ಬಹಳ ಸುಲಭವಾಗಿ ಮೈಸೂರ್ ಪಾಕ್ ಮಾಡುವ ವಿಧಾನ ಗೊತ್ತೇ??

ಬಹಳ ಸುಲಭವಾಗಿ ಮೈಸೂರ್ ಪಾಕ್ ಮಾಡುವ ವಿಧಾನ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ಮತ್ತೊಂದು ಸಿಹಿ ತಿಂಡಿಯ ರೆಸಿಪಿಯನ್ನು ಹೇಳಿಕೊಡುತ್ತೇವೆ. ಇಂದು ನಾವು ಮನೆಯಲ್ಲಿಯೇ ಮೈಸೂರು ಪಾಕ್ ಹೇಗೆ ಹೇಗೆ ಮಾಡುವುದು ಎಂಬ ಸರಿಯಾದ ಮತ್ತು ಸುಲಭ ವಿಧಾನವನ್ನು ಹೇಳಿಕೊಡುತ್ತೇವೆ. ಇದನ್ನು ಟ್ರೈ ಮಾಡಿ ಸಿಹಿಯಾದ ಮೈಸೂರ್ ಪಾಕ್ ಅನ್ನು ಸವಿಯಿರಿ.

ಮೊದಲಿಗೆ 2 ಕಪ್ಪಿನಷ್ಟು ತುಪ್ಪವನ್ನು ಪಾತ್ರೆಗೆ ಹಾಕಿ ತುಪ್ಪ ಚೆನ್ನಾಗಿ ಬಿಸಿ ಆದಮೇಲೆ ಅರ್ಧ ಕೆಜಿ ಕಡಲೆಹಿಟ್ಟನ್ನು ಹಾಕಿ. ತುಪ್ಪದ ಜೊತೆ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಅದು ಗಂಟು ಗಂಟು ಬಂದರು ಪರವಾಗಿಲ್ಲ, ಅದನ್ನು ಬೇರೆ ಪಾತ್ರೆಗೆ ಹಾಕಿಕೊಳ್ಳಿ. ನಂತರ ಎರಡು ಕಪ್ಪಿನಷ್ಟು ನೀರು ಮತ್ತು ಒಂದು ಕಾಲ್ ಕೆಜಿ ಸಕ್ಕರೆ ಹಾಕಿ ಅದನ್ನು ಪಾಕ ಮಾಡಿಕೊಳ್ಳಿ. ಆ ಪಾಕಕ್ಕೆ ಫ್ರೈ ಮಾಡಿ ಇಟ್ಟಿದ್ದ ಕಡಲೆಹಿಟ್ಟನ್ನು ಹಾಕಿ ಚೆನ್ನಾಗಿ ಗಂಟು ಆಗದ ರೀತಿಯಲ್ಲಿ ಮಿಕ್ಸ್ ಮಾಡಬೇಕು.

ಮತ್ತೊಂದು ಬಾಂಡ್ಲಿಯಲ್ಲಿ ಎಣ್ಣೆಯನ್ನು ಕು’ದಿಯಲು ಬಿಡಬೇಕು. ನಂತರ ಚೆನ್ನಾಗಿ ಕುದಿಸಿದ ಎಣ್ಣೆಯನ್ನು ಕಡಲೆ ಹಿಟ್ಟು ಇರುವ ಪಾಕಕ್ಕೆ ಸ್ವಲ್ಪ ಸ್ವಲ್ಪ ಹಾಕುತ್ತಾ ಚೆನ್ನಾಗಿ ತಿರುಗಿಸಬೇಕು. ಕುದಿಯುವ ಎಣ್ಣೆ ಯನ್ನು ಹಾಕುವುದರಿಂದ ಮೈಸೂರುಪಾಕು ತುಂಬಾ ಕ್ರಿಸ್ಪಿಯಾಗಿರುತ್ತದೆ. ಚೆನ್ನಾಗಿ ಮಿಕ್ಸ್ ಮಾಡುವಾಗ ಅದು ಯಾವಾಗ ನಿಮಗೆ ಡ್ರೈ ಎನಿಸುತ್ತದೂ ಆಗ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಬೇಕು. ಏಲಕ್ಕಿ ಪುಡಿ ಹಾಕುವುದರಿಂದ ಅದರ ಸುವಾಸನೆ ಹೆಚ್ಚಾಗುತ್ತದೆ. ಅದರ ಹಂಟು ಹೋಗುವವರೆಗೂ ಚೆನ್ನಾಗಿ ಬೇಯಿಸಬೇಕು.

ಅದು ಪೂರ್ಣಪ್ರಮಾಣದಲ್ಲಿ ನಿಮಗೆ ಡ್ರೈ ಎನಿಸುತ್ತದೂ ಆಗ ಮತ್ತೆ ಕು’ದಿಯುವ ಎಣ್ಣೆಯನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು. ಆಗ ಪಾಕ ತಂತಾನೆ ಮುದ್ದೆಯಂತೆ ಬರುತ್ತದೆ. ನಂತರ 1 ಟ್ರೇಗೆ ಚೆನ್ನಾಗಿ ಎಣ್ಣೆ ಸವರಿ ಮೆಲ್ಲನೆ ನಿಧಾನವಾಗಿ ಮಾಡಿರುವ ಮೈಸೂರುಪಾಕ ಮುದ್ದೆಯನ್ನು ಹಾಕಿ. ಅರ್ಧ ಗಂಟೆಯಷ್ಟು ಅದನ್ನು ತಣ್ಣಗಾಗಲು ಬಿಡಬೇಕು, ಸ್ವಲ್ಪ ಸಮಯದ ನಂತರ ಚಾ’ಕುವಿನಿಂದ ಅದನ್ನು ನಿಮಗೆ ಯಾವ ಆಕಾರ ಬೇಕು ಹಾಗೆ ಕಟ್ ಮಾಡಿ.

ಈಗ ಮಾಡಿರುವ ರುಚಿಕರವಾದ ಮೈಸೂರುಪಾಕು ಅದರ ಬಣ್ಣ ಮತ್ತು ಸುಗಂಧದ ಜೊತೆಗೆ ಚೆನ್ನಾಗಿ ಹೊಂದಿಕೊಂಡು ನೋಡಲು ಸಹ ಚೆನ್ನಾಗಿರುತ್ತದೆ. ಅದು ಪೂರ್ಣವಾಗಿ ಒಣಗಿದ ಬಳಿಕ. ಮೈಸೂರ್ ಪಾಕ ಮಾಡುವ ವಿಧಾನ ತುಂಬಾ ಸುಲಭವಾಗಿದ್ದು ಮಾಡಿದ ನಂತರ ತಿನ್ನುವವರಿಗೆ ಸಿಹಿಯನ್ನು ನೀಡುತ್ತದೆ, ಹೀಗಾಗಿ ಇದನ್ನು ಮನೆಯಲ್ಲಿ ಒಂದು ಬಾರಿ ಮಾಡಲು ಪ್ರಯತ್ನಿಸಿ. ರುಚಿರುಚಿಯಾದ ಮೈಸೂರು ಪಾಕನ್ನು ಸವಿಯಿರಿ.