ಆಫ್ರಿಕಾ ಹಾಗೂ ಭಾರತ ತಂಡದ ಆಟಗಾರರನ್ನು ಸೇರಿಸಿ ನೆಚ್ಚಿನ ಕ್ರಿಕೆಟ್ ತಂಡ ಕಟ್ಟಿದ ಕೊಹ್ಲಿ, ಎಬಿಡಿ ! ಸ್ಥಾನ ಪಡೆದ ಆಟಗಾರರು ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ರವರು, ಭಾರತ ಹಾಗೂ ಸೌತ್ ಆಫ್ರಿಕಾ ತಂಡದ ಕ್ರಿಕೆಟಿಗರನ್ನು ಸೇರಿಸಿ ಒಟ್ಟಾಗಿ ತಮ್ಮ ನೆಚ್ಚಿನ ಕ್ರಿಕೆಟ್ ತಂಡವನ್ನು ಕಟ್ಟಿದ್ದಾರೆ. ಈ ಇಬ್ಬರು ಸೇರಿಕೊಂಡು ಕಟ್ಟಿರುವ ತಂಡದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ, ಸಾಧ್ಯವಾದರೆ ಈ ಎರಡು ದೇಶಗಳ ನಡುವಿನ ಕ್ರಿಕೆಟ್ ಆಟಗಾರರನ್ನು ಗಮನದಲ್ಲಿಟ್ಟುಕೊಂಡು ನಿಮ್ಮ
ನೆಚ್ಚಿನ ತಂಡವನ್ನು ರಚಿಸಿ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ. (ಉತ್ತಮ ತಂಡವನ್ನು ನಮ್ಮ ಪೇಜ್ ನಲ್ಲಿ / ವೆಬ್ಸೈಟ್ ನಲ್ಲಿ ಪ್ರಕಟಣೆ ಮಾಡುತ್ತೇವೆ.)

ವಿಶೇಷ ಸೂಚನೆ ಇದು ಸಾರ್ವಕಾಲಿಕ ಶ್ರೇಷ್ಠ ತಂಡ ಅಲ್ಲ, ಬದಲಾಗಿ ಈ ಇಬ್ಬರು ಆಟಗಾರರ ನೆಚ್ಚಿನ ತಂಡ !

ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ರವರ ತಂಡದಲ್ಲಿ ಆರಂಭಿಕ ಆಟಗಾರರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಎಬಿ ಡಿವಿಲಿಯರ್ಸ್ ರವರು ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡಿ ಕೊಂಡರು. ಇನ್ನು ವಿರಾಟ್ ಕೊಹ್ಲಿ ರವರು ರೋಹಿತ್ ಶರ್ಮ ರವರನ್ನು ಆಯ್ಕೆ ಮಾಡಿದರು.

ಇನ್ನುಳಿದಂತೆ ಮೂರನೇ ಹಾಗೂ ನಾಲ್ಕನೇ ಕ್ರಮಾಂಕಕ್ಕೆ ಇವರಿಬ್ಬರೂ ತಮ್ಮನ್ನು ಆಯ್ಕೆ ಮಾಡಿಕೊಂಡು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಮಾಡುವುದಾಗಿ ಘೋಷಣೆ ಮಾಡಿಕೊಂಡರು.

ಇದಾದ ಬಳಿಕ ಆಲ್ರೌಂಡರ್ ಗಳ ಸ್ಥಾನದಲ್ಲಿ ಇಬ್ಬರೂ ಒಮ್ಮತದ ಅಭಿಪ್ರಾಯದಿಂದ ಜಾಕ್ ಕಾಲಿಸ್ ಹಾಗೂ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರನ್ನು ಆಯ್ಕೆ ಮಾಡಿ, ವಿಕೆಟ್ ಕೀಪರ್ ಕೋಟಾದಲ್ಲಿ
ಧೋನಿಯನ್ನು ಆಯ್ಕೆ ಮಾಡಿದರು ಹಾಗೂ ನಾಯಕನ ಸ್ಥಾನವನ್ನು ಧೋನಿ ಗೆ ನೀಡುವುದಾಗಿ ಹೇಳಿದರು. ಇದೇ ಸಮಯದಲ್ಲಿ ಮಾತನಾಡಿದ ಎಬಿ ಡಿವಿಲಿಯರ್ಸ್ ರವರು, ನಾನು ಧೋನಿ ಅವರ ತಂಡದಲ್ಲಿ ಎಂದಿಗೂ ಆಡಿಲ್ಲ, ಆದರೆ ಅವರನ್ನು ಬಹಳ ಗೌರವಿಸುತ್ತೇನೆ ಎಂದರು.

ಇನ್ನುಳಿದಂತೆ ಬೌಲರ್ಗಳ ಸ್ಥಾನದಲ್ಲಿ ವಿರಾಟ್ ಕೊಹ್ಲಿ ರವರು ತಮ್ಮ ನೆಚ್ಚಿನ ಆಟಗಾರರನ್ನು ಆಯ್ಕೆ ಮಾಡಿ ಎಂದಾಗ ಯುಜುವೇಂದ್ರ ಚಹಲ್ ಹಾಗೂ ಜಸ್ಪ್ರೀತ್ ಬುಮ್ರಾ ರವರನ್ನು ಆಯ್ಕೆ ಮಾಡಿಕೊಂಡರು. ಎಬಿ ಡಿವಿಲಿಯರ್ಸ್ ರವರು ಡೇಲ್ ಸ್ಟೇನ್ ಹಾಗೂ ಕಾಗಿಸೋ ರಬಡಾ ರವರನ್ನು ಆಯ್ಕೆ ಮಾಡಿ, ಇದು ನಮ್ಮ ನೆಚ್ಚಿನ ತಂಡ ಎಂದು ಹೇಳಿದರು. ಒಟ್ಟಾರೆಯಾಗಿ ತಂಡ ಈ ಕೆಳಗಿನಂತಿಂದ್ದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

ಈ ಇಬ್ಬರು ನೆಚ್ಚಿನ ಆಟಗಾರ ತಂಡ: ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಯುವರಾಜ್ ಸಿಂಗ್, ಜಾಕ್ ಕಾಲಿಸ್, ಎಂ ಸ್ ಧೋನಿ(WC & C), ಯುಜುವೇಂದ್ರ ಚಹಲ್,ಡೇಲ್ ಸ್ಟೇನ್, ಕಾಗಿಸೋ ರಬಡಾ, ಜಸ್ಪ್ರೀತ್ ಬುಮ್ರಾ

Post Author: Ravi Yadav