ದೀರ್ಘಕಾಲದ ಮಂಡಿ,ಕೀಲು ನೋವನ್ನು ಅರಿಶಿನದ ಸಹಾಯದಿಂದ ವಾಸಿಮಾಡಬಹುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇತ್ತೀಚಿನ ಆಧುನಿಕ ಯುಗದಲ್ಲಿ ಕೇವಲ ಹಿರಿಯರಿಗಷ್ಟೇ ಅಲ್ಲದೆ ಕಂಪ್ಯೂಟರ್ಗಳ ಮುಂದೆ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವಂತ ಯುವಕರಿಗೂ ಕೂಡ ಕೀಲುನೋವುಗಳು ಸಾಮಾನ್ಯವಾಗಿವೆ. ಆಧುನಿಕ ಜಗತ್ತಿನಲ್ಲಿ ಹೆಚ್ಚು ಶ್ರಮಿಸುವ ಜನರು ಉತ್ತಮ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ಆರೋಗ್ಯವಾಗಿ ಇರುತ್ತಾರೆ. ಆದರೆ ಕಂಪ್ಯೂಟರ್ಗಳ ಮುಂದೆ ಕುಳಿತುಕೊಂಡು ಲಕ್ಷ ಲಕ್ಷ ದುಡಿದರೂ ಕೂಡ ಆರೋಗ್ಯಕ್ಕಾಗಿ ಲಕ್ಷಲಕ್ಷ ಸುರಿಯಬೇಕಾದ ಪರಿಸ್ಥಿತಿ. ಇನ್ನು ಯುವಕರಿಗೆ ಅಷ್ಟೇ ಅಲ್ಲದೆ ವಯಸ್ಸು ಕಳೆದಂತೆ ಕೀಲು ನೋವುಗಳು ಸರ್ವೇಸಾಮಾನ್ಯವಾಗಿವೆ. ಕೆಲವು ಅಧ್ಯಯನಗಳ ಪ್ರಕಾರ ಹಲವಾರು ವರ್ಷಗಳ ನಂತರ ನಮ್ಮ ಮಂಡಿಗಳ ಮತ್ತು ಕೀಲುಗಳ ಭಾಗದಲ್ಲಿರುವ ಮೂಳೆಗಳು ಸವೆದು ನಮಗೆ ನೋವು ಕಂಡುಬರುತ್ತದೆ ಎಂದು ವೈದ್ಯಶಾಸ್ತ್ರ ಹೇಳುತ್ತದೆ. ಇನ್ನು ಕೆಲವು ಅಧ್ಯಯನಗಳಲ್ಲಿ ಕೀಲುಗಳ ಭಾಗದಲ್ಲಿ ಇರುವ ಒಂದು ದ್ರವ ಸಂಪೂರ್ಣವಾಗಿ ಖಾಲಿಯಾಗಿ ನೋವುಗಳು ಕಾಣಿಸುತ್ತವೆ ಎಂದು ತಿಳಿದುಬಂದಿದೆ.

ಒಂದು ವೇಳೆ ನಿಮಗೂ ಕೂಡ ಕೀಲು ನೋವಿನ ಸಮಸ್ಯೆಯಿದ್ದರೆ ಬನ್ನಿ ಒಂದು ಅರಿಶಿನದ ಸಹಾಯದಿಂದ ಹೇಗೆ ನೀವು ನೋವನ್ನು ನಿವಾರಣೆ ಮಾಡಿಕೊಳ್ಳಬಹುದು ಎಂಬುದನ್ನು ನಾವು ತಿಳಿಸುತ್ತೇವೆ. ಸ್ನೇಹಿತರೇ, ನಮ್ಮ ಹಿರಿಯರು ಹೇಳಿದಂತೆ ಹಾಗೂ ನಮ್ಮ ಆಯುರ್ವೇದ ಪದ್ಧತಿಯಲ್ಲಿ ಅರಿಶಿನ ಬಹಳ ಮಹತ್ವವನ್ನು ಪಡೆದು ಕೊಂಡಿದೆ. ಅರಿಶಿನ ನೋವು ನಿವಾರಣೆಯ ಪ್ರಮುಖ ಪದಾರ್ಥಗಳಲ್ಲಿ ಕಾಣಿಸುತ್ತದೆ, ಹಲವಾರು ಔಷಧೀಯ ಗುಣಗಳನ್ನು ತನ್ನಲ್ಲಿ ಇಟ್ಟುಕೊಂಡಿರುವ ಅರಿಶಿನ ನಿಮ್ಮ ಮಂಡಿ ಚಿಪ್ಪುಗಳ ಭಾಗದಲ್ಲಿ ಕಂಡುಬರುವ ನೋವು ಮತ್ತು ಕೀಲುಗಳ ನೋವನ್ನು ಬಹಳ ವೇಗವಾಗಿ ಕಡಿಮೆ ಮಾಡುವ ಸಾಮರ್ಥ್ಯಹೊಂದಿದೆ.

ಒಂದು ವೇಳೆ ನಿಮಗೆ ಕೀಲುನೋವು ಸಮಸ್ಯೆ ಇದ್ದರೆ, ಹರಿಶಿನ ದಲ್ಲಿರುವ ಕುರ್ಕ್ಯುಮಿನ್ ಎಂಬ ಅಂಶ ಆಂಟಿಬ್ಯಾಕ್ಟೀರಿಯಲ್, ಆಂಟಿಸೆಪ್ಟಿಕ್,ಆಂಟಿಇಂಪ್ಲಾಮೇಟರಿ ಮತ್ತು ಆಂಟಿವೈರಲ್ ಗುಣ ಲಕ್ಷಣಗಳನ್ನು ಹೊಂದಿದೆ. ಹೀಗಾಗಿ ನೀವು ಅರಿಶಿನ ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುವುದಷ್ಟೇ ಅಲ್ಲದೆ ನಿಮ್ಮ ದೇಹದ ಯಾವುದೇ ಭಾಗದಲ್ಲಿ ಉಂಟಾಗಿರುವ ನೋವನ್ನು ಸುಲಭವಾಗಿ ವಾಸಿ ಮಾಡಬಹುದಾಗಿದೆ. ಇನ್ನು ಅಷ್ಟೇ ಅಲ್ಲದೇ ಚರ್ಮದ ಉರಿಯೂತವನ್ನು ಕೂಡ ಕಡಿಮೆ ಮಾಡುವ ಶಕ್ತಿಯನ್ನು ಅರಿಸಿನ ಹೊಂದಿದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ.

ಇನ್ನೂ ಅರಿಶಿನ ಹೇಗೆ ಸೇವನೆ ಮಾಡಬೇಕು ಎಂಬುದರ ಕುರಿತು ಗಮನವನ್ನು ಹರಿಸುವುದಾದರೇ, ನಿಮಗೆ ಕಡಿಮೆ ಮಟ್ಟದಲ್ಲಿ ಮಂಡಿ ನೋವು ಅಥವಾ ಕೀಲುನೋವುಗಳು ಇದ್ದರೆ ನೀವು ವಿಶೇಷವಾಗಿ ನೇರವಾಗಿ ಅರಿಶಿನ ಸೇವಿಸುವ ಅಗತ್ಯವಿರುವುದಿಲ್ಲ. ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ವಿವಿಧ ರೀತಿಯ ಆಹಾರಗಳನ್ನು ತಯಾರು ಮಾಡುವಾಗ ಅರಿಶಿನವನ್ನು ಬಳಕೆ ಮಾಡಿ. ಒಂದು ವೇಳೆ ನಿಮಗೆ ಹೆಚ್ಚಿನ ನೋವುಗಳು ಕಾಣಿಸಿಕೊಂಡಿದ್ದಲ್ಲಿ, ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಸ್ವಲ್ಪ ಅರಿಶಿಣ ವನ್ನು ಮಿಶ್ರಣ ಮಾಡಿ ಕುಡಿಯಿರಿ. ಇನ್ನೂ ಹೀಗೆ ಅರಿಶಿನ ಹಾಲು ಕುಡಿಯುವ ಸಂದರ್ಭದಲ್ಲಿ ಸಾಧ್ಯವಾದರೆ ಕಾಳು ಮೆಣಸಿನ ಪುಡಿಯನ್ನು(ನಿಮ್ಮ ದೇಹದ ಉಷ್ಣತೆಯ ಮೇಲೆ ನಿರ್ಧಾರ ತೆಗೆದುಕೊಳ್ಳಿ) ಬೆರೆಸಿ ಸೇವನೆ ಮಾಡಿ ಇದರಿಂದ ನಿಮ್ಮ ದೇಹವು ಅರಿಶಿನವನ್ನು ಬಹು ಬೇಗನೆ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಆದರೆ ಸ್ನೇಹಿತರೇ ಇತ್ತೀಚೆಗೆ ಮಾರುಕಟ್ಟೆಗಳಲ್ಲಿ ಹರಿಶಿನದ ಅಂಶಗಳನ್ನು ನೀಡುವಂತಹ ಮಾತ್ರೆಗಳು ಸಿಗುತ್ತವೆ. ನೀವು ಆಹಾರ ಪದ್ಧತಿಯಲ್ಲಿ ಅರಿಶಿನವನ್ನು ಸೇವಿಸಿದರೇ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಆದರೆ ಅರಿಶಿನ ಪೂರಕ ಮಾತ್ರೆಗಳನ್ನು ಸೇವಿಸುವ ಮುನ್ನ ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ, ನಿಮ್ಮ ದೇಹಕ್ಕೆ ಅಗತ್ಯವಾದ ಅರಿಶಿನ ಅಂಶಗಳ ಪ್ರಮಾಣವನ್ನು ತಿಳಿದುಕೊಂಡು ತದನಂತರ ಸೇವನೆ ಮಾಡಿ.

Post Author: Ravi Yadav