ಈ 3 ಆಟಗಾರರಿಗೆ ಬೌಲಿಂಗ್ ಮಾಡಲು ಕಠಿಣ ಎಂದ ರಶೀದ್ ಖಾನ್ ! ಒಬ್ಬ ಭಾರತೀಯ ಕೂಡ ಆಯ್ಕೆ ! ಆಯ್ಕೆಯಾದ ಆಟಗಾರರು ಯಾರು ಗೊತ್ತಾ ?

ಈ 3 ಆಟಗಾರರಿಗೆ ಬೌಲಿಂಗ್ ಮಾಡಲು ಕಠಿಣ ಎಂದ ರಶೀದ್ ಖಾನ್ ! ಒಬ್ಬ ಭಾರತೀಯ ಕೂಡ ಆಯ್ಕೆ ! ಆಯ್ಕೆಯಾದ ಆಟಗಾರರು ಯಾರು ಗೊತ್ತಾ ?

ನಮಸ್ಕಾರ ಸ್ನೇಹಿತರೇ, ಆಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ರವರ ಕುರಿತು ನಿಮಗೆಲ್ಲರಿಗೂ ತಿಳಿದೇ ಇದೆ. ಅದ್ಭುತವಾಗಿ ಲೆಗ್ ಸ್ಪಿನ್ನಿಂಗ್ ಹಾಗೂ ಗೂಗ್ಲಿ ಬಾಲ್ ಗಳ ಮೂಲಕ ವಿಕೆಟ್ ಪಡೆಯುವ ಕಲೆಯನ್ನು ಕರಗತ ಮಾಡಿ ಕೊಂಡಿದ್ದಾರೆ.

ಇವರ ಜೀವನವನ್ನು ಬದಲಿಸಿದ್ದು ಐಪಿಎಲ್ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ, ಐಪಿಎಲ್ ನಲ್ಲಿ ಪ್ರತಿ ಬಾರಿಯೂ ಉತ್ತಮ ಪ್ರದರ್ಶನ ನೀಡುವ ರಶೀದ್ ಖಾನ್ ರವರು ಇದೀಗ ಐಪಿಎಲ್ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡಲು ಕಠಿಣ ಎಂದು ಭಾಸವಾಗುವ ಮೂವರು ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಒಬ್ಬ ಭಾರತೀಯ ಕ್ರಿಕೆಟ್ ಆಟಗಾರ ಕೂಡ ಸೇರಿಕೊಂಡಿದ್ದು, ಭಾರತದ ಶ್ರೇಷ್ಠ ಬ್ಯಾಟ್ಸಮನ್ ಗಳಾಗಿರುವ ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ರವರು ಈ ಲಿಸ್ಟ್ ನಲ್ಲಿ ಕಾಣಿಸಿಕೊಂಡಿಲ್ಲ.

ಹೌದು ಸ್ನೇಹಿತರೇ, ರಶೀದ್ ಖಾನ್ ರವರು ಮೊದಲನೇ ಆಟಗಾರನಾಗಿ ವೆಸ್ಟ್ ಇಂಡೀಸ್ ತಂಡದ ಕ್ರಿಕೆಟ್ ಧಾಂಡಿಗ ಕ್ರಿಸ್ ಗೇಲ್ ಅವರನ್ನು ಆಯ್ಕೆ ಮಾಡಿ, ಅವರಿಗೆ ಬೌಲಿಂಗ್ ಮಾಡುವುದು ಬಹಳ ಕಷ್ಟಕರವಾದ ಸಂಗತಿ. ಇನ್ನು ಅದೇ ತಂಡದ ಆಂಡ್ರೆ ರೆಸೆಲ್ ರವರಿಗೆ ಬೌಲಿಂಗ್ ಮಾಡುವುದು ಬಹಳ ಕಷ್ಟಕರವಾದ ಸಂಗತಿ ಇವರನ್ನು ಹೊರತು ಪಡಿಸಿದರೇ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪರ ಬ್ಯಾಟ್ಸ್ ಮ್ಯಾನ್ ಹಾರ್ದಿಕ್ ಪಾಂಡ್ಯ ರವರಿಗೆ ಬೌಲಿಂಗ್ ಮಾಡುವುದು ಬಹಳ ಕಷ್ಟಕರವಾದ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಲಿಸ್ಟ್ ನ ಆಯ್ಕೆಯ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.