ಕನ್ನಡತಿ ಧಾರವಾಹಿ ನೋಡಿ, ಆಶ್ಚರ್ಯಕರ ಮಾತುಗಳನ್ನಾಡಿದ ಟಿ.ಎನ್‌. ಸೀತಾರಾಮ್. ಸಿಹಿ ಸುದ್ದಿ ಕೊಡುತ್ತಾರೆಯೇ??

ನಮಸ್ಕಾರ ಸ್ನೇಹಿತರೇ, ಕಲರ್ಸ್ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗುವ ಕನ್ನಡತಿ ಸೀರಿಯಲ್ ದಿನದಿಂದ ದಿನಕ್ಕೆ ಅಪಾರ ಮೆಚ್ಚುಗೆಯನ್ನು ಪಡೆಯುತ್ತಿದೆ. ಈ ಸೀರಿಯಲ್ ನ ಬಗ್ಗೆ ಹೆಸರಾಂತ ನಿರ್ದೇಶಕರಾದ ಟಿ .ಎನ್ .ಸೀತಾರಾಮ್ ರವರು ಒಂದು ವಿಡಿಯೋದಲ್ಲಿ ಮಾತನಾಡಿದ್ದಾರೆ.ಈ ವಿಡಿಯೋದಲ್ಲಿ ಏನು ಹೇಳಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.

ಕಿರಣ್ ರಾಜ್ ಮತ್ತು ರಂಜನಿ ರಾಘವನ್ ರವರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಕನ್ನಡತಿ ಧಾರಾವಾಹಿಯು ಮೊದಲಿನಿಂದಲೂ ದಿನದಿಂದ ದಿನಕ್ಕೆ ಹೊಸ ಹೊಸ ರೀತಿಯ ಟ್ವಿಸ್ಟ್ ಗಳನ್ನೂ ನೀಡುತ್ತಾ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ಬಗ್ಗೆ ಟಿ .ಎನ್ .ಸೀತಾರಾಮ್ ರವರು ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಕಿರುತೆರೆ ಫ್ಯಾನ್ಸ್ ಗೆ ಸರ್ಪ್ರೈಸ್ ಅನ್ನು ಕೂಡ ನೀಡಿದ್ದಾರೆ.

ಹೌದು ವೀಕ್ಷಕರೇ , ನಿರ್ದೇಶಕರಾದ ಟಿ .ಎನ್.ಸೀತಾರಾಮ್ ರವರು ಕನ್ನಡತಿ ಸೀರಿಯಲ್ ನನ್ನು ಮನಸಾರೆ ಇಷ್ಟಪಟ್ಟಿದ್ದಾರೆ. ಅವರು ವಿಡಿಯೋದಲ್ಲಿ ಕನ್ನಡತಿ ಸೀರಿಯಲ್ ನಲ್ಲಿ ನಟಿಸುವುದಾಗಿ ಹೇಳಿದ್ದಾರೆ. ಕನ್ನಡತಿ ಸೀರಿಯಲ್ ಮೇಲೆ ನನಗೆ ವಿಶೇಷವಾದ ಅಭಿಮಾನ ಮತ್ತು ಪ್ರೀತಿ ಎರಡು ಇದೆ.ಏಕೆಂದರೆ, ಮೊದಲನೆಯದಾಗಿ ಅದು ನಮ್ಮ ಭಾಷೆ ಕನ್ನಡದ ಬಗ್ಗೆ ಇರೋದ್ರಿಂದ. ಇನ್ನು ಎರಡನೆಯದು ಈ ಸೀರಿಯಲ್ ಗೆ ನನ್ನ ಪ್ರೀತಿಯ ಗೆಳೆಯ ಕಥೆ ನೀಡಿರುವುದು.

ಮೂರನೆಯದಾಗಿ ನನ್ನ ಅಸೋಸಿಯೇಟ್ ಪಾಂಡು ಪಾಟೀಲ್ ಈ ಸೀರಿಯಲ್ ನಿರ್ದೇಶನ ಮಾಡುತ್ತಿದ್ದಾನೆ. ಇನ್ನು ಕೊನೆಯದಾಗಿ ಈ ಸೀರಿಯಲ್ ನೋಡಿದ ಪ್ರತಿಯೊಬ್ಬ ವೀಕ್ಷಕರು ಒಳ್ಳೆಯ ರೀತಿಯ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಮಗಳು ಜಾನಕಿ ಅಂತ ಒಂದು ಗ್ರೂಪ್ ಇದೆ. ಅದರಲ್ಲಿ 65 ಸಾವಿರ ಸದಸ್ಯರು ಇದ್ದಾರೆ. ಅದರಲ್ಲಿ ಮಗಳು ಜಾನಕಿ ಸೀರಿಯಲ್ ಗಿಂತ ಕನ್ನಡತಿ ಸೀರಿಯಲ್ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಾರೆ. ಕನ್ನಡತಿ ಚೆನ್ನಾಗಿದೆ ಅಂತ ಗ್ರೂಪ್ ನಲ್ಲಿ ಎಲ್ಲ ಹೇಳುತ್ತಿದ್ದಾರೆ. ನನಗೆ ಕಥೆಯಿಂದ ಹಿಡಿದು ಶೀರ್ಷಿಕೆ ವರೆಗೂ ಎಲ್ಲವೂ ಇಷ್ಟವಾಗಿದೆ. ಹೀಗಾಗಿ , ಕನ್ನಡತಿ ಮೇಲೆ ಅಭಿಮಾನ ಮತ್ತು ಪ್ರೀತಿ ಎರಡು ಹುಟ್ಟಿದೆ.ಇದರಲ್ಲಿ ಕೆಲವು ದಿನಗಳ ಒಂದು ಪಾತ್ರ ಸಿಕ್ಕರೆ, ನಾನು ಖಂಡಿತ ಆರೋಗ್ಯ ಪೂರ್ಣವಾಗಿ ನಿಭಾಯಿಸುವುದಕ್ಕೆ ತುಂಬಾ ಇಷ್ಟಪಡ್ತಿನಿ. ಅದು ನನ್ನದು ಅಂತ ಅಭಿಮಾನಪಡ್ತಿನಿ ಎಂದು ಟಿ.ಎನ್ .ಸೀತಾರಾಮ್ ರವರು ಹೇಳಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ರವರು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಈ ವಿಡಿಯೋವನ್ನೂ ಹಂಚಿಕೊಂಡು’ ನಮ್ಮ ಪ್ರೀತಿಯ ಕನ್ನಡತಿಯಲ್ಲಿ ಅತಿಥಿ ಪಾತ್ರ ಮಾಡ್ತೀನಿ ಅಂತ ಇಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ ಷರತ್ತುಗಳು ಅನ್ವಯಿಸುತ್ತವೆ ಎಂದು ಪ್ರತ್ಯೇಕವಾಗಿ ವಾಯ್ಸ್ ನೋಟ್ ಕಳುಹಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ’. ಈ ಪೋಸ್ಟ್ ನನ್ನು ನೋಡಿದ ಟಿ .ಎನ್ .ಸೀತಾರಾಮ್ ರವರ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

Post Author: Ravi Yadav