ನು ಹಾಕಿ ಹತ್ತು ನಿಮಿಷಗಳ ಕಾಲ ನೀರಿನಲ್ಲಿ ನೆನೆಯಲು ಬಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಕುಕ್ಕರ್ ನನ್ನು ಇಟ್ಟು ಅದಕ್ಕೆ 4 ಚಮಚ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಸಾಸಿವೆ, 2 ಚಮಚ ಕಡಲೆ ಬೀಜವನ್ನು ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಕಡಲೆಬೇಳೆಯನ್ನು ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಜಜ್ಜಿದ ಬೆಳ್ಳುಳ್ಳಿ, ಕರಿಬೇವು, ಮುರಿದ ಒಣ ಮೆಣಸಿನಕಾಯಿಯನ್ನು ಹಾಕಿ 30 ಸೆಕೆಂಡುಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ 3 – 4 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮೊಟೊವನ್ನು ಹಾಕಿ 2 – 3 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ತದನಂತರ ಇದಕ್ಕೆ 2 ಚಮಚದಷ್ಟು ಜೀರಿಗೆ ಪುಡಿ, ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ 1 ಬಟ್ಟಲಿನಷ್ಟು ಹುಣಸೆಹಣ್ಣಿನ ರಸ, 2 ಬಟ್ಟಲು ನೀರು, ನೆನೆಸಿದ ಅಕ್ಕಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡು 2 ವಿಷಲ್ ಹಾಕಿಸಿಕೊಳ್ಳಿ. ಕುಕ್ಕರ್ ತಣ್ಣಗಾದ ನಂತರ ತೆಗೆದು ಒಂದು ಬಾರಿ ಮಿಕ್ಸ್ ಮಾಡಿದರೆ ಹುಣಸೆಹಣ್ಣಿನ ರೈಸ್ ಬಾತ್ ಸವಿಯಲು ಸಿದ್ಧ