ಫುಲ್ ಫೇಮಸ್ ಬೆಂಗಳೂರು ದೊನ್ನೆ ಬಿರಿಯಾನಿ ಮಾಡುವುದು ಹೇಗೆ ಗೊತ್ತಾ?? ಹೀಗೆ ಮಾಡಿ ಎಲ್ಲರೂ ಇಷ್ಟ ಪಡುತ್ತಾರೆ.

ಫುಲ್ ಫೇಮಸ್ ಬೆಂಗಳೂರು ದೊನ್ನೆ ಬಿರಿಯಾನಿ ಮಾಡುವುದು ಹೇಗೆ ಗೊತ್ತಾ?? ಹೀಗೆ ಮಾಡಿ ಎಲ್ಲರೂ ಇಷ್ಟ ಪಡುತ್ತಾರೆ.

ದೊನ್ನೆ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು: 1.5 ಕೆಜಿ ಚಿಕನ್, 2 ಚಮಚ ಕೆಂಪುಮೆಣಸಿನ ಪುಡಿ, ಸ್ವಲ್ಪ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 2, ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1 ಬಟ್ಟಲು ಮೊಸರು, 4 – 5, ಚಕ್ಕೆ, 10 – 12, ಲವಂಗ, 5 – 6, ಏಲಕ್ಕಿ ,1 ಚಮಚ ಕರಿಮೆಣಸು, 3 ಈರುಳ್ಳಿ, ಸ್ವಲ್ಪ ಹಸಿಮೆಣಸಿನಕಾಯಿ, 1 ಸಣ್ಣ ಬಟ್ಟಲು ಪುದೀನಾ ಸೊಪ್ಪು, 1 ಬಟ್ಟಲು ಮೆಂತ್ಯ ಸೊಪ್ಪು, 1 ಬಟ್ಟಲು ಕೊತ್ತಂಬರಿ ಸೊಪ್ಪು, 1 ಕೆಜಿ ಸೋನಾ ಮಸೂರಿ ಅಕ್ಕಿ, ಸ್ವಲ್ಪ ಜಾಪತ್ರೆ, ಸ್ವಲ್ಪ ಅನಾನಸ್ ಹೂವು, ಸ್ವಲ್ಪ ಕಲ್ಲುಹೂವು, 1 ಚಮಚ ಶಾಹಿ ಜೀರಾ, 1 ಬಿರಿಯಾನಿ ಎಲೆ, 2 ಚಮಚ ಕಸೂರಿ ಮೇತಿ , ತುಪ್ಪ.

ದೊನ್ನೆ ಬಿರಿಯಾನಿ ಮಾಡುವ ವಿಧಾನ: ಮೊದಲು ಒಂದು ಬಟ್ಟಲಿಗೆ ಚೆನ್ನಾಗಿ ತೊಳೆದ ಚಿಕನ್, 2 ಚಮಚ ಕೆಂಪು ಮೆಣಸಿನ ಪುಡಿ( 2 ಚಮಚ ಕೆಂಪು ಮೆಣಸಿನ ಪುಡಿ ಸಾಕು, ಏಕೆಂದರೆ ನಂತರ ಹಸಿಮೆಣಸಿನಕಾಯಿ ಹಾಕಬೇಕು), ಸ್ವಲ್ಪ ಅರಿಶಿನ ಪುಡಿ, ಸ್ವಲ್ಪ ಉಪ್ಪು, 2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 ಬಟ್ಟಲು ಗಟ್ಟಿಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 20 ನಿಮಿಷಗಳ ಕಾಲ ನೆನೆಯಲು ಪಕ್ಕಕ್ಕಿಡಿ. ನಂತರ ಒಂದು ಗ್ಯಾಸ್ ಮೇಲೆ ಒಂದು ಸಣ್ಣ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಲು ಬಿಡಿ.

ಎಣ್ಣೆ ಕಾದ ನಂತರ ಅದಕ್ಕೆ ಚಕ್ಕೆ, ಸ್ವಲ್ಪ ಲವಂಗ, ಸ್ವಲ್ಪ ಏಲಕ್ಕಿ, ಸ್ವಲ್ಪ ಮೆಣಸು, ಮೂರು ಬಟ್ಟಲಿನಷ್ಟು ಉದ್ದನೆ ಹೆಚ್ಚಿದ ಈರುಳ್ಳಿ, ಸ್ವಲ್ಪ ಖಾರಕ್ಕೆ ತಕ್ಕಷ್ಟು ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಈ ಮಿಶ್ರಣವು ತಣ್ಣಗಾಗಲು ಬಿಡಿ. ನಂತರ ಅದೇ ಬಾಣಲೆಗೆ ಪುದೀನಾ ಸೊಪ್ಪು, ಮೆಂತ್ಯ ಸೊಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.ಈ ಮಿಶ್ರಣವನ್ನು ಸಹ ತಣ್ಣಗಾಗಲು ಬಿಡಿ. ಈ ಎರಡು ಮಿಶ್ರಣಗಳು ತಣ್ಣಗಾದ ಬಳಿಕ ಬೇರೆ ಬೇರೆಯಾಗಿ ರುಬ್ಬಿಕೊಳ್ಳಿ. ಮೊದಲನೆಯ ಮಿಶ್ರಣವನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ರುಬ್ಬಿಕೊಳ್ಳಿ.

ನಂತರ ಎರಡನೇ ಮಿಶ್ರಣವನ್ನು ನೀರು ಹಾಕದೆ ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ.15 ನಿಮಿಷಗಳ ಕಾಲ ಅಕ್ಕಿಯನ್ನು ನೀರಿನಲ್ಲಿ ನೆನಸಿಡಿ. ನಂತರ ಒಂದು ಗ್ಯಾಸ್ ಮೇಲೆ ಬಿರಿಯಾನಿ ಮಾಡಲು ಪಾತ್ರೆಯನ್ನು ಇಟ್ಟುಕೊಳ್ಳಿ. ಅದಕ್ಕೆ ಒಂದು ಕಪ್ ನಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ.ಎಣ್ಣೆ ಕಾದ ನಂತರ ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಜಾಪತ್ರೆ, ಕಲ್ಲು ಹೂವು, ಅನಾನಸ್ ಹೂವು, ಶಾಹಿ ಜೀರಾ, ಬಿರಿಯಾನಿ ಎಲೆ, ಕಸೂರಿ ಮೇತಿ, ಸ್ವಲ್ಪ ಈರುಳ್ಳಿ ಹಾಕಿ ಫ್ರೈ ಮಾಡಿ, ನಂತರ ಇದಕ್ಕೆ 3 – 5 ಚಮಚ ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ನೆನೆಸಿಟ್ಟ ಚಿಕನ್,ಮೊದಲೆನೆಯ ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.10 ನಿಮಿಷ ಬೇಯಲು ಬಿಡಿ.

ನಂತರ ಎರಡನೆಯ ಮಿಶ್ರಣವನ್ನು ಹಾಕಿ ಮತ್ತೆ ಕುಡಿಯಲು ಬಿಡಿ. ನಂತರ ಅದಕ್ಕೆ ನಿಂಬೆರಸವನ್ನು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಹೊತ್ತು ಬೇಯಲು ಬಿಡಿ, ನಂತರ ಮತ್ತೆ ಮಿಕ್ಸ್ ಮಾಡಿ. ತದನಂತರ 15 ನಿಮಿಷಗಳ ಕಾಲ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಮಿಕ್ಸ್ ಮಾಡಿ(ಅಳತೆ ಪ್ರಮಾಣ:ನೆನಪಿಟ್ಟುಕೊಳ್ಳಿ ,ಒಂದು ಬಟ್ಟಲು ಅಕ್ಕಿಗೆ ಒಂದುವರೆ ಕಪ್ ನೀರನ್ನು ಹಾಕಬೇಕು). ನಂತರ ಐದು ನಿಮಿಷಗಳ ಕಾಲ ಜಾಸ್ತಿ ಉರಿಯಲ್ಲಿ ಬೇಯಿಸಿಕೊಳ್ಳಿ ಮತ್ತು ನಂತರ 15 ನಿಮಿಷಗಳವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ (ಒಂದು ವೇಳೆ ನೀವೇನಾದರೂ ಕುಕ್ಕರ್ ನಲ್ಲಿ ಮಾಡಬೇಕಾದರೆ ಒಂದು ವಿಷನ್ ಹಾಕಿಸಿ). ಕೊನೆಯದಾಗಿ ಇದಕ್ಕೆ ಎರಡು ಚಮಚ ತುಪ್ಪವನ್ನು ಹಾಕಿ ಮಿಕ್ಸ್ ಮಾಡಿದರೆ ದೊನ್ನೆ ಬಿರಿಯಾನಿ ಸವಿಯಲು ಸಿದ್ಧ.