ಅಕ್ಟೋಬರ್ 16 ರ ಒಳಗಡೆ ಈ ವಸ್ತುಗಳನ್ನು ದಾನ ಮಾಡುವ ಮೂಲಕ ಸಾಕ್ಷಾತ್ ವಿಷ್ಣುವಿನ ಕೃಪೆಗೆ ಪಾತ್ರರಾಗಿ !

ಅಕ್ಟೋಬರ್ 16 ರ ಒಳಗಡೆ ಈ ವಸ್ತುಗಳನ್ನು ದಾನ ಮಾಡುವ ಮೂಲಕ ಸಾಕ್ಷಾತ್ ವಿಷ್ಣುವಿನ ಕೃಪೆಗೆ ಪಾತ್ರರಾಗಿ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಅಕ್ಟೋಬರ್ ಹದಿನಾರನೇ ತಾರೀಖಿನವರೆಗೂ ಭಾರತೀಯ ಪಂಚಾಂಗದ ಪ್ರಕಾರ ಅಧಿಕ ಮಾಸ ನಡೆಯುತ್ತಿರುತ್ತದೆ. ಈ ತಿಂಗಳು ಬಹಳ ವಿಶೇಷವೆನಿಸಿದ್ದು ಸಾಕ್ಷಾತ್ ವಿಷ್ಣು ಈ ತಿಂಗಳ ಅಧಿಪತಿ. ಅದೇ ಕಾರಣಕ್ಕಾಗಿ ಈ ತಿಂಗಳಿನಲ್ಲಿ ಮಾಡುವ ಪೂಜಾ ಕಾರ್ಯಗಳು ಹಾಗೂ ದಾನ ಧರ್ಮಗಳು ಬಹಳ ಮಹತ್ವವನ್ನು ಪಡೆದುಕೊಂಡಿವೆ, ಈ ಸಮಯದಲ್ಲಿ ನಡೆಸಲಾಗುವ ಧಾರ್ಮಿಕ ಆಚರಣೆಗಳು ಸಾಮಾನ್ಯ ದಿನಗಳಲ್ಲಿ ನಡೆಸುವುದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಫಲವನ್ನು ನೀಡುತ್ತವೆ ಎಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಇನ್ನು ಈಗಾಗಲೇ ಯಜ್ಞ ಯಾಗಾದಿಗಳನ್ನು ಮಾಡಲು ಸಾಧ್ಯವಾಗದಿರಬಹುದು, ಯಾವ ರೀತಿಯಲ್ಲಿ ಚಿಕ್ಕ ಚಿಕ್ಕ ವಿಶೇಷ ಧಾರ್ಮಿಕ ಕಾರ್ಯಗಳ ಮೂಲಕ ಫಲವನ್ನು ಪಡೆಯಬಹುದು ಎಂಬುದನ್ನು ನಾವು ತಿಳಿಸಿದ್ದೇವೆ.

ಇಂದಿನ ಈ ಲೇಖನದಲ್ಲಿ ಅಧಿಕ ಮಾಸದಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿರುವ ದಾನದ ಬಗ್ಗೆ ತಿಳಿಸಿಕೊಡುತ್ತೇವೆ. ಈ ಸಮಯದಲ್ಲಿ ದಾನ ಮಾಡುವುದರಿಂದ ನಿಮಗೆ ಸಂತೋಷದ ದಿನಗಳು ಬಂದು ನಿಮ್ಮ ಮನೆಯಲ್ಲಿ ಸಂತೋಷ ತುಂಬುತ್ತದೆ ಎಂಬ ನಂಬಿಕೆ ಇದೆ. ಆದ ಕಾರಣದಿಂದ ಸಾಧ್ಯವಾದಷ್ಟು ಈ ಕೆಳಗಿನ ವಸ್ತುಗಳನ್ನು ದಾನ ಮಾಡುವ ಮೂಲಕ ಸಾಕ್ಷಾತ್ ವಿಷ್ಣುವಿನ ಕೃಪೆಗೆ ಪಾತ್ರರಾಗಿ.

ಮೊದಲನೆಯದಾಗಿ ಈ ತಿಂಗಳಿನ ಅಧಿಪತಿ ವಿಷ್ಣು ಆಗಿರುವ ಕಾರಣ ನೀವು ಸಾಕ್ಷಾತ್ ವಿಷ್ಣುವಿನ ಪೂಜೆ ಮಾಡಿದ ನಂತರ ಸಾಧ್ಯವಾದಷ್ಟು ಬಾಳೆಹಣ್ಣನ್ನು ದಾನ ಮಾಡಿ. ಇದರಿಂದ ನಿಮ್ಮ ಮನೆಗೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ, ಬಾಳೆಹಣ್ಣನ್ನು ಶುಭದ ಸಂಕೇತವೆಂದು ಕರೆಯಲಾಗುತ್ತದೆ. ಆದಕಾರಣ ಈ ಸಮಯದಲ್ಲಿ ಬಾಳೆಹಣ್ಣು ದಾನಮಾಡುವುದು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಇನ್ನು ಎರಡನೆಯದಾಗಿ ವಿಷ್ಣುವಿಗೆ ಪ್ರಿಯ ಎನಿಸಿರುವ ಹಳದಿ ಬಣ್ಣದ ಬಟ್ಟೆಗಳನ್ನು ದಾನ ಮಾಡಿ, ಈ ತಿಂಗಳಿನಲ್ಲಿ ಹಳದಿ ಬಟ್ಟೆಗಳನ್ನು ದಾನ ಮಾಡುವುದರಿಂದ ನಿಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಸಾಧ್ಯವಾದರೇ ನೀವು ಹಳದಿ ಬಟ್ಟೆಯನ್ನು ಗುರುವಾರ ದಾನ ಮಾಡಿದರೇ ಮತ್ತಷ್ಟು ಹೆಚ್ಚಿನ ಫಲ ನೀಡಲಾಗುತ್ತದೆ ಎಂಬುದನ್ನು ಪುರಾಣಗಳು ತಿಳಿಸುತ್ತವೆ.

ಇನ್ನು ಮೂರನೆಯದಾಗಿ ಶುಭಕ್ಕೆ ಹೆಸರು ವಾಸಿಯಾಗಿರುವ ತೆಂಗಿನ ಕಾಯಿಯನ್ನು ಅಧಿಕ ಮಾಸದಲ್ಲಿ ನೀವು ದಾನ ಮಾಡಿ. ಈ ಸಮಯದಲ್ಲಿ ತೆಂಗಿನಕಾಯಿ ದಾನ ಮಾಡುವ ವ್ಯಕ್ತಿಗೆ ಶುಭವಾಗುತ್ತದೆ ಹಾಗೂ ಅವರಿಗೆ ಲಕ್ಷ್ಮಿಯ ಕೃಪೆ ಕೂಡ ಸಿಗುತ್ತದೆ, ಇದರಿಂದ ಅವರ ಕುಟುಂಬದಲ್ಲಿ ಲಕ್ಷ್ಮಿ ದೇವತೆ ನೆಲೆಸಲಿದ್ದಾರೆ ಎಂಬ ನಂಬಿಕೆ ಇದೆ. ಇನ್ನು ಈ ವಿಶೇಷ ಅವಧಿಯಲ್ಲಿ ನೀವು ಸಾಧ್ಯವಾದಷ್ಟು ಅಗತ್ಯವಿರುವ ಜನರಿಗೆ ಆಹಾರವನ್ನು ದಾನ ಮಾಡಿ. ಇದರಿಂದ ನಿಮಗೆ ಲಕ್ಷ್ಮಿ ದೇವಿ ಆಶೀರ್ವದಿಸುತ್ತಾರೆ, ಹೀಗೆ ನೀವು ದಾನ ಮಾಡುವುದರಿಂದ ನಿಮ್ಮ ಮನೆಯಲ್ಲಿ ಎಂದಿಗೂ ಕ್ಷಾಮ ಕಾಣಿಸುವುದಿಲ್ಲ, ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾರೆ, ಇದರಿಂದ ನಿಮ್ಮ ಮನೆಯಲ್ಲಿ ಹಣ ಮತ್ತು ಧಾನ್ಯಗಳು ಹೆಚ್ಚಾಗುತ್ತವೆ ಎಂಬ ನಂಬಿಕೆ ಇದೆ.

ಇನ್ನು ಕೊನೆಯದಾಗಿ ನೀವು ನಿಮ್ಮ ಸಂಪತ್ತನ್ನು ಹೆಚ್ಚಿಸಬೇಕು ಎಂದುಕೊಂಡಿದ್ದರೆ ಈ ಸಮಯದಲ್ಲಿ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಸಾಧ್ಯವಾದಷ್ಟು ಪುಸ್ತಕಗಳನ್ನು ದಾನ ಮಾಡಿ. ಹೀಗೆ ಪುಸ್ತಕಗಳನ್ನು ದಾನ ಮಾಡುವುದರಿಂದ ಲಕ್ಷ್ಮೀ ದೇವಿಯು ನಿಮ್ಮನ್ನು ಆಶೀರ್ವದಿಸುತ್ತಾರೆ ಇದರಿಂದ ನಿಮ್ಮ ಸಂಪತ್ತು ಕ್ರಮೇಣ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.