ಯಾವುದೇ ತರಕಾರಿ, ಈರುಳ್ಳಿ, ಟೊಮೊಟೊ ಇಲ್ಲದೇ ದಿಡೀರ್ ಎಂದು ಅದ್ಭುತ ಸಾಂಬರ್ ಮಾಡುವುದು ಹೇಗೆ ಗೊತ್ತಾ??

ಯಾವುದೇ ತರಕಾರಿ, ಈರುಳ್ಳಿ, ಟೊಮೊಟೊ ಇಲ್ಲದೇ ದಿಡೀರ್ ಎಂದು ಅದ್ಭುತ ಸಾಂಬರ್ ಮಾಡುವುದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ಯಾವುದೇ ತರಕಾರಿ ಇಲ್ಲ, ಈರುಳ್ಳಿ, ಟಮೋಟೋ ಸೇರಿದಂತೆ ಉಳಿದ ಇನ್ಯಾವುದೇ ತರಕಾರಿ ಇಲ್ಲದಿದ್ದರೂ ಸಾಂಬಾರ್ ಮಾಡುವುದು ಹೇಗೆ ಎಂದು ಯೋಚನೆ ಮಾಡುತ್ತಿರುವೀರಾ?? ಹಾಗಿದ್ದರೇ ಬನ್ನಿ ಕೆಲವೇ ಕೆಲವು ನಿಮಿಷಗಳಲ್ಲಿ ಯಾವುದೇ ತರಕಾರಿ ಆಗಲಿ ಅಥವಾ ಈರುಳ್ಳಿ ಟಮೋಟೋ ಆಗಲಿ ಇಲ್ಲದೆ ಹೀಗೆ ನೀವು ಮನೆಯಲ್ಲಿಯೇ ಸಾಂಬಾರ್ ಮಾಡಬಹುದು ಎಂಬುದನ್ನು ತಿಳಿಸಿ ಕೊಡುತ್ತೇವೆ. ತರಕಾರಿ, ಈರುಳ್ಳಿ, ಟಮೋಟೋ ಇಲ್ಲದೆ ಮಾಡುವ ಸಾಂಬಾರ್ ರುಚಿಯಾಗಿರುವುದಿಲ್ಲ ಎಂದುಕೊಳ್ಳಬೇಡಿ, ಬಹಳ ಅದ್ಭುತವಾಗಿ ರುಚಿ ನೀಡುತ್ತದೆ ಈ ಸಾಂಬಾರು. ಖಂಡಿತ ನಿಮ್ಮ ಮನೆಯವರೆಲ್ಲರೂ ಇದನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಬ್ಯಾಚುಲರುಗಳಿಗೆ ಕೂಡ ಇದು ಮಾಡಲು ಬಲು ಸುಲಭ. ಅಗತ್ಯವಿರುವ ಸಂದರ್ಭದಲ್ಲಿ ಒಮ್ಮೊಮ್ಮೆ ತರಕಾರಿ ಇಲ್ಲದಾಗ ಈ ಸಾಂಬಾರ್ ಟ್ರೈ ಮಾಡಿ ನೋಡಿ, ತಡ ಯಾಕೆ ಬನ್ನಿ ತಿಳಿಸಿಕೊಡುತ್ತೇವೆ.

ಗ್ರೇವಿ / ಸಾರು ಮಾಡಲು ಬೇಕಾಗುವ ಸಾಮಗ್ರಿಗಳು: 2 ಚಮಚ ಧನಿಯಾ, 7 – 8 ಒಣಮೆಣಸಿನಕಾಯಿ, ಸ್ವಲ್ಪ ಹುಣಸೆಹಣ್ಣು, 1 / 4 ಚಮಚ ಮಂತ್ಯ, 1 / 4 ಚಮಚದಷ್ಟು ಸಾಸುವೆ, 2 ಬೆಳ್ಳುಳ್ಳಿ, 1 ಚಮಚ ಅರಿಶಿನ ಪುಡಿ, ಅರ್ಧ ಚಮಚ ಸಾಂಬಾರು ಪುಡಿ, 2 ಚಮಚ ಕರಿಮೆಣಸು, 1 ಚಮಚ ಜೀರಿಗೆ, ಕರಿಬೇವು, ಎಣ್ಣೆ, ರುಚಿಗೆ ತಕಷ್ಟು ಉಪ್ಪು.

ಗ್ರೇವಿ / ಸಾರು ಮಾಡುವ ವಿಧಾನ: ಮೊದಲಿಗೆ, ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಳ್ಳಿ. ಅದಕ್ಕೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ತೆಗೆದುಕೊಂಡ ಧನಿಯಾ , ಬೆಳ್ಳುಳ್ಳಿ ,ಒಣಮೆಣಸಿನಕಾಯಿ ಹಾಕಿ ಅರ್ಧ ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಕರಿಮೆಣಸು ಹಾಗೂ ಜೀರಿಗೆಯನ್ನು ಹಾಕಿ ಅರ್ಧ ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ. ಮಿಶ್ರಣ ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ಸ್ವಲ್ಪ ನೀರನ್ನು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.

ನಂತರ ಅದೇ ಮಿಕ್ಸಿ ಜಾರಿಗೆ ನೆನೆಸಿದ ಹುಣಸೆ ಹಣ್ಣು, ಅರಿಶಿನ ಪುಡಿಯನ್ನು ಹಾಕಿ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು,ಅದಕ್ಕೆ 5 – 6 ಚಮಚ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಸ್ವಲ್ಪ ಮೆಂತ್ಯ ,3 ಒಣಮೆಣಸಿನಕಾಯಿ, ಕರಿಬೇವುವನ್ನು ಹಾಕಿ ಫ್ರೈ ಮಾಡಿಕೊಳ್ಳಿ. ಕೊನೆಯದಾಗಿ ರುಬ್ಬಿದ ಮಿಶ್ರಣ, ರುಚಿಗೆ ತಕಷ್ಟುಉಪ್ಪು ಹಾಗೂ ಸ್ವಲ್ಪ ನೀರನ್ನು ಹಾಕಿ ಬೇಯಿಸಿಕೊಂಡರೆ ಸಾಂಬಾರ್ ಸವಿಯಲು ಸಿದ್ದ.