ಭಾರತಕ್ಕೆ ಶೀಘ್ರದಲ್ಲೇ ಗುಡ್ ನ್ಯೂಸ್??ಕರೋನ ಲಸಿಕೆಯಲ್ಲಿ ಮತ್ತೊಂದು ಮಹತ್ವದ ಘಟ್ಟ ತಲುಪಿದ ಭಾರತ !

ಭಾರತಕ್ಕೆ ಶೀಘ್ರದಲ್ಲೇ ಗುಡ್ ನ್ಯೂಸ್??ಕರೋನ ಲಸಿಕೆಯಲ್ಲಿ ಮತ್ತೊಂದು ಮಹತ್ವದ ಘಟ್ಟ ತಲುಪಿದ ಭಾರತ !

ನಮಸ್ಕಾರ ಸ್ನೇಹಿತರೇ, ಇದೀಗ ವಿಶ್ವದ ಎಲ್ಲಾ ರಾಷ್ಟ್ರಗಳು ಕೊರೋನ ಲಸಿಕೆಗಳು ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತಿವೆ. ವಿಶ್ವದ ದಿಗ್ಗಜ ರಾಷ್ಟ್ರಗಳು ಕೂಡ ಕೊರೋನ ಮುಂದೆ ಮಕಾಡೆ ಮಲಗಿವೆ. ವಿಶ್ವದ ಆರ್ಥಿಕತೆ ಮುಗುಚಿದ ದೋಣಿಯಂತಾಗಿದೆ. ಹೀಗಿರುವಾಗ ತಮ್ಮ ದೇಶವೇ ಅಲ್ಲ, ವಿಶ್ವದ ಯಾವುದಾದರೂ ದೇಶ ಲಸಿಕೆ ಕಂಡು ಹಿಡಿದರೂ ಕೂಡ ಸಾಕು ಎಂದು ಪರಿತಪಿಸುತ್ತಿವೆ. ಇದರ ನಡುವೆ ಹಲವಾರು ಲಸಿಕೆಗಳ ಸುದ್ದಿ ಕೇಳಿ ಬಂದಿವೆಯಾದರೂ ಅಧಿಕೃತವಾಗಿ ಎಲ್ಲರೂ ಬಳಸಬಹುದಾದಂತಹ ಲಸಿಕೆಗಳು ಹೊರಬಿದ್ದಿಲ್ಲ, ಇನ್ನು ಸಂಪೂರ್ಣವಾಗಿ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಕೂಡ ಇಲ್ಲ. ಆದರೆ ಕೆಲವು ದಿನಗಳಲ್ಲಿ ಲಸಿಕೆ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇದೆ. ಯಾಕೆಂದರೆ ವಿವಿಧ ದೇಶಗಳಲ್ಲಿ ಹಲವಾರು ಲಸಿಕೆಗಳು ಇದೀಗ ಕೊನೆಯ ಹಂತ ತಲುಪಿವೆ.

ಅದೇ ರೀತಿ ಭಾರತದಲ್ಲಿಯೂ ಕೂಡ 7 ಲಸಿಕೆಗಳು ವಿವಿಧ ಹಂತಗಳ ಕ್ರಿನಿಕಲ್ ಪ್ರಯೋಗಗಳಲ್ಲಿ ಇವೆ. ಈತನ್ಮದ್ಯೆ ಭಾರತೀಯರಲ್ಲಿ ಬಾರಿ ಭರವಸೆ ಮೂಡಿಸಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಡೆಯಿಂದ ಭರ್ಜರಿ ಸಿಹಿ ಸುದ್ದಿಯೊಂದು ಕೇಳಿ ಬಂದಿದೆ. ಹೌದು ಸ್ನೇಹಿತರೇ, ಇದೀಗ ಭಾರತ್ ಬಯೋಟೆಕ್ ಕಂಪನಿಯು ಅಭಿವೃದ್ಧಿ ಪಡಿಸಿರುವ ಲಸಿಕೆಗಳು ಕೊನೆಯ ಹಂತದಲ್ಲಿ ಮಾನವರ (ಹ್ಯೂಮನ್ ಟ್ರಯಲ್ಸ್) ಮೇಲೆ ಪ್ರಯೋಗಗಳು ಆರಂಭಗೊಂಡಿವೆ ಎಂದು ತಿಳಿದು ಬಂದಿದೆ ಹಾಗೂ ಇಂದು 3 ಜನರ ಮೇಲೆ ಕ್ಲಿನಿಕಲ್ ಪ್ರಯೋಗ ಮಾಡಲಾಗಿದ್ದು, ಯಾರೊಬ್ಬರ ಮೇಲು ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಹರಿಯಾಣ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಹರಿಯಾಣದ ರೋಹ್ಟಕ್ನಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಈ ಪ್ರಯೋಗ ಆರಂಭಿಸಲಾಗಿದ್ದು ದೇಶವೇ ಕಾದು ಕುಳಿತಿರುವ ಲಸಿಕೆಯ ಬಗ್ಗೆ ಅನಿಲ್ ವಿಜ್ ರವರು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು, ಭಾರತೀಯರಿಗೆ ಹೊಸ ಭರವಸೆ ಮೂಡಿಸಿದೆ. ಯಾಕೆಂದರೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಹತ್ತು ಲಕ್ಷ ದಾಟಿದೆ. 6 ಲಕ್ಷಕ್ಕೂ ಹೆಚ್ಚು ಜನ ಬಿಡುಗಡೆಯಾಗಿದ್ದರೂ ಕೂಡ ದೇಶದ ಜನರಲ್ಲಿ ಆತಂಕ ಕಡಿಮೆಯಾಗಿಲ್ಲ. ಅಷ್ಟೇ ಅಲ್ಲದೇ, ಇನ್ನು ಹಲವಾರು ಪ್ರದೇಶಗಳಲ್ಲಿ ಕೊರೋನ ತಾಂಡವ ವಾಡುತ್ತಿದೆ. ಈ ಲಸಿಕೆಯನ್ನು ಪ್ರತಿ ಹಂತದಲ್ಲಿಯೂ ಎರಡು ಬಾರಿ ಪ್ರಯೋಗ ಮಾಡಲಾಗುತ್ತಿದ್ದು, ಲಸಿಕೆ ಹಾಕಿದ ನಂತರ, ಅವರನ್ನು ಎರಡು ಮೂರು ದಿನಗಳವರೆಗೆ ದಿನಕ್ಕೆ ಎರಡು ಬಾರಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಹಾಗೂ ಮೇಲ್ವಿಚಾರಣೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಯಾವುದಾದರೂ ಆಗಲಿ ಲಸಿಕೆ ಅಧಿಕೃತವಾಗಿ ಯಶಸ್ವಿಯಾಗಿ ಜನ ಜೀವನ ಸಾಮಾನ್ಯವಾದರೇ ಸಾಕು.