ಗಾಲ್ವಾನ್: ಭಾರತ ಪರ ನಿಂತು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಕರೆ ನೀಡಿದ ಅಮೇರಿಕ ವಿದೇಶಾಂಗ ಕಾರ್ಯದರ್ಶಿ ! ಹೇಳಿದ್ದೇನು ಗೊತ್ತಾ?

ಗಾಲ್ವಾನ್: ಭಾರತ ಪರ ನಿಂತು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಕರೆ ನೀಡಿದ ಅಮೇರಿಕ ವಿದೇಶಾಂಗ ಕಾರ್ಯದರ್ಶಿ ! ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ದೇಶದ ವಿರುದ್ಧ ವಿಶ್ವದ ಬಹುತೇಕ ರಾಷ್ಟ್ರಗಳು ಅಸಮಾಧಾನಗೊಂಡಿವೆ. ಕೆಲವು ದೇಶಗಳನ್ನು ಹೊರತುಪಡಿಸಿದರೇ, ಚೀನಾ ದೇಶಕ್ಕೆ ಸ್ನೇಹಿತರೇ ಇಲ್ಲ. ಇನ್ನು ಭಾರತ ದೇಶವು ಮಾತ್ರ ವಿಶ್ವದ ಬಲಾಢ್ಯ ದೇಶಗಳ ಜೊತೆ ರಾಜತಾಂತ್ರಿಕ ಸಂಬಂಧವನ್ನು ಗಟ್ಟಿ ಮಾಡಿಕೊಂಡಿದೆ.

ವಿಶ್ವದಲ್ಲಿಯೇ ಅಭೂತ ಪೂರ್ವ ಬೆಂಬಲವನ್ನು ಹೊಂದಿರುವ ಭಾರತ ದೇಶದ ಜೊತೆ ಗಡಿ ಖ್ಯಾತೆ ತೆಗೆದಿರುವ ಚೀನಾ ದೇಶಕ್ಕೆ ಬಾರಿ ಮುಖಭಂಗವಾಗುತ್ತಿದೆ. ಯಾಕೆಂದರೆ ಭಾರತ ದೇಶದ ಬಗ್ಗೆ ಎಲ್ಲರಿಗೂ ತಿಳಿದಿರುವ ಕಾರಣ ಚೀನಾ ದೇಶ ಗಡಿಯಲ್ಲಿ ತಪ್ಪೆಸಗಿದೆ ಎಂದು ಎಲ್ಲಾ ರಾಷ್ಟ್ರಗಳು ಹೇಳುತ್ತಿವೆ. ಇದೀಗ ಇದರ ಕುರಿತು ಮಾತನಾಡಿರುವ ಅಮೇರಿಕ ದೇಶದ ವಿದೇಶಾಂಗ ಸಚಿವ ಹೊಸದೊಂದು ಕರೆ ನೀಡಿದ್ದಾರೆ.

ಹೌದು, ಇದೀಗ ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್‌ನಲ್ಲಿ ನಡೆದ ಪ್ರಜಾಪ್ರಭುತ್ವದ ಕುರಿತು ಆನ್‌ಲೈನ್ ಸಮಾವೇಶದಲ್ಲಿ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ರವರು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದ ಗಡಿಯಲ್ಲಿ, ಚೀನಾ ಸೇನೆ ಉದ್ವಿಗ್ನತೆ ಸೃಷ್ಟಿಸಿದೆ. ಅಷ್ಟೇ ಅಲ್ಲದೇ ದಕ್ಷಿಣ ಚೀನಾ ಸಮುದ್ರದಲ್ಲಿ ಖ್ಯಾತೆ ತೆಗೆಯುತ್ತಿದೆ. ವಿಶ್ವದ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ-ಪ್ರೀತಿಯ ಜನರು ಚೀನಾವನ್ನು ಎದುರಿಸಲು ಒಂದಾಗಬೇಕು. ಚೀನಾ ಕರೋನಾ ವೈರಸ್ ಬಗ್ಗೆ ಸುಳ್ಳು ಹೇಳಿದೆ, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಹಾಯ ಕೂಡ ಮಾಡಿತು ಎಂದರು.