ಹ್ಯಾಟ್ಸಾಫ್: ಕೂಲಿ ಮಾಡುತ್ತಿರುವವರಿಗೆ ಉಚಿತ ದಿನಸಿ ವಸ್ತುಗಳನ್ನು ನೀಡಲು ಹೋದಾಗ ಅಲ್ಲಿದ್ದ ಜನರು ಹೇಳಿದ್ದೇನು ಗೊತ್ತಾ?? ಈ ಮನೋಭಾವ ಎಲ್ಲರಿಗೂ ಬಂದರೇ ಎಷ್ಟು ಚಂದ ಅಲ್ಲವೇ??

ಹ್ಯಾಟ್ಸಾಫ್: ಕೂಲಿ ಮಾಡುತ್ತಿರುವವರಿಗೆ ಉಚಿತ ದಿನಸಿ ವಸ್ತುಗಳನ್ನು ನೀಡಲು ಹೋದಾಗ ಅಲ್ಲಿದ್ದ ಜನರು ಹೇಳಿದ್ದೇನು ಗೊತ್ತಾ?? ಈ ಮನೋಭಾವ ಎಲ್ಲರಿಗೂ ಬಂದರೇ ಎಷ್ಟು ಚಂದ ಅಲ್ಲವೇ??

ನಮಸ್ಕಾರ ಸ್ನೇಹಿತರೇ, ಇದೀಗ ಚೀನಾ ವೈರಸ್ನಿಂದ ಭಾರತ ದೇಶ ಲಾಕ್ ಡೌನ್ ಆಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಾಗಿ ನಿಂತು ತಮ್ಮ ಕೈಲಾದಷ್ಟು ಜನರಿಗೆ ಸಹಾಯ ಮಾಡಬೇಕು.

ಆದರೆ ಇಲ್ಲಿನ ವಿಪರ್ಯಾಸ ಏನೆಂದರೇ ಕೂಲಿ ಕಾರ್ಮಿಕರಿಗೆ ಸಹಾಯ ಮಾಡುವುದು ಬಿಡಿ, ಅವರಿಗಾಗಿ ಸರ್ಕಾರ, ಪ್ರತಿಷ್ಠಿತ ಕಂಪನಿಗಳು ಹಾಗೂ ನೂರಾರು ಜನ ತಮ್ಮ ಕೈಲಾದಷ್ಟು ಅಗತ್ಯ ವಸ್ತುಗಳು ಹಾಗೂ ಆಹಾರ ಸರಬರಾಜು ಮಾಡುತ್ತಿದ್ದರೇ ಕೆಲವರು ತಮ್ಮ ಬಳಿ ಸಾಕಷ್ಟು ಹಣವಿದ್ದರೂ ಅಥವಾ ಅವರ ಬಳಿ ಸಾಕಾಗುವಷ್ಟು ಅಗತ್ಯ ವಸ್ತುಗಳು ಇದ್ದರೂ ಕೂಡ ಉಚಿತವಾಗಿ ಸಿಗುವುದನ್ನು ಯಾಕೆ ಬಿಡಬೇಕು ಎಂದು ಸಿಕ್ಕಷ್ಟು ಬಾಚಿ ಕೊಳ್ಳುತ್ತಿದ್ದಾರೆ.

ಇದಕ್ಕೆ ರಾಜ್ಯದಲ್ಲಿ ಹಲವಾರು ನಿದರ್ಶನಗಳು ಸಿಕ್ಕಿವೆ, ಆದರೆ ಇಲ್ಲಿ ಕೆಲವು ಯುವಕರು ತಮ್ಮ ಕೈಲಾದಷ್ಟು ಜನರಿಗೆ ಸಹಾಯ ಮಾಡೋಣ ಎಂದು ಒಂದು ಗ್ರಾಮಕ್ಕೆ ತೆರಳಿ ಅಲ್ಲಿರುವ ಕೂಲಿ ಕಾರ್ಮಿಕರನ್ನು ನಿಮಗೆ ಅಗತ್ಯ ವಸ್ತುಗಳು ನೀಡಲು ಪಟ್ಟಿ ಮಾಡಿಕೊಳ್ಳುತ್ತಿದ್ದೇವೆ ಆದರೆ ನೀವು ಬೇಡ ಎನ್ನುತ್ತಿದ್ದೀರಾ ಯಾಕೆ ಎಂದು ಪ್ರಶ್ನೆ ಮಾಡುತ್ತಾರೆ(ಕೆಳಗೆ ಲಗತ್ತಿಸಲಾಗಿರುವ ವಿಡಿಯೋ ನೋಡಿ).

ಅದಕ್ಕೆ ಅಲ್ಲಿರುವ ಕೂಲಿ ಕಾರ್ಮಿಕರು ನಾವು ಕೂಲಿ ಮಾಡುತ್ತಿರಬಹುದು, ಆದರೆ ದಿನಕ್ಕೆ ಎರಡು ಹೊತ್ತು ಊಟ ಮಾಡಲು ಅಗತ್ಯವಾದ ವಸ್ತುಗಳು ನಮ್ಮ ಬಳಿ ಇದೆ. ನೀವು ಮತ್ಯಾರಾದರೂ ಇಲ್ಲದವರಿಗೆ ನೀಡಿ ಎಂದು ಮಾನವೀಯತೆ ಮೆರೆದಿದ್ದಾರೆ. ಒಂದು ಕಡೆ ಬಡವರಿಗೆ ನೀಡಬೇಕಾದ ಪಡಿತರದಲ್ಲಿಯೂ ಹಣ ವಸೂಲಿ ಮಾಡಿ, ಕಡಿಮೆ ತೂಕ ನೀಡಿ ಮೋಸ ಮಾಡುತ್ತಿರುವ ಜನರ ನಡುವೆ ಇಂತಹ ಮಾನವೀಯತೆ ತೋರಿಸುತ್ತಿರುವ ಜನರು ಮತ್ತೊಂದೆಡೆ, ಇವರಿಗೆ ನಮ್ಮ ತಂಡದ ಪರವಾಗಿ ಅನಂತ ಅನಂತ ಧನ್ಯವಾದಗಳು.