ವ್ಹಾ 50 ವರ್ಷದ ಮಹಿಳೆ 7 ಗಂಟೆಗಳ ಕಾಲ ಮ್ಯಾನ್ಹೋಲ್ ಬಳಿ ನಿಂತು ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಹೇಗೆ ಗೊತ್ತಾ??

ವ್ಹಾ 50 ವರ್ಷದ ಮಹಿಳೆ 7 ಗಂಟೆಗಳ ಕಾಲ ಮ್ಯಾನ್ಹೋಲ್ ಬಳಿ ನಿಂತು ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಾವು ಇಂದು ಹೇಳಲು ಹೊರಟಿರುವ ಕಥೆ 50 ವರ್ಷದ ಕಾಂತ ಮೂರ್ತಿ ಕಲಾನ್ ರವರ ಬಗ್ಗೆ, ಇವರ ಕಾರ್ಯ ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ, ಜನರ ಮನಗೆದ್ದಿದೆ. ಎಲ್ಲಾ ನ್ಯೂಸ್ ಚಾನೆಲ್ ಗಳು ಇವರ ಇಂಟರ್ವ್ಯೂ ಪಡೆಯಲು ಮುಗಿಬಿದ್ದಿದ್ದಾರೆ. ಸ್ವತಹ ANI ನ್ಯೂಸ್ ಚಾನೆಲ್ ಕೂಡ ಇವರನ್ನು ವಿಶೇಷವಾಗಿ ಅಭಿನಂದಿಸಿ ಇಂಟರ್ವ್ಯೂ ಮಾಡಿದ್ದಾರೆ. ಯಾಕೆಂದರೆ ಇವರು ಮಾಡಿದ ಮಾನವೀಯತೆ ಕಾರ್ಯ ಆ ರೀತಿ ಇದೆ, ಮುಂಬೈ ನಗರದ ಅಧಿಕಾರಿಗಳು ಕೂಡ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ. ಅಷ್ಟಕ್ಕೂ ಅವರು ಏನು ಮಾಡಿದ್ದಾರೆ? ಇಲ್ಲಿದೆ ಸಂಪೂರ್ಣ ಡೀಟೇಲ್ಸ್.

ಸ್ನೇಹಿತರೇ, ಮುಂಬೈ ನಗರಿಯಲ್ಲಿ ಇದೀಗ ಕೋರೋನ ತಾಂಡವವಾಡುತ್ತಿದೆ, ದೇಶದಲ್ಲಿಯೇ ಅತಿಹೆಚ್ಚು ಸೋಂಕಿತ ಪ್ರಕರಣಗಳನ್ನು ಹೊಂದಿರುವ ಮುಂಬೈ ನಗರದಲ್ಲಿ ಇದೀಗ ಮಳೆಯ ಆರ್ಭಟ ಕೂಡ ಜೋರಾಗಿದೆ. ಇಂತಹ ಸಂದರ್ಭದಲ್ಲಿ ಅತಿ ಹೆಚ್ಚು ವಾಹನ ದಟ್ಟಣೆಯನ್ನು ಹೊಂದಿರುವ ಮುಂಬೈ ನಗರದಲ್ಲಿ ಟ್ರಾಫಿಕ್ ಜಾಮ್ ಸರ್ವೇ ಸಾಮಾನ್ಯ, ಇಲ್ಲಿನ ರಸ್ತೆಗಳು ಯಾವಾಗಲೂ ವಾಹನಗಳ ದಟ್ಟಣೆಯಿಂದ ಕೂಡಿರುತ್ತವೆ. ಕಳೆದ ಕೆಲವು ದಿನಗಳ ಹಿಂದೆ ಮುಂಬೈ ನಗರದಲ್ಲಿ ಭಾರಿ ಮಳೆ ಬಂದಾಗ ರಸ್ತೆಗಳು ನೀರಿನಿಂದ ತುಂಬಿ ಹೋಗಿರುತ್ತವೆ, ಆದರೂ ಕೂಡ ವಾಹನಗಳು ಕಡಿಮೆಯಾಗಿರುವುದಿಲ್ಲ. ಇನ್ನು ಅದೇ ಸಮಯದಲ್ಲಿ ಒಂದು ರಸ್ತೆಯಲ್ಲಿ ಮ್ಯಾನ್ಹೋಲ್ ತೆರೆದಿರುತ್ತದೆ. ನೀರು ತುಂಬಿರುವ ಕಾರಣ ಸವಾರರಿಗೆ ಮ್ಯಾನ್ ಹೋಲ್ ಕಾಣಿಸುವುದಿಲ್ಲ, ಇದರಿಂದ ಕೊಂಚ ಯಾಮಾರಿದರೂ ಪ್ರಾಣಪಕ್ಷಿ ಹಾರಿಹೋಗುತ್ತದೆ ಇಲ್ಲವಾದಲ್ಲಿ, ವಾಹನ ಸಿಲುಕಿಕೊಂಡು ಟ್ರಾಫಿಕ್ ಜಾಮ್ ಉಂಟಾಗುವುದು ಖಚಿತ.

ಇದನ್ನು ಮನಗೊಂಡ 50 ವರ್ಷದ ಕಾಂತ ಮೂರ್ತಿ ಕಲಾನ್ ರವರು, ಸತತ 7 ಗಂಟೆಗಳ ಕಾಲ ರಸ್ತೆಯಲ್ಲಿ ಮ್ಯಾನ್ಹೋಲ್ ಪಕ್ಕದಲ್ಲಿ ನಿಂತು ಕೊಂಡು ನೀರು ಹರಿಯುತ್ತಿದ್ದರೂ ಕೂಡ ಯಾವುದನ್ನೂ ಲೆಕ್ಕಿಸದೆ ಬರುವ ವಾಹನಗಳಿಗೆ ಇಲ್ಲೇ ಮ್ಯಾನ್ಹೋಲ್ ಇದೆ, ಪಕ್ಕಕ್ಕೆ ಸರಿಯಿರಿ ಪಕ್ಕಕ್ಕೆ ಸರಿಯಿರಿ ಎಂದು ಯಾರಿಗೂ ತೊಂದರೆಯಾಗದಂತೆ ನೋಡಿ ಕೊಂಡಿದ್ದಾರೆ. ರಸ್ತೆಯ ಪಕ್ಕದಲ್ಲಿ ಹೂವು ಮಾರಿಕೊಂಡು ಜೀವನ ಸಾಗಿಸುವ ಕಾಂತ ಮೂರ್ತಿ ಕಲಾನ್ ರವರು, ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದು ತಮ್ಮ ಆರೋಗ್ಯವನ್ನು ಕೂಡ ಲೆಕ್ಕಿಸದೇ ವಾಹನಗಳ ಸವಾರರ ಕುರಿತು ಆಲೋಚನೆ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇದನ್ನು ಕಂಡ ಮುಂಬೈ ಅಧಿಕಾರಿಗಳು ಕೊಂಚ ಯಾಮಾರಿದರೂ ನಿಮ್ಮ ಪ್ರಾಣಕ್ಕೆ ತೊಂದರೆಯಾಗುತ್ತಿತ್ತು, ಅಷ್ಟೇ ಅಲ್ಲದೆ ನೀವು ಇತರರ ಪ್ರಾಣವನ್ನು ಉಳಿಸಿದ್ದೀರಾ ನಿಮಗೆ ಧನ್ಯವಾದಗಳು ಎಂದಿದ್ದಾರೆ. ಆದರೆ ಮಳೆ ಬಿದ್ದು 7 ಗಂಟೆಗಳಾದರೂ ಮುಂಬೈ ನಗರದ ಯಾವುದೇ ಕಾರ್ಪೊರೇಷನ್ ಅಧಿಕಾರಿಗಳು ಇತ್ತ ತಿರುಗು ಕೂಡ ನೋಡಿಲ್ಲ ಎಂಬುದೇ ವಿಪರ್ಯಾಸ.